ಸಾರಾಂಶ
ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಗಣೇಶನ ಚಿತ್ರ ರಚಿಸುವ ಸ್ಪರ್ಧೆ ನಡೆಯಿತು. ಸುಮಾರು 200 ಮಕ್ಕಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಪರ್ಕಳದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಗಣೇಶೋತ್ಸವ ಸಮಿತಿ ಹಾಗೂ ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ ಸಹಭಾಗಿತ್ವದಲ್ಲಿ ಸೆ. 1ರಂದು ಶ್ರೀ ವಿಘ್ನೇಶ್ವರ ಸಭಾಭವನ ಪರ್ಕಳ ಇಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಗಣೇಶನ ಚಿತ್ರ ರಚಿಸುವ ಸ್ಪರ್ಧೆ ನಡೆಯಿತು.ಸ್ಪರ್ಧೆಯನ್ನು ಗಣೇಶೋತ್ಸವ ಸಮಿತಿ ಸಂಚಾಲಕರಾದ ದಿಲೀಪ್ ರಾಜು ಹೆಗ್ಡೆ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ದಿನೇಶ್ ಹೆಗ್ಡೆ ಆತ್ರಾಡಿ ವಹಿಸಿದರು.
ಈ ಸಂದರ್ಭ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರಾದ ಸಚ್ಚಿದಾನಂದ ನಾಯಕ್, ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್, ಮಹಿಳಾ ಸಮಿತಿ ಅಧ್ಯಕ್ಷರಾದ ಸರಿತಾ ಯತಿರಾಜ್, ಕಾರ್ಯದರ್ಶಿ ಮಂಜಳ ಪದ್ಮನಾಭ್, ವೇದಿಕೆ ಅಧ್ಯಕ್ಷ ಸಂದೀಪ್ ನಾಯ್ಶ್ ಕಬ್ಯಾಡಿ, ಪದಾಧಿಕಾರಿಗಳಾದ ಗಣೇಶ್ ಸಣ್ಣಕ್ಕಿಬೆಟ್ಟು, ಅಶೋಕ್ ಸಣ್ಣಕ್ಕಿಬೆಟ್ಟು, ಸುಧಾಕರ್ ನಾಯಕ್, ಗುರುಪ್ರಸಾದ್ ಕಬ್ಯಾಡಿ, ಕೃಷ್ಣ ನಾಯಕ್, ಗಣೇಶ್ ಕುಲಾಲ್, ರಾಜೇಶ್ ನಾಯಕ್, ರಾಘವೇಂದ್ರ ನಾಯಕ್, ಉದಯಕುಮಾರ್ ಆಲಂಬಿ, ಸಂತೋಷ್ ಕುಮಾರ್, ಎಸ್. ಶಂಕರ್ ಕುಲಾಲ್ ಇವರು ಉಪಸ್ಥಿತರಿದ್ದರು.ಸ್ಪರ್ಧೆಯ ತೀರ್ಪುಗಾರರಾಗಿ ಗಣಪತಿ ವಿಗ್ರಹ ತಯಾರಕರಾದ ದೇವರಾಜ್ ನಾಯಕ್ ಸಣ್ಣಕ್ಕಿಬಿಟ್ಟು ಹಾಗೂ ವ್ಯಂಗ್ಯ ಚಿತ್ರಕಲಾವಿದ ಗೋಪಿ ಹಿರೇಬೇಟ್ಟು ಇವರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಸುಮಾರು 200 ರಷ್ಟು ಮಕ್ಕಳು ಭಾಗವಹಿಸಿದ್ದರು.