ಜಿಎಂವಿವಿ ತಂಡಕ್ಕೆ ಜಿ.ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್

| Published : Dec 02 2024, 01:15 AM IST

ಜಿಎಂವಿವಿ ತಂಡಕ್ಕೆ ಜಿ.ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್
Share this Article
  • FB
  • TW
  • Linkdin
  • Email

ಸಾರಾಂಶ

ಜಿ.ಮಲ್ಲಿಕಾರ್ಜುನಪ್ಪ ಸ್ಮರಣಾರ್ಥವಾಗಿ ಜಿ.ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್ ಶೀರ್ಷಿಕೆಯಡಿ ನಗರದ ಜಿಎಂ ವಿಶ್ವವಿದ್ಯಾಲಯದ ಬಾಸ್ಕೆಟ್ ಬಾಲ್ ಆಟದ ಅಂಗಳದಲ್ಲಿ ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ನ. 29, 30 ಈ ಎರಡು ದಿನಗಳ ಕಾಲ ಪ್ರಥಮ ಬಾರಿ ರಾಜ್ಯಮಟ್ಟದ ಎಲ್ಲ ಪದವಿ ವಿದ್ಯಾರ್ಥಿಗಳ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಬಾಸ್ಕೆಟ್ ಬಾಲ್ ಪಂದ್ಯಾವಳಿಗಳು ನಡೆದವು.

- ಪುರುಷ ವಿಭಾಗದಲ್ಲಿ ಜಿಎಂವಿವಿ ತಂಡ. ಮಹಿಳಾ ವಿಭಾಗದಲ್ಲಿ ಮೈಸೂರಿನ ವಿವಿಸಿಇ ತಂಡ ಚಾಂಪಿಯನ್

- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಡಿ. 1,

ಜಿ.ಮಲ್ಲಿಕಾರ್ಜುನಪ್ಪ ಸ್ಮರಣಾರ್ಥವಾಗಿ ಜಿ.ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್ ಶೀರ್ಷಿಕೆಯಡಿ ನಗರದ ಜಿಎಂ ವಿಶ್ವವಿದ್ಯಾಲಯದ ಬಾಸ್ಕೆಟ್ ಬಾಲ್ ಆಟದ ಅಂಗಳದಲ್ಲಿ ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ನ. 29, 30 ಈ ಎರಡು ದಿನಗಳ ಕಾಲ ಪ್ರಥಮ ಬಾರಿ ರಾಜ್ಯಮಟ್ಟದ ಎಲ್ಲ ಪದವಿ ವಿದ್ಯಾರ್ಥಿಗಳ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಬಾಸ್ಕೆಟ್ ಬಾಲ್ ಪಂದ್ಯಾವಳಿಗಳು ನಡೆದವು. ಪುರುಷ ವಿಭಾಗದಲ್ಲಿ ಜಿಎಂ ವಿಶ್ವವಿದ್ಯಾಲಯದ ತಂಡ ಮತ್ತು ಮಹಿಳಾ ವಿಭಾಗದಲ್ಲಿ ಮೈಸೂರಿನ ವಿವಿಸಿಇ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿವೆ.ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಎಸ್‌ಎಸ್‌ಐಎಂಎಸ್ ದಾವಣಗೆರೆ ಮತ್ತು ಜಿಎಂ ವಿಶ್ವ ವಿದ್ಯಾಲಯ (ಜಿಎಂಯು) ದಾವಣಗೆರೆ ತಂಡಗಳ ನಡುವಿನ ಆಟದಲ್ಲಿ ಎಸ್‌ಎಸ್‌ಐಎಂಎಸ್ ದಾವಣಗೆರೆ 46 ಅಂಕ ಪಡೆದು ಎರಡನೇ ಬಹುಮಾನವಾಗಿ 10,000 ನಗದು, ಆಕರ್ಷಕ ಟ್ರೋಫಿ ಪಡೆಯಿತು. ಜಿಎಂ ವಿಶ್ವ ವಿದ್ಯಾಲಯದ ತಂಡ 49 ಪಡೆದು 3 ಅಂಕಗಳ ಮುನ್ನಡೆಯೊಂದಿಗೆ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿ ಮೊದಲ ಬಹುಮಾನವಾಗಿ 20,000 ನಗದು ಮತ್ತು ಆಕರ್ಷಕ ಟ್ರೋಫಿ ಪಡೆಯಿತು.ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಎಸ್‌ಎಸ್‌ಐಎಂಎಸ್ ದಾವಣಗೆರೆ ಮತ್ತು ವಿವಿಸಿಇ ಮೈಸೂರು ನಡುವಿನ ಆಟದಲ್ಲಿ ಎಸ್‌ಎಸ್‌ಐಎಂಎಸ್ ದಾವಣಗೆರೆ 3 ಅಂಕ ಪಡೆದು ಎರಡನೇ ಬಹುಮಾನವಾಗಿ 7,500 ನಗದು ಮತ್ತು ಆಕರ್ಷಕ ಟ್ರೋಫಿ ಪಡೆಯಿತು. ವಿವಿಸಿಇ ಮೈಸೂರು 17 ಅಂಕಗಳ ಪಡೆದು 14 ಅಂಕಗಳ ಮುನ್ನಡೆಯೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿ ಮೊದಲ ಬಹುಮಾನವಾಗಿ 10,000 ನಗದು, ಆಕರ್ಷಕ ಟ್ರೋಫಿ ಪಡೆಯಿತು.ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡಗಳಿಗೆ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ.ಲಿಂಗರಾಜು ನಗದು ಬಹುಮಾನ ಮತ್ತು ಟ್ರೋಫಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಎಂ ವಿವಿ ಕುಲಪತಿ ಡಾ.ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಬಿ.ಎಸ್. ಸುನಿಲ್ ಕುಮಾರ್, ಸಂಶೋಧನೆ ವಿಭಾಗದ ಡೀನ್ ಡಾ.ಕೆ.ಎನ್. ಭರತ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ.ಎಚ್.ಎಸ್. ಕಿರಣ್ ಕುಮಾರ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕರಾದ ಜಿ.ಬಿ. ಅಜ್ಜಯ್ಯ ಸೇರಿದಂತೆ ವಿಭಾಗಗಳ ಮುಖ್ಯಸ್ಥರು, ಪ್ರಾಂಶುಪಾಲರು ಹಾಗೂ ನಿರ್ದೇಶಕರು ಭಾಗವಹಿಸಿದ್ದರು.

- - - -1ಕೆಡಿವಿಜಿ38:

ದಾವಣಗೆರೆಯ ಜಿಎಂ ವಿ.ವಿ.ಯಲ್ಲಿ ನಡೆದ ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಜಯ ಸಾಧಿಸಿ, ಜಿ. ಮಲ್ಲಿಕಾರ್ಜುನಪ್ಪ ಮೆಮೋರಿಯಲ್ ಕಪ್‌ ಗಳಿಸಿದ ಜಿಎಂ ವಿವಿ ತಂಡದ ಸಂಭ್ರಮ.