ಸಾರಾಂಶ
ಮಗಳ ಉಡದಟ್ಟಿ ಕಾರ್ಯಕ್ರಮಕ್ಕೆ ರಜೆಯ ನಿಮಿತ್ತ ಊರಿಗೆ ಬಂದಿದ್ದ ತಾಲೂಕಿನ ನೆಲ್ಲೂರ ಪ್ಯಾಟಿ ಗ್ರಾಮದ ಯೋಧ ನಾಗೇಶ ಸಾಂತಪ್ಪ ನಿಲೂಗಲ್ಲ ಸೇನೆಯಿಂದ ದಿಢೀರ್ ಕರೆ ಬಂದ ಹಿನ್ನೆಲೆಯಲ್ಲಿ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ತೆರಳಿದ್ದಾರೆ.
ಗಜೇಂದ್ರಗಡ:ಮಗಳ ಉಡದಟ್ಟಿ ಕಾರ್ಯಕ್ರಮಕ್ಕೆ ರಜೆಯ ನಿಮಿತ್ತ ಊರಿಗೆ ಬಂದಿದ್ದ ತಾಲೂಕಿನ ನೆಲ್ಲೂರ ಪ್ಯಾಟಿ ಗ್ರಾಮದ ಯೋಧ ನಾಗೇಶ ಸಾಂತಪ್ಪ ನಿಲೂಗಲ್ಲ ಸೇನೆಯಿಂದ ದಿಢೀರ್ ಕರೆ ಬಂದ ಹಿನ್ನೆಲೆಯಲ್ಲಿ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ತೆರಳಿದ್ದಾರೆ.
ಸಿಆರ್‌ಪಿಎಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಗೇಶ ನಿಲೂಗಲ್ಲ ಅವರು ತಾಲೂಕಿನ ನೆಲ್ಲೂರ ಪ್ಯಾಟಿ ಗ್ರಾಮದಲ್ಲಿ ಮೇ ೧೮ರಂದು ನಡೆಯಲಿದ್ದ ಮಗಳ ಉಡದಟ್ಟಿ ಕಾರ್ಯಕ್ರಮಕ್ಕೆ ಸಿದ್ಧತೆಗಾಗಿ ಏ. ೨೬ಕ್ಕೆ ಬಂದಿದ್ದರು. ಆದರೆ ಭಾರತ-ಪಾಕಿಸ್ತಾನ ನಡುವೆ ಯುದ್ಧ ವಾತಾವರಣದ ಹಿನ್ನೆಲೆ ರಜೆಗೆ ಬಂದಿದ್ದ ಯೋಧ ನಾಗೇಶ ನಿಲೂಗಲ್ಲ ಅವರಿಗೆ ಗುರುವಾರ ಹೆಡ್ ಕ್ವಾರ್ಟ್ಸ್‌ನಿಂದ ಸೂಚನೆ ಬಂದಿದ್ದರಿಂದ ಹುಬ್ಬಳ್ಳಿಯಿಂದ ದೆಹಲಿಗೆ ನಂತರ ದೆಹಲಿಯಿಂದ ಜಮ್ಮು ಕಾಶ್ಮೀರಕ್ಕೆ ತೆರಳಿದ್ದಾರೆ.