ಗಳಗನಾಥರು, ರಾಜಪುರೋಹಿತರು ಕನ್ನಡ ಸಾಹಿತ್ಯದ ದಿಗ್ಗಜರು-ಪ್ರಾಚಾರ್ಯ ಪಾಟೀಲ

| Published : Oct 11 2025, 12:02 AM IST

ಗಳಗನಾಥರು, ರಾಜಪುರೋಹಿತರು ಕನ್ನಡ ಸಾಹಿತ್ಯದ ದಿಗ್ಗಜರು-ಪ್ರಾಚಾರ್ಯ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದ ಪರಿಸ್ಥಿತಿ ಶೋಚನೀಯವಾಗಿದ್ದ ಕಾಲದಲ್ಲಿ ನಾಡು-ನುಡಿಗಾಗಿ ದುಡಿದ ಸಾಹಿತಿ, ಸಂಶೋಧಕರ ಹೆಸರುಗಳಲ್ಲಿ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರು ಹಾಗೂ ರಾಜಪುರೋಹಿತರ ಹೆಸರುಗಳು ಅತ್ಯಂತ ಪ್ರಮುಖವಾದವುಗಳು. ಇವರು ಕನ್ನಡ ಸಾಹಿತ್ಯದ ದಿಗ್ಗಜರು ಎಂದು ಪ್ರಾಚಾರ್ಯ ಡಿ.ಟಿ. ಪಾಟೀಲ ಹೇಳಿದರು.

ಹಾವೇರಿ: ಕನ್ನಡದ ಪರಿಸ್ಥಿತಿ ಶೋಚನೀಯವಾಗಿದ್ದ ಕಾಲದಲ್ಲಿ ನಾಡು-ನುಡಿಗಾಗಿ ದುಡಿದ ಸಾಹಿತಿ, ಸಂಶೋಧಕರ ಹೆಸರುಗಳಲ್ಲಿ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರು ಹಾಗೂ ರಾಜಪುರೋಹಿತರ ಹೆಸರುಗಳು ಅತ್ಯಂತ ಪ್ರಮುಖವಾದವುಗಳು. ಇವರು ಕನ್ನಡ ಸಾಹಿತ್ಯದ ದಿಗ್ಗಜರು ಎಂದು ಪ್ರಾಚಾರ್ಯ ಡಿ.ಟಿ. ಪಾಟೀಲ ಹೇಳಿದರು. ತಾಲೂಕಿನ ಕಳ್ಳಿಹಾಳ ಎಸ್‌ಸಿ, ಎಸ್‌ಟಿ ವಸತಿಯುತ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರ ಶ್ರೀಗಳಗನಾಥ ಮತ್ತು ನಾ.ಶ್ರೀ ರಾಜಪುರೋಹಿತ ಪ್ರತಿಷ್ಠಾನದಿಂದ ಗುರುವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನಕ, ಶರೀಪ ಸರ್ವಜ್ಞ ಮುಂತಾದವರು ಈ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಸಂತರ, ಶರಣರ ದಾರ್ಶನಿಕ ಚರಿತ್ರೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ವಾಚನಾಭಿರುಚಿ ಬೆಳೆಸಿಕೊಳ್ಳಬೇಕು ಕರೆ ನೀಡಿದರು. ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರಡ್ಡಿ ಗೊಡಿಹಾಳ ಅವರು ಗಳಗನಾಥರು ಮತ್ತು ನಾ.ಶ್ರೀ. ರಾಜಪುರೋಹಿತರ ಬದುಕು-ಬರಹ ಕುರಿತು ಮಾತನಾಡಿ, ಕನ್ನಡ ಕಾದಂಬರಿಯ ಉನ್ನತ ಸೌಧದ ತಳಪಾಯವನ್ನು ಹಾಕಿದವರೇ ಗಳಗನಾಥರು. ಅವರು ಕನ್ನಡ ಕಾದಂಬರಿಯ ಪಿತಾಮಹ. ಇತಿಹಾಸ ಸಂಶೋಧಕ ರಾಜಪುರೋಹಿತರು ಇಂದಿನ ಸಂಶೋಧಕರಿಗೆ ಪ್ರೇರಣೆ ಹಾಗೂ ಸ್ಫೂರ್ತಿಯಾಗುತ್ತಾರೆ. ಈ ಮಹನೀಯರು ಹಾವೇರಿ ತಾಲೂಕಿನ ಅಗಡಿ ಗ್ರಾಮದವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು. ರಟೀಹಳ್ಳಿ ಪ್ರಿಯದರ್ಶಿನಿ ಪದವಿ ಕಾಲೇಜಿನ ಉಪನ್ಯಾಸಕ ಡಾ. ಚಾಮರಾಜ ಕಮ್ಮಾರ ಶಾಸನಗಳ ಓದು ಕುರಿತು ಮಾತನಾಡಿ, ಶಿಲಾಶಾಸನಗಳ, ಸ್ಮಾರಕಗಳು ಹಾವೇರಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕಂಡುಬಂದಿವೆ. ಶಾಸನಗಳು ಎಂದರೆ ಪ್ರಾಚೀನ ಕಾಲದ ಜನಗಳೆಂದರೆ ಸಮಗ್ರ ದೃಷ್ಟಿಯಿಂದ ನೋಡುವುದು. ಶಾಸನಗಳ ಹಾಗೂ ಸ್ಮಾರಕಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು, ಅವುಗಳ ರಕ್ಷಣೆ ನಮ್ಮೆಲ್ಲರ ಜಬಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಇತಿಹಾಸಕಾರರ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು ಎಂದರು.ಪ್ರತಿಷ್ಠಾನದ ಸದಸ್ಯ ವೆಂಕಟೇಶ ಗಳಗನಾಥ ಉಪನ್ಯಾಸಕರನ್ನು ಹಾಗೂ ಪ್ರಾಚಾರ್ಯರರನ್ನು ಗೌರವಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಿರೇಮಠ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಸದಸ್ಯ ಹನುಮಂತಗೌಡ ಗೊಲ್ಲರ ನಿರೂಪಿಸಿದರು. ಇನ್ನೊರ್ವ ಸದಸ್ಯ ಪ್ರಮೋದ ನಲವಾಗಲ ವಂದಿಸಿದರು.