ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜು.27ರ ಭಾನುವಾರ ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ನೌಕರರ ಸಮಾವೇಶ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಪಿ.ಎಂ.ಜಿ.ರಾಜೇಶ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆಯೂ ನಮ್ಮ ಸಂಘದಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ನಡೆಸಲಾಗುತ್ತಿತ್ತು. ಕೊರೋನಾ ಬಂದ ಹಿನ್ನೆಲೆ ಅದನ್ನು ನಿಲ್ಲಿಸಲಾಗಿತ್ತು. ಆದರೆ ಈಗ ನಮ್ಮ ಸಂಘ ಬಂದ ಮೇಲೆ ಪುನಃ ಪ್ರಾರಂಭ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 2024-25 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‌ಸಿ ಮತ್ತು ಪಿಯುಸಿ ವ್ಯಾಸಂಗ ಮಾಡಿ ಶೇ.80ಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲಾ ಅನುದಾನಿತ ಮತ್ತು ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತಿದ್ದು, ಇದರಲ್ಲಿ ಪರಿಸರ ಸ್ನೇಹಿ ಕಿಟ್, ಪ್ರಮಾಣ ಪತ್ರ, ಫಲಕ, ಶಾಲು ಹಾರದೊಂದಿಗೆ 1000 ರು. ನಗದು ನೀಡಲಾಗುತ್ತದೆ ಎಂದರು.
2024ರ ಮೇ 31ರಿಂದ 2025ರ ಜೂ.30ರ ವರೆಗೆ ನಿವೃತ್ತಿಯಾಗಿರುವ ಯಾವುದೇ ಇಲಾಖೆಯ ಸಮುದಾಯದ ನಿವೃತ್ತ ನೌಕರರನ್ನು ಸನ್ಮಾನಿಸಲಾಗುವುದು. ಸಮುದಾಯದ ಜಿಲ್ಲೆಯೊಳಗಿನ ವಿಶೇಷ ಸಾಧನೆಗೈದ 5 ಜನ ಸಾಧಕರಾದ ಸಚಿನ್ ಕೆ.ಎಲ್., ಕೆ.ಎನ್.ಮಲ್ಲಿಕಾರ್ಜನ್, ಎ.ಎಸ್ ಸತೀಶ್, ಜೆ.ಆರ್.ಶಂಕರಪ್ಪ ಹಾಗೂ ಟಿ.ಪಿ.ಉಮೇಶ್‌ರನ್ನು ಅಭಿನಂದಿಸಿ ಗೌರವಿಸಲಾಗುವುದು ಎಂದು ಹೇಳಿದರು.ಕಾರ್ಯಕ್ರಮದ ಸಾನ್ನಿಧ್ಯವನ್ನು ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವ ಕುಮಾರ್ ಸ್ವಾಮಿಜಿ ಹಾಗೂ ದಾವಣಗೆರೆ ವಿರಕ್ತಮಠದ ಡಾ.ಬಸವ ಪ್ರಭು ಸ್ವಾಮಿಜಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿರವರು ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ.ಕೆ.ಬಸವರಾಜನ್, ಜಿಲ್ಲಾ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ, ಪಿ.ವೀರೇಂದ್ರ ಕುಮಾರ್, ಮಹಡಿ ಶಿವಮೂರ್ತಿ, ಶಶಿಧರ್ ಬಾಬು, ಕೆ.ಎಂ.ವಿರೇಶ್, ಕೆ.ಎಂ.ಶಿವಸ್ವಾಮಿ ಸೇರಿ ಇತರರು ಭಾಗವಹಿಸಲಿದ್ದಾರೆ ಎಂದರು.
ಯಾವುದಾದರು ನೌಕರರ ಮಕ್ಕಳು ಅನಿವಾರ್ಯ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನೇರವಾಗಿ ತಂದೆ/ತಾಯಿಯ ಇಲಾಖಾ ಗುರುತಿನ ಚೀಟಿ, ವಿದ್ಯಾರ್ಥಿಯ ಅಂಕಪಟ್ಟಿಯೊಂದಿಗೆ ಕಾರ್ಯಕ್ರಮಕ್ಕೆ ಹಾಜರಾದರೆ ಅಂತಹ ಮಕ್ಕಳಿಗೂ ಸಹ ಪುರಸ್ಕರಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ವಿರೇಶ್, ಕಾರ್ಯಾದ್ಯಕ್ಷ ಎಂ.ಬಿ.ಕೊಟ್ಟೂರೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಅಜಯ್ ಕುಮಾರ್, ಜಿಲ್ಲಾ ಖಂಜಾಚಿ ಡಿ.ಬಹುಗುಣ ಭಾಗವಹಿಸಿದ್ದರು.