ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಕೃಷಿ ಚಟುವಟಿಕೆ

| Published : May 22 2025, 01:36 AM IST

ಸಾರಾಂಶ

ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದ ರೈತರು ಬಿರುಸಿನ ಕೃಷಿ ಚಟುವಟಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹೋಬಳಿ ವ್ಯಾಪ್ತಿಯಲ್ಲಿ ನಿತ್ಯ ಮಳೆಯಾಗುತ್ತಿದ್ದು ರೈತರು ಬಿರುಸಿನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ನಿತ್ಯ ಮಳೆಯಾಗುತ್ತಿರುವುದರಿಂದ ನದಿ ತೋಡುಗಳಲ್ಲಿ ನೀರಿನ ಪ್ರಮಾಣ ಏರಿಕೆ ಯಾಗಿದೆ. ತೋಟಗಳಲ್ಲಿ ತೇವಾಂಶವಿದ್ದು ರೈತರು ರಾಸಾಯನಿಕ ಗೊಬ್ಬರಗಳನ್ನು ಕಾಫಿ ತೋಟಗಳಿಗೆ ಹಾಕುತ್ತಿದ್ದಾರೆ.ಅಲ್ಲಲ್ಲಿ ಬತ್ತದ ಬಿತ್ತನೆಗೆ ಸಿದ್ಧತೆಗಳಾಗುತ್ತಿವೆ. ಸಮೀಪದ ಕುಯ್ಯಂಗೇರಿ ಗ್ರಾಮದಲ್ಲಿ ಗದ್ದೆ ಉಳುಮೆಗೆ ತೊಡಗಿರುವ ದೃಶ್ಯ ಕಂಡು ಬಂತು. ಇತ್ತೀಚಿನ ಮಳೆಯಿಂದಾಗಿ

ಭೂಮಿ ಹದಗೊಂಡಿದೆ. ಉಳುಮೆಗೆ ಇದು ಸಕಾಲ ಈಗ ಉಳುಮೆ ಮಾಡುವುದರಿಂದ ಹುಲ್ಲು ಹಾಗೂ ಕಳೆ ಗಿಡಗಳು ನಾಶವಾಗಿ ಬಿತ್ತನೆ ಮಾಡಲು ಅನುಕೂಲವಾಗಲಿದೆ ಎಂದು ಹಳೆಯ ಸಾಂಪ್ರದಾಯಿಕ ಪದ್ಧತಿಯಂತೆ ಸಾವಯವ ಗೊಬ್ಬರ ಹಾಗೂ ದನಗಳನ್ನು ಬಳಸಿ ಬೇಸಾಯ ಮಾಡುತ್ತಿರುವ ರೈತ ಕುಯ್ಯಂಗೇರಿ ಯ ಚಿಲ್ಲನ ಕುಮಾರಪ್ಪ ಅಭಿಪ್ರಾಯ ಪಟ್ಟರು.