ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ:
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ 2 ಲಕ್ಷ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವಿಶ್ವಾಸ ವ್ಯಕ್ತಪಡಿಸಿದರು.ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಹಮ್ಮಿಕೊಂಡ ಲೋಕಸಭೆ ಚುನಾವಣಾ ಪ್ರಚಾರ ಅಂಗವಾಗಿ ನಗರದ 6 ಮತ್ತು 8ನೇ ವಾರ್ಡ್‌ನಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು. ಬಿಜೆಪಿ ಗೆಲುವು ಶತಃಸಿದ್ದ, ಜನರು ದೇಶದ ಅಭಿವೃದ್ಧಿ ಹಾಗೂ ಭದ್ರತೆ ಪರವಾಗಿದ್ದಾರೆ ಎಂದರು.ತಮ್ಮ ಬೇಡಿಕೆಗಿಂತ ದೇಶದ ಸುರಕ್ಷತೆ ಬಗ್ಗೆ ಚಿಂತಿಸುವ ಜನರಿದ್ದಾರೆ. ಕಾಂಗ್ರೆಸ್ಸಿಗೆ ದೇಶದಲ್ಲಿ ಉತ್ತಮ ನಾಯಕನ ನೇತೃತ್ವವಿಲ್ಲ. ಬಿಜೆಪಿಗೆ ಮೋದಿ ಎಂಬ ಉತ್ತಮ ನಾಯಕನ ನೇತೃತ್ವವಿದೆ, ನಿಶ್ಚಿತವಾಗಿ ಬಾಗಲಕೋಟೆ ಜನ ದೇಶಭಕ್ತರು, ಗದ್ದಿಗೌಡರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಮೇ 7ರಂದು ಲೋಕಸಭಾ ಚುನಾಚಣೆಗೆ ಪ್ರತಿಯೊಬ್ಬರು ಉತ್ಸಾಹದಿಂದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಿದ್ದರಾಗಿದ್ದಾರೆ. ಮೋದಿ ಗ್ಯಾರಂಟಿ ಮುಂದೆ ಕಾಂಗ್ರೆಸ್ ಗ್ಯಾರಂಟಿ ನಿಲ್ಲುವುದಿಲ್ಲ ಎಂದು ದೇಶದ ಜನರಿಗೆ ಗೊತ್ತಾಗಿದೆ. ಬಾಗಲಕೋಟೆ ಜನರು ತುಂಬ ಪ್ರಜ್ಞಾವಂತರಿದ್ದಾರೆ. ಇಂದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲ, ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ದೂರಿದರು.
ಬಿಜೆಪಿ ಸರ್ಕಾರವಿದ್ದಾಗ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಒಂದು ದಿನವೂ ಕುಡಿಯುವ ನೀರು ಮತ್ತು ವಿದ್ಯುತ್ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿದ್ಯುತ್ ಬಿಲ್ ಜಾಸ್ತಿಯಾಗಿದೆ. ಕೇಂದ್ರದ ₹6 ಸಾವಿರ ಹಾಗೂ ಈ ಮೊದಲಿನ ಬಿಜೆಪಿ ಸರ್ಕಾರ ₹4 ಸಾವಿರ ಸೇರಿಸಿ ಒಟ್ಟು ₹10 ಸಾವಿರ ಕಿಸಾನ್ ಸಮ್ಮಾನ್ ನಿಧಿಯನ್ನು ಎಲ್ಲಾ ವರ್ಗದ ರೈತರಿಗೂ ನೀಡುತ್ತಿತ್ತು. ಆದರೆ, ಕಾಂಗ್ರೆಸ್ ಬಂದ ಮೇಲೆ ರಾಜ್ಯ 4 ಸಾವಿರ ಕಿಸಾನ್ ನಿಧಿ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ನ ಗ್ಯಾರಂಟಿಗಳು ಜನರಿಗೆ ಅರ್ಥವಾಗಿವೆ. ಬಾಗಲಕೋಟೆಯ ಜನ ರಾಷ್ಟ್ರದ ಹಿತ ಬಯಸುವವರು, ದೇಶದ ಭದ್ರತೆಗಾಗಿ ಮೋದಿಯನ್ನು ಬೆಂಬಲಿಸುತ್ತಾರೆ ವಿಶ್ವಾಸ ವ್ಯಕ್ತಪಡಿಸಿದರು.ಪಾದಯಾತ್ರೆ ನಗರದ ಆನಂದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಕೌಲಪೇಟೆ, ಹುಂಡೆಕಾರ ಗಲ್ಲಿ, ತೆಂಗಿನಮಠ ರಸ್ತೆ, ನಗರೇಶ್ವರ ದೇವಸ್ಥಾನ, ರೇವಡಿ ಗಲ್ಲಿ, ಮೋಟಗಿ ಗಲ್ಲಿ ಸೇರಿದಂತೆ 6 ಮತ್ತು 8 ನೇ ವಾರ್ಡ್‌ನಲ್ಲಿ ಮನೆ ಮನೆ ತೆರಳಿ ಮತಯಾಚನೆ ಮಾಡಿದರು. ಪಾದಯಾತ್ರೆಯಲ್ಲಿ ನಗರಸಭೆ ಸದಸ್ಯರಾದ ರತ್ನಾ ಕೆರೂರ, ಪರಶುರಾಮ ಡಾವಣಗೇರಿ, ರವಿಕುಮಾರ ಪಟ್ಟಣದ, ಮಲ್ಲಯ್ಯ ಮಠ, ಪಂಡಿತ ಆರಬ್ಬಿ, ಗುರು ಹೊದ್ಲೂರ, ಪರಮೇಶ ಮುದ್ದುರ, ಈರಣ್ಣ ಕಲ್ಯಾಣಿ, ಶಿವಪ್ಪ ಮೂರಮಟ್ಟಿ, ಶರಣಪ್ಪ ಕೆರೂರ, ಮಹೇಶ ಕಮತಗಿ, ಗಂಗಯ್ಯ ಕೋಟಿ, ಶಂಕರ ಸಗರ, ಬಾಳು ಸೊರಟೂರ, ಈರಣ್ಣ ಕಲಬುರ್ಗಿ, ರಾಜು ಅಕ್ಕಿ, ಶಂಕರ(ಯಚ್ಚರಯ್ಯ) ಉಕ್ಕಲಿಮಠ, ಈಶ್ವರ ಮುಗಳೊಳ್ಳಿ, ವಿಜು ಅಂಗಡಿ, ಸಂಗಣ್ಣ ಶಿರೂರ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು,ನಗರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
----------ಕೋಟ್
ಮೋದಿ ಗ್ಯಾರಂಟಿ ಮುಂದೆ ಕಾಂಗ್ರೆಸ್ ಗ್ಯಾರಂಟಿ ನಿಲ್ಲುವುದಿಲ್ಲ ಎಂದು ದೇಶದ ಜನರಿಗೆ ಗೊತ್ತಾಗಿದೆ. ಇಂದು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲ, ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಿಜೆಪಿ ಸರ್ಕಾರವಿದ್ದಾಗ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಒಂದು ದಿನವೂ ಕುಡಿಯುವ ನೀರು ಮತ್ತು ವಿದ್ಯುತ್ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ.- ಡಾ.ವೀರಣ್ಣ ಚರಂತಿಮಠ. ಮಾಜಿ ಶಾಸಕರು.