ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯಾರ್ಥಿ ಹಂತದಲ್ಲಿಯೇ ಉತ್ತಮ ಕ್ರೀಡಾಪಟುಗಳಾಗಿ ಬೆಳೆಯುವ ಮನೋಭಾವ ಎಲ್ಲರಲ್ಲಿಯೂ ಮೂಡಬೇಕು. ಕ್ರೀಡೆಯನ್ನು ಅವಲಂಬಿಸುವುದರಿಂದ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್ ಅಭಿಪ್ರಾಯಪಟ್ಟರು.ತಾಲೂಕಿನ ವಿ.ಸಿ.ಫಾರಂನ ಕೃಷಿ ಮಹಾ ವಿದ್ಯಾಲಯ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ (ಮಂಡ್ಯ ಉತ್ತರ ವಲಯ), ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ನಡೆದ ೨೦೨೫-೨೬ನೇ ಸಾಲಿನ ಮಂಡ್ಯ ಉತ್ತರ ವಲಯ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆಗಳ ೧೪ ವರ್ಷದೊಳಗಿನ ಬಾಲಕ ಬಾಲಕಿಯರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೌಕರ್ಯಗಳ ಕೊರತೆ ನಡುವೆಯೂ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರಗಳೂ ಹಲವು ಸೌಲಭ್ಯಗಳನ್ನು ಒದಗಿಸಿವೆ. ಅವುಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸಾಧನೆ ಮಾಡುವಂತೆ ಸಲಹೆ ನೀಡಿದರು.ಗಾಣದಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ನಂದೀಶ್ ಮಾತನಾಡಿ, ಕಲಿಕೆಯೊಂದೇ ವಿದ್ಯಾರ್ಥಿಗಳಿಗೆ ಮುಖ್ಯವಾಗಬಾರದು, ಶಿಕ್ಷಣದ ಜೊತೆಗೆ ಕ್ರೀಡೆ-ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಪ್ರತಿಭೆಯನ್ನು ಪ್ರದರ್ಶಿಸಬೇಕು. ಶಿಕ್ಷಣದಲ್ಲಿ ಯಶಸ್ಸು ಕಾಣಲಾಗದಿದ್ದರೂ ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕವೂ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು ಎಂದರು.
ನಂತರ, ಲಾಂಗ್‌ಜಂಪ್, ಹೈಜಂಪ್, ೧೦೦ ಮೀಟರ್ ಓಟ, ಖೋ-ಖೋ, ಕಬಡ್ಡಿ, ೬೦೦ ಮೀಟರ್ ಓಟ, ಶಾಟ್‌ಫುಟ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಬಿಇಒ ಕೆ.ಟಿ.ಸೌಭಾಗ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಚಿಕ್ಕೇಗೌಡ, ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಎಂ.ಎಸ್.ವಿಜಯಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಆರ್.ಶಿವರಾಮು, ಸಂಘದ ಕೆ.ಸಿ.ರವಿಶಂಕರ್, ಎ.ಮಾದೇಶ್, ಕೆ.ಎಸ್.ರಾಮಸಂಜೀವಯ್ಯ, ಕೆ.ಎನ್.ಕುಮಾರ್, ಶ್ರೀನಿವಾಸ್, ಮಾದೇಶ್, ನಾಗವೇಣಿ, ಮುಖ್ಯ ಶಿಕ್ಷಕ ಪ್ರಸನ್ನ ಭಾಗವಹಿಸಿದ್ದರು.
ಜಿಲ್ಲಾಮಟ್ಟದ ವಿಜ್ಞಾನ ತರಂಗ ಸ್ಪರ್ಧೆಗೆ ೨೬೩೨ ಮಾದರಿಗಳು: ದಿವ್ಯಶ್ರೀಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ ಆ.೩೦ರಂದು ನಡೆದ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆಯಲ್ಲಿ ೫,೨೬೪ ವಿದ್ಯಾರ್ಥಿಗಳು ಭಾಗವಹಿಸಿ ೨,೬೩೨ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಾಯಿತು ಎಂದು ಅಧ್ಯಾಪನ ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ಎಂ.ಜಿ.ದಿವ್ಯಶ್ರೀ ತಿಳಿಸಿದರು.ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಾಗಮಂಗಲ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆ- ಪ್ರಥಮ, ಶ್ರೀರಂಗಪಟ್ಟಣ ಬಿಜಿಎಸ್ ಬಾಲ ಜಗತ್ ಆಂಗ್ಲಮಾಧ್ಯಮ ಶಾಲೆ- ದ್ವಿತೀಯ, ಕೆ.ಆರ್.ಪೇಟೆ ಗ್ರಾಮ ಭಾರತಿ ಆಂಗ್ಲ ಮಾಧ್ಯಮ ಶಾಲೆ- ತೃತೀಯ ಬಹುಮಾನ ಗಳಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರೌಢಶಾಲೆ ವಿಭಾಗದಲ್ಲಿ ನಾಗಮಂಗಲ ಮಾಡೆಲ್ ಪಬ್ಲಿಕ್ ಶಾಲೆ- ಪ್ರಥಮ, ಶ್ರೀರಂಗಪಟ್ಟಣ ಸೆಂಡ್ ಅನ್ನಾಸ್ ಆಂಗ್ಲ ಮಾಧ್ಯಮ ಶಾಲೆ- ದ್ವಿತೀಯ, ಮಳವಳ್ಳಿ ಆದರ್ಶ ವಿದ್ಯಾಲಯ- ತೃತೀಯ. ಗ್ರಾಮೀಣಾಭಿವೃದ್ಧಿಗಾಗಿ ಹ್ಯಾಕಥಾನ್ ವಿಭಾಗದಲ್ಲಿ ೭೫ ತಂಡದೊಂದಿಗೆ ೭೫೦ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್- ಪ್ರಥಮ, ಕಾರ್ಮೆಲ್ ಕಾನ್ವೆಂಟ್ ದ್ವಿತೀಯ, ಶ್ರೀರಂಗಪಟ್ಟಣ ಬಿಜಿಎಸ್ ಬಾಲ ಜಗತ್ ಆಂಗ್ಲ ಮಾಧ್ಯಮ ಶಾಲೆ ತೃತೀಯ ಬಹುಮಾನ ಪಡೆದಿದೆ. ಟೆಕ್ಲೇಟಿಕ್ ವಿಭಾಗದಲ್ಲಿ ೯೬ ತಂಡದೊಂದಿಗೆ ೯೬೦ ವಿದ್ಯಾರ್ಥಿಗಳು ಭಾಗವಹಿಸಿದ್ದು, ಗೀತಾಂಜಲಿ ಹೈಯರ್ ಪ್ರೈಮರಿ ಶಾಲೆ- ಪ್ರಥಮ, ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆ ದ್ವಿತೀಯ, ಕೆಪಿಎಸ್ ಅಕೇಶ್ವರ ನಗರ ತೃತೀಯ. ಕಾವ್ಯ ವಿಜ್ಞಾನ ವಿಭಾಗದಲ್ಲಿ ೧೫೦ ಶಿಕ್ಷಕರು ಭಾಗವಹಿಸಿದ್ದು, ಕನ್ನಡ ವಿಭಾಗದಲ್ಲಿ ಶ್ರೀಧರ್ ಗಣಾಚಾರಿ- ಪ್ರಥಮ, ಸಿ.ಎನ್.ಭಾಗ್ಯಲಕ್ಷ್ಮೀ- ದ್ವಿತೀಯ, ಕೆ.ಬಿ.ಧರ್ಮೇಗೌಡ- ತೃತೀಯ. ಆಂಗ್ಲ ವಿಭಾಗದಲ್ಲಿ ಎಸ್.ಶ್ರೀವಿದ್ಯಾ-ಪ್ರಥಮ, ಎಂ.ಎಸ್.ಸುಮಯ್ಯ-ದ್ವಿತೀಯ, ಎಚ್.ಎಂ.ಚತುರ್ಥಿ- ತೃತೀಯ ಬಹುಮಾನ ಗಳಿಸಿದ್ದಾರೆ.ವಿಜ್ಞಾನ ನಾಟಕ ವಿಭಾಗದಲ್ಲಿ ೧೧೦ ತಂಡಗಳೊಂದಿಗೆ ೮,೨೨೪ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಶ್ವಮಾನವ ಶಾಲೆ-ಪ್ರಥಮ, ಗೀತಾಂಜಲಿ ಹಿರಿಯ ಪ್ರಾಥಮಿಕ ಶಾಲೆ- ದ್ವಿತೀಯ, ನಾಗಮಂಗಲ ಕುವೆಂಪು ಮೆಮೋರಿಯಲ್ ಶಾಲೆ- ತೃತೀಯ. ಅಧ್ಯಾಪನಾ ಬೆಸ್ಟ್ ಮಾಡೆಲ್ ವಿಶೇಷ ಬಹುಮಾನಕ್ಕೆ ನಾಗಮಂಗಲ ಬಿಜಿಎಸ್ ಪಬ್ಲಿಕ್ ಶಾಲೆ ಪಾತ್ರವಾಗಿದೆ ಎಂದರು.
ವಿಜ್ಞಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ೩೧೦ ವಿದ್ಯಾರ್ಥಿಗಳನ್ನು ಇಸ್ರೋ ಮ್ಯೂಸಿಯಂ, ವಿಶ್ವೇಶ್ವರಯ್ಯ ಮ್ಯೂಸಿಯಂಗೆ ೧೨೦ ವಿದ್ಯಾರ್ಥಿಗಳನ್ನು ಉಚಿತ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.ಗೋಷ್ಠಿಯಲ್ಲಿ ಜಿ.ಟಿ.ಪ್ರವೀಣ್‌ಕುಮಾರ್, ಕೆ.ಆರ್.ಪೃಥ್ವಿ ಹಾಜರಿದ್ದರು.