ಗಮಕ ಪ್ರಾಚೀನ ಶ್ರೀಮಂತ ಕಲೆ: ರಾಮಸುಬ್ರಾಯ ಶೇಟ್

| Published : Jun 26 2024, 12:36 AM IST

ಸಾರಾಂಶ

ಗಮಕ ಪ್ರಾಚೀನ ಶ್ರೀಮಂತ ಕಲೆಯಾಗಿದೆ. ಆದ್ದರಿಂದ ಗಮಕ ಕಾರ್ಯಕ್ರಮಗಳನ್ನು ಮನೆ ಮನೆಗಳಲ್ಲಿ ಹಮ್ಮಿಕೊಂಡು ಆಸಕ್ತರನ್ನು ಉತ್ತೇಜಸುವ ಜೊತೆಗೆ ಸದಸ್ಯರ ಸಂಖ್ಯೆ ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಕಲಾಶ್ರೀ ರಾಮಸುಬ್ರಾಯ ಶೇಟ್ ತಿಳಿಸಿದರು.ಪಟ್ಟಣದ ಡಾ.ಬಿ.ಎಚ್. ಕುಮಾರಸ್ವಾಮಿ ಅವರ ಮನೆಯಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಗಮಕ ಕಲಾ ಪರಿಷತ್ತಿನ ತರೀಕೆರೆ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಮಕ ಕಲಾ ಪರಿಷತ್ತಿನ ತರೀಕೆರೆ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಗಮಕ ಪ್ರಾಚೀನ ಶ್ರೀಮಂತ ಕಲೆಯಾಗಿದೆ. ಆದ್ದರಿಂದ ಗಮಕ ಕಾರ್ಯಕ್ರಮಗಳನ್ನು ಮನೆ ಮನೆಗಳಲ್ಲಿ ಹಮ್ಮಿಕೊಂಡು ಆಸಕ್ತರನ್ನು ಉತ್ತೇಜಸುವ ಜೊತೆಗೆ ಸದಸ್ಯರ ಸಂಖ್ಯೆ ಹೆಚ್ಚಿಸುವ ಅವಶ್ಯಕತೆ ಇದೆ ಎಂದು ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಕಲಾಶ್ರೀ ರಾಮಸುಬ್ರಾಯ ಶೇಟ್ ತಿಳಿಸಿದರು.ಪಟ್ಟಣದ ಡಾ.ಬಿ.ಎಚ್. ಕುಮಾರಸ್ವಾಮಿ ಅವರ ಮನೆಯಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಗಮಕ ಕಲಾ ಪರಿಷತ್ತಿನ ತರೀಕೆರೆ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2024-25ನೇ ಸಾಲಿನ ಗಮಕ ಕಲಾ ಪರಿಷತ್ತಿಗೆ ಗೌರವಾಧ್ಯಕ್ಷರಾಗಿ ಕನ್ನಡಶ್ರೀ ಭಗವಾನ್, ಅಧ್ಯಕ್ಷರಾಗಿ ಡಾ. ಬಿ.ಎಚ್. ಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಗಮಕಿ ಶಾರದಾ ಮಂಜುನಾಥ್ ಮತ್ತು ಲತಾ ಗೋಪಾಲಕೃಷ್ಣ, ಕಾರ್ಯದರ್ಶಿಯಾಗಿ ನವೀನ್ ಪೆನ್ನಯ್ಯ, ಖಜಾಂಚಿಯಾಗಿ ಗಮಕಿ ಸುನೀತಾ ಕಿರಣ್ ಹಾಗೂ ಶಾರದಾ ಗೋಪಾಲ, ರಾಮಪ್ರಕಾಶ್ ಮತ್ತು ರೋಹಿಣಿ ನರಸಿಂಹಮೂರ್ತಿ ಸದಸ್ಯರಾಗಿ ಆಯ್ಕೆಯಾದರು.

----

25ಕೆಟಿಆರ್.ಕೆ.3

ತರೀಕೆರೆ ತಾಲೂಕು ಗಮಕ ಕಲಾ ಪರಿಷತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಡಾ.ಬಿ.ಎಚ್. ಕುಮಾರಸ್ವಾಮಿ ಮನೆಯಲ್ಲಿ ನಡೆಯಿತು.