ಗುಳೇದಗುಡ್ಡದಲ್ಲಿ ಶವದ ಸೋಗಿನ ಮೆರವಣಿಗೆ

| Published : Mar 15 2025, 01:02 AM IST

ಸಾರಾಂಶ

ಗುಳೇದಗುಡ್ಡ ಪಟ್ಟಣದಲ್ಲಿ ಶುಕ್ರವಾರ ಹೆಣದ ಜೇರಕಲ್ ಅವರ ನಾಟ್ಯ ಸಂಘದಿಂದ ಚೌಬಜಾರ್‌ದಿಂದ, ಕಂಠಿ ಪೇಟೆಯಲ್ಲಿ ನಗ್ಲಿ ಪೇಟೆ ಮೇಳದವರಿಂದ ಶವದ ರೂಪಕದ ಮೆರವಣಿಗೆ ನಡೆದವು.

ಕನ್ನಡ ಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಆರಂಭವಾದ ಹೋಳಿ ಸಂಭ್ರಮಾಚರಣೆ ಸಂಜೆಯವರೆಗೂ ನಡೆಯಿತು.

ಸಂಜೆ 5 ಗಂಟೆಗೆ ಹೆಣದ ಜೇರಕಲ್ ಅವರ ನಾಟ್ಯ ಸಂಘದಿಂದ ಚೌಬಜಾರ್‌ದಿಂದ, ಕಂಠಿ ಪೇಟೆಯಲ್ಲಿ ನಗ್ಲಿ ಪೇಟೆ ಮೇಳದವರಿಂದ ಶವದ ರೂಪಕದ ಮೆರವಣಿಗೆ ಆರಂಭವಾಯಿತು. ಹೆಣದ ಪ್ರತಿಕೃತಿ ಮುಂದೆ ಮಹಿಳೆಯರು ವೇಷದಲ್ಲಿದ್ದವರು ಎದೆ ಬಡಿದುಕೊಂಡು ಅಳುವ ದೃಶ್ಯ ಆಕರ್ಷಿಸಿತು. ಖಣಿ ವಾದನ, ಹಲಗೆ ಮೇಳದವರು ಸಾಥ್ ನೀಡಿದರು. ಜೇರಕಲ್ ನಾಟ್ಯ ಸಂಘದ ಹೆಣದ ವೇಷದಲ್ಲಿದ್ದ ರಮೇಶ ಯಂಡಿಗೇರಿ, ಅಳುವ ವೇಷದ ಮಹಿಳೆಯರ ವೇಷದಲ್ಲಿದ್ದ ವೀರೇಶ ದಿಂಡಿ, ಈರಣ್ಣ ಯಂಡಿಗೇರಿ ಕಾಮಣ್ಣನ ಹಲವು ಸಂದರ್ಭ ಹೇಳಿ ರೋಧಿಸುತ್ತಿರುವುದು ಮೆಚ್ಚುಗೆ ಗಳಿಸಿತು. ನಗ್ಲಿಪೇಟೆಯ ಕೃಷ್ಣ ಹಾಸಿಲಕರ ಹೆಣದ ಸೋಗಿನಲ್ಲಿ ಇದ್ದರೆ, ಸಾಮಾಜಿಕ ಹಿರಿಯ ಕಾರ್ಯಕರ್ತ ಅಶೋಕ ಹೆಗಡಿ, ಹನುಮಂತ ಗಿರಿಸಾಗರ, ವಿಜಯ ಸೂಡಿ, ಅಪ್ಪು ಗಾಜಿ, ಬಾಲಾಜಿ, ಈರಣ್ಣ ಹೆಬ್ಬಾಳ ಮಹಿಳೆಯರ ಸೋಗಿನಲ್ಲಿ ಜನರನ್ನು ರಂಜಿಸಿದರು. ಮೆರವಣಿಗೆಯಲ್ಲಿ ಎಂ.ಪಿ. ನೀಲಕಂಠಮಠ, ಈರಣ್ಯಪ್ಪ ಕಲಕೇರಿ ಇತರರಿದ್ದರು.