‘ಜಿ.ಎಂ. ಅರೆನಾ’ದಲ್ಲಿ ೨೦ನೇ ವಾರ್ಷಿಕ ಕ್ರೀಡಾಕೂಟ ಸಂಪನ್ನ

| Published : Nov 10 2024, 01:42 AM IST

ಸಾರಾಂಶ

ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ ಸುಸಜ್ಜಿತ ಕ್ರೀಡಾಂಗಣ ಜಿ.ಎಂ. ಅರೆನಾದಲ್ಲಿ ೨೦ನೇ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ ಸುಸಜ್ಜಿತ ಕ್ರೀಡಾಂಗಣ ಜಿ.ಎಂ. ಅರೆನಾದಲ್ಲಿ ೨೦ನೇ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು.

ಉಡುಪಿ ಜಿಲ್ಲೆಯ ಪ್ರೊಬೇಷನರಿ ಡಿವೈಎಸ್‌ಪಿ ಗೀತಾ ಪಾಟೀಲ್ ಕ್ರೀಡಾ ಜ್ಯೋತಿಯನ್ನು ಬೆಳಗಿ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿ, ಕ್ರೀಡೆಯು ಮಕ್ಕಳಲ್ಲಿ ಉತ್ತಮ ಮೌಲ್ಯವನ್ನು ಬೆಳೆಸಿ ಅತ್ಯುತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ಸೋತವರು ಯಾವುದೇ ಕಾರಣಕ್ಕೂ ಪ್ರಯತ್ನವನ್ನು ಬಿಡದೆ ಮುನ್ನಡೆಯಬೇಕು ಎಂದರು.

ಸಂಜೆ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಯುನೈಟೆಡ್ ಅಥ್ಲೆಟಿಕ್ಸ್‌ನ ಕೋಚ್ ಶಾಲಿನಿ ರಾಜೇಶ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕ್ರೀಡಾಕೂಟ ಮಕ್ಕಳಿಗೆ ವಿದ್ಯಾರ್ಥಿ ಜೀವನದಲ್ಲಿ ಬಹು ನಿರೀಕ್ಷೆಯ ಸಂತೋಷದ ದಿನವಾಗಿದೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆಯನ್ನು ಕೊಡಬೇಕು. ಆರೋಗ್ಯಯುತ ಆಹಾರದ ಸೇವನೆ, ನಿರಂತರ ದೈಹಿಕ ಚಟುವಟಿಕೆಗೆ ಒತ್ತನ್ನು ನೀಡಿ ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಸಾಧಕರನ್ನು ನಮ್ಮ ಆದರ್ಶ ವ್ಯಕ್ತಿಯನ್ನಾಗಿ ತೆಗೆದುಕೊಳ್ಳಬೇಕು ಮತ್ತು ನಮ್ಮ ಜೀವನದ ಮೊದಲ ಹೆಜ್ಜೆ ಯಾವಾಗಲೂ ಅತ್ಯುತ್ತಮವಾಗಿರಬೇಕೆಂದರು.ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಮಾತನಾಡಿ, ನಮ್ಮ ಶರೀರ ಮತ್ತು ಮನಸ್ಸಿನ ಕುರಿತು ನಮಗಿರುವ ಕಾಳಜಿಯೇ ನಮ್ಮ ಸಂತೋಷ ಮತ್ತು ಯಶಸ್ಸಿನ ಮಂತ್ರ ಎಂದರು.ಕ್ರೀಡಾಕೂಟದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಜಿ.ಎಂ. ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲ ಪ್ರಣವ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆಯಾಗಿರುವ ಡಾ. ಅನುಷಾ ಸುಬ್ರಹ್ಮಣ್ಯಂ, ಉಪಾಧ್ಯಕ್ಷ ರೇವತಿ ಕೆ, ಶ್ರೀಮಾ ಪ್ರಣವ್ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಮೇಧಾ ತಂಡ ಚಾಂಪಿಯನ್‌ಶಿಪ್ ಪಡೆದುಕೊಂಡಿತು.