ಸಾರಾಂಶ
ಹನುಮಸಾಗರ ಜಿಲ್ಲೆಯ ದೊಡ್ಡ ಗ್ರಾಪಂ ಎಂದು ಹೆಸರು ಮಾಡಿರುವ ಹನುಮಸಾಗರ ಗ್ರಾಮದಿಂದ ಗಜೇಂದ್ರಗಡ ಪಟ್ಟಣ ಸಂರ್ಪಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರು ಜನಪ್ರತಿನಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹನುಮಸಾಗರ: ಜಿಲ್ಲೆಯ ದೊಡ್ಡ ಗ್ರಾಪಂ ಎಂದು ಹೆಸರು ಮಾಡಿರುವ ಹನುಮಸಾಗರ ಗ್ರಾಮದಿಂದ ಗಜೇಂದ್ರಗಡ ಪಟ್ಟಣ ಸಂರ್ಪಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರು ಜನಪ್ರತಿನಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗ್ರಾಮದ ಬಸ್ ನಿಲ್ದಾಣದಿಂದ ಒಳ ರಸ್ತೆಯ ಮೂಲಕ ಪ್ರತಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಯಲಬುರ್ಗಾ, ಗದಗ, ಹುಬ್ಬಳ್ಳಿ ಪಟ್ಟಣಗಳಿಗೆ ಹಾಗೂ ಮಡಿಕೇರಿ, ಬೆನಕನಾಳ, ಯಲಬುಣಚಿ ಗ್ರಾಮಗಳು ಇದೇ ರಸ್ತೆಯ ನಿರ್ಮಾಣ ಕಲ್ಪಿಸುವ ಮಾರ್ಗವಾಗಿದೆ.
ಮುಳ್ಳುಕಂಠಿಗಳ ಸ್ವಾಗತ: ಗ್ರಾಮಕ್ಕೆ ದೂರದಿಂದಲೂ ಪ್ರಯಾಣಿಕರು ಆಗಮಿಸುತ್ತಾರೆ. ವಾಹನಗಳ ಕಿಟಕಿಗೆ ಮುಳ್ಳಿನಕಂಠಿಗಳು ಬಡಿಯುವ ಮೂಲಕ ಸ್ವಾಗತಿಸುತ್ತವೆ. ರಸ್ತೆಯ ಎರಡು ಬದಿಯಲ್ಲಿ ಮುಳ್ಳಿನಗಿಡಗಳು ಯಥೇಚ್ಛವಾಗಿ ಬೆಳೆದಿವೆ. ವಾಹನ ಸಂಚರಿಸಲು ರಸ್ತೆಯಿಲ್ಲದೇ ಇಕ್ಕಟ್ಟಿನಿಂದ ಕೂಡಿದೆ. ಹೋಗುವ ರಸ್ತೆಯಲ್ಲಿ ಎದರಿಗೆ ಒಂದು ವಾಹನ ಬಂದರೆ ರಸ್ತೆಯ ಪಕ್ಕದಲ್ಲಿ ವಾಹನ ಹೋಗಲು ರಸ್ತೆ ಇಲ್ಲದೆ ತೊಂದರೆಯಾಗಿದೆ.
ಡಾಂಬರ್ ಮೇಲೆ ಜಲ್ಲಿಕಲ್ಲು: ಈ ರಸ್ತೆಯ ಅಕ್ಕಪಕ್ಕದಲ್ಲಿ ಮುಳ್ಳು ಕಂಠಿಗಳಿಂದ ಕೂಡಿದ್ದರೆ, ರಸ್ತೆಯ ಮೇಲಿನ ಡಾಂಬರ್ ಕಿತ್ತೊಗಿದೆ. ಜಲ್ಲಿ ಕಲ್ಲುಗಳು ಮೇಲೆದ್ದು, ತೆಗ್ಗು ದಿನ್ನೆಯಿಂದ ರಸ್ತೆ ಕೂಡಿವೆ. ವಾಹನಗಳು ಸರ್ಕಸ್ ಮಾಡುತ್ತಾ ಗ್ರಾಮವನ್ನು ಪ್ರವೇಶಿಸುತ್ತದೆ.
ವಾಹನಗಳ ಪಾಟಾ ನೆಲಕ್ಕೆ ತಾಗಿ ಅರ್ಧ ದಾರಿಯಲ್ಲಿ ನಿಂತು ತೊಂದರೆ ಅನುಭವಿಸುತ್ತವೆ.ರೋಗಿಗಳು ಅನಾರೋಗ್ಯದಿಂದ ಗದಗ, ಹುಬ್ಬಳ್ಳಿಯಂತಹ ನಗರಗಳಿಗೆ ಹೋಗುವಾಗ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಹೊಲಗಳಿಗೆ, ವೀರಶೈವ ಲಿಂಗಾಯತ ರುದ್ರಭೂಮಿಗೆ ಇದೇ ರಸ್ತೆ ಅವಲಂಬಿಸಿದ್ದಾರೆ.
ಈ ರಸ್ತೆಯಲ್ಲಿ ಖಾಸಗಿ ಶಾಲೆಯಲ್ಲಿ ಇರುವವರು, ಮಕ್ಕಳು, ರೈತರು, ದ್ವಿಚಕ್ರ ವಾಹನ ಸವಾರರು, ವೃದ್ಧರು ಅಕಾರಿಗಳಿಗೆ ಹಾಗೂ ಜನಪ್ರತಿನಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಗ್ರಾಪಂ ಅವರಾಗಲಿ ಅಥವಾ ಶಾಸಕರಾಗಲಿ ಸದ್ಯ ಅನುದಾನ ಬರುವುದಕ್ಕಿಂತ ಮೊದಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಅವಶ್ಯಕತೆಯಿದೆ.
ಎತ್ತ ರಸ್ತೆಯಲ್ಲಿ ಬ್ರಹದಕಾರದ ಕಂದಕಗಳು ಬಿದ್ದಿವೆ. ವಾಹನಗಳಲ್ಲಿ ಬರುವಾಗ ಸಾರ್ವಜನಿಕರು ನಿತ್ಯ ಜನಪ್ರತಿನಿಧಿಗಳನ್ನು ಬಯ್ಯುತ್ತಿದ್ದಾರೆ. ಅವರಿಗೆ ಎಷ್ಟು ಹೇಳಿದರೂ ಅಷ್ಟೇ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಅಭಿವೃದ್ಧಿಗೊಳಿಸಬೇಕು ಎನ್ನುತ್ತಾರೆ ಹನುಮಸಾಗರ ಗ್ರಾಮಸ್ಥ ಭರಮಪ್ಪ ಬಿಂಗಿ.
ಹನುಮಸಾಗರದಿಂದ ಮಡಿಕೇರಿಗೆ ಹೋಗುವ ಒಳ ರಸ್ತೆ ಸಂಪೂರ್ಣ ಹಾಳಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಸರ್ಕಾರದಲ್ಲಿ ಒಂದು ರುಪಾಯಿ ದುಡ್ಡು ಇಲ್ಲ. ಇನ್ನು ಯಾವುದೇ ರೀತಿಯ ಅನುದಾನ ಬಿಡುಗಡೆಗೊಂಡಿಲ್ಲ ಎನ್ನುತ್ತಾರೆ ಶಾಸಕ ದೊಡ್ಡನಗೌಡ ಪಾಟೀಲ್.
;Resize=(128,128))
;Resize=(128,128))
;Resize=(128,128))
;Resize=(128,128))