ನಾಳೆ ಗಾನ ನಾದ ಸೌರಭ-2025 ಕಾರ್ಯಕ್ರಮ: ವಿದುಷಿ ಶುಭದಾ ಮಾಹಿತಿ

| Published : Jan 11 2025, 12:47 AM IST

ನಾಳೆ ಗಾನ ನಾದ ಸೌರಭ-2025 ಕಾರ್ಯಕ್ರಮ: ವಿದುಷಿ ಶುಭದಾ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಗಾನಸೌರಭ ಸಂಗೀತ ವಿದ್ಯಾಲಯದಿಂದ ನಗರದ ಎಂ.ಸಿ. ಕಾಲನಿ ಬಿ ಬ್ಲಾಕ್‌ನ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಜ.12ರಂದು ಗಾನ ನಾದ ಸೌರಭ-2025 ಕಾರ್ಯಕ್ರಮ ನಡೆಯಲಿದೆ ಎಂದು ವಿದ್ಯಾಲಯದ ಪ್ರಾಚಾರ್ಯರಾದ ವಿದುಷಿ ಶುಭದಾ ದಾವಣಗೆರೆಯಲ್ಲಿ ಹೇಳಿದ್ದಾರೆ.

- ರಾಮಲಲ್ಲಾ ಪ್ರತಿಷ್ಠಾಪನೆ; 22ರಂದು ಸಾಮೂಹಿಕ ಭಜನೆ - - - ದಾವಣಗೆರೆ: ಗಾನಸೌರಭ ಸಂಗೀತ ವಿದ್ಯಾಲಯದಿಂದ ನಗರದ ಎಂ.ಸಿ. ಕಾಲನಿ ಬಿ ಬ್ಲಾಕ್‌ನ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಜ.12ರಂದು ಗಾನ ನಾದ ಸೌರಭ-2025 ಕಾರ್ಯಕ್ರಮ ನಡೆಯಲಿದೆ ಎಂದು ವಿದ್ಯಾಲಯದ ಪ್ರಾಚಾರ್ಯರಾದ ವಿದುಷಿ ಶುಭದಾ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 5 ಗಂಟೆಗೆ ಗಾನ ಸೌರಭ ಸಂಗೀತ ವಿದ್ಯಾಲಯದ ಪ್ರಾಚಾರ್ಯರಾದ ವಿದುಷಿ ಶುಭದಾ ಅಧ್ಯಕ್ಷತೆಯಲ್ಲಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು ಎಂದರು.

ರಾಧಾಕೃಷ್ಣ ಜ್ಯುಯಲರ್ಸ್‌ ಮಾಲೀಕ ರಮೇಶ ಬಾಬು, ಶಿವಮೊಗ್ಗದ ವೀಣಾ ವಾದಕರಾದ ವಿದುಷಿ ಬಿ.ಕೆ. ವಿಜಯಲಕ್ಷ್ಮೀ, ಕಲಾಕಲ್ಪ ಕಲಾ ಶಾಲೆ ಸಂಸ್ಥಾಪಕಿ ಶುಭ ಐನಳ್ಳಿ, ಹಿರಿಯ ವರ್ತಕ ಅಜ್ಜಂಪುರ ವೆಂಕಟೇಶ, ಶಾಂತಲಾ ವೆಡ್ಡಿಂಗ್ ಮಾಲ್ ಮಾಲೀಕ ಚಂಪಾಲಾಲ್‌ ಡಿಲೇರಿಯಾ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಅನಂತರ ಸಂಜೆ 6 ಗಂಟೆಯಿಂದ ಗಾನ ಸೌರಭ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಹೇಳಿದರು.

ಜ.22ರಂದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರತಿಷ್ಠಾಪನೆಯ 1ನೇ ವಾರ್ಷಿಕೋತ್ಸವ ಅಂಗವಾಗಿ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಸಲಾಗುವುದು. ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ವೀಣಾ ವಾದನ, ದೇವರ ನಾಮ, ಕೀಬೋರ್ಡ್‌ ನುಡಿಸುವುದನ್ನು ಕಲಿಸುತ್ತೇವೆ. ಈವರೆಗೆ ನೂರಾರು ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ವಿದ್ಯಾಲಯದ ಪ್ರೀತಿ ರಾಜ್‌, ಸುಮನ ರಾಯಸಂ, ಸ್ವರೂಪ ಬದರೀನಾಥ, ರೋಹಿಣಿ, ಸೀಮಾ ಕಿರಣ್, ಶಕುಂತಲಾ ಚಂದ್ರಶೇಖರ ಇತರರು ಇದ್ದರು.

- - - -8ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಗಾನ ಸೌರಭ ಸಂಗೀತ ವಿದ್ಯಾಲಯ ಪ್ರಾಂಶುಪಾಲರಾದ ವಿದುಷಿ ಶುಭದಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.