ಐದು ಬಾರಿ ಗೆದ್ದು ದಾಖಲೆ ಬರೆದ ಗದ್ದಿಗೌಡರ

| Published : Jun 05 2024, 12:30 AM IST

ಸಾರಾಂಶ

ಅಖಂಡ ವಿಜಯಪುರ ಜಿಲ್ಲೆ ಅಸ್ಥಿತ್ವ ಬಂದಾಗಿನಿಂದ, ಸ್ವಾತಂತ್ರ್ಯಾ ನಂತರದಲ್ಲಿ ನಡೆದ ಎಲ್ಲ ಚುನಾವಣೆಗಳನ್ನು ಅವಲೋಕಿಸಿದಾಗ ಐದು ಬಾರಿ ಗೆದ್ದು ದಾಖಲೆ ನಿರ್ಮಿಸಿದ ಕೀರ್ತಿ ಬಾಗಲಕೋಟೆ ಸಂಸದರಾಗಿ ಪುನರ್‌ ಆಯ್ಕೆಯಾದ ಪಿ.ಸಿ.ಗದ್ದಿಗೌಡರ ಅವರಿಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಖಂಡ ವಿಜಯಪುರ ಜಿಲ್ಲೆ ಅಸ್ಥಿತ್ವ ಬಂದಾಗಿನಿಂದ, ಸ್ವಾತಂತ್ರ್ಯಾ ನಂತರದಲ್ಲಿ ನಡೆದ ಎಲ್ಲ ಚುನಾವಣೆಗಳನ್ನು ಅವಲೋಕಿಸಿದಾಗ ಐದು ಬಾರಿ ಗೆದ್ದು ದಾಖಲೆ ನಿರ್ಮಿಸಿದ ಕೀರ್ತಿ ಬಾಗಲಕೋಟೆ ಸಂಸದರಾಗಿ ಪುನರ್‌ ಆಯ್ಕೆಯಾದ ಪಿ.ಸಿ.ಗದ್ದಿಗೌಡರ ಅವರಿಗೆ ಸಲ್ಲುತ್ತದೆ.

ಬಾಗಲಕೋಟೆ ಲೋಕಸಭೆಗೆ ಈ ಹಿಂದೆ ಕಾಂಗ್ರೆಸ್ಸಿನ ಎಸ್.ಬಿ. ಪಾಟೀಲ ಸುನಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ 1980ರಲ್ಲಿ ವಿರೇಂದ್ರ ಪಾಟೀಲರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ನಾಲ್ಕು ಬಾರಿ ಆಯ್ಕೆ ದಾಖಲೆಯಾಗಿತ್ತು. ಆದರೆ ಪಿ.ಸಿಗದ್ದಿಗೌಡರ 2004, 2008, 2014, 2019 ಮತ್ತು 2024ರ ಚುನಾವಣೆಯಲ್ಲಿ ಐದು ಬಾರಿ ಗೆಲುವು ಕಂಡು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಮಹಿಳೆಯರಿಗೆ ಒಲಿಯದ ಕ್ಷೇತ್ರ: 1967ರಿಂದಲೂ ಬಾಗಲಕೋಟೆ ಮತಕ್ಷೇತ್ರದಲ್ಲಿ ಮಹಿಳೆಯರು ಸಂಸದರಾಗಿ ಆಯ್ಕೆಯಾಗಿಲ್ಲ. 2019ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಗದ್ದಿಗೌಡರ ಎದುರು ಸೋಲು ಕಂಡಿದ್ದ ವೀಣಾ ಕಾಶಪ್ಪನವರ ಮತ್ತು ಈ ಬಾರಿ ಅದೇ ಪಕ್ಷದಿಂದ ಸ್ಪರ್ಧಿಸಿ ಸೋಲು ಕಂಡವರು ಸಂಯುಕ್ತಾ ಪಾಟೀಲ.