ಗಣಪತಿ ಉಪಾಸನೆ, ಪ್ರಾರ್ಥನೆಯಿಂದ ನಿರ್ವಿಘ್ನತೆ: ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ

| Published : Feb 17 2025, 12:31 AM IST

ಗಣಪತಿ ಉಪಾಸನೆ, ಪ್ರಾರ್ಥನೆಯಿಂದ ನಿರ್ವಿಘ್ನತೆ: ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕಾರ್ಯವನ್ನು ಮಾಡುವಾಗ ಗಣಪತಿ ಉಪಾಸನೆ, ಪ್ರಾರ್ಥನೆಯನ್ನು ಮಾಡಿದರೆ ನಿರ್ವಿಘ್ನತೆ ನಿರ್ಮಾಣವಾಗುತ್ತದೆ.

ಭಟ್ಕಳ: ಗಣಪತಿ ಅನುಗ್ರಹದಿಂದ ಬುದ್ಧಿಗೆ ಪ್ರಚೋದನೆ ದೊರೆತರೆ ವಿದ್ಯೆಗೆ ಪ್ರಲೋಭನೆ ದೊರೆಯುತ್ತದೆ. ನಿತ್ಯ ಮನೆಯಲ್ಲಿ ದೇವರ ಆರಾಧನೆ, ಭಜನೆ, ದೇವರ ಸ್ಮರಣೆ ಮಾಡುವಂತೆ ಚಿತ್ರಾಪುರ ಸಂಸ್ಥಾನದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ತಿಳಿಸಿದರು.

ಶಿರಾಲಿಯ ಸಾಲೆಮನೆಯ ಮಠದ ಸಿದ್ಧಿವಿನಾಯಕ ದೇವಸ್ಥಾನದ ಪುನರ್ ನಿರ್ಮಾಣ, ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಯಾವುದೇ ಕಾರ್ಯವನ್ನು ಮಾಡುವಾಗ ಗಣಪತಿ ಉಪಾಸನೆ, ಪ್ರಾರ್ಥನೆಯನ್ನು ಮಾಡಿದರೆ ನಿರ್ವಿಘ್ನತೆ ನಿರ್ಮಾಣವಾಗುತ್ತದೆ. ದಿನಂಪ್ರತಿ ಗಣಪತಿಯನ್ನು ಆರಾಧನೆ ಮಾಡಿ ಮನೆ ಮನೆಯಲ್ಲಿ ನಾಮಜಪ ಮಾಡುವಂತೆ ತಿಳಿಸಿದರು.

ಮುಖ್ಯ ಅತಿಥಿ ಮಾಜಿ ಶಾಸಕ ಸುನಿಲ್ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಂಜುನಾಥ ಎನ್. ನಾಯ್ಕ, ದೇವಾಲಯದ ಗರ್ಭಗುಡಿ ನಿರ್ಮಾಣ ಮಾಡಿಸಿಕೊಟ್ಟ ಪ್ರಕಾಶ ಎನ್. ಭಟ್ಟ ಮಾತನಾಡಿದರು. ದೇವಾಲಯ ಸಮಿತಿಯ ಗೌರವಾಧ್ಯಕ್ಷ ಶಿವಾನಂದ ಎನ್. ಕಾಮತ್, ಗೌರವ ಕಾರ್ಯದರ್ಶಿ ನಾಗೇಶ ದೇವಡಿಗ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ ಮುಂತಾದವರು ಉಪಸ್ಥಿತರಿದ್ದರು. ಶೋಭಾ ಕಾಮತ್ ಪ್ರಾರ್ಥಿಸಿದರು.

ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಶಿವಾನಂದ ಎನ್. ಭಟ್ಟ ಸ್ವಾಗತಿಸಿದರು. ಶಿಕ್ಷಕಿ ಸೀಮಾ ನಾಯ್ಕ ವರದಿ ವಾಚಿಸಿದರು. ಸಮಿತಿಯ ಕಾರ್ಯದರ್ಶಿ ರಾಜೇಶ ಎನ್. ಮೊಗೇರ ವಂದಿಸಿದರು. ಭಾನುವಾರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಪುನರ್ ಪ್ರತಿಷ್ಠಾ ಅಷ್ಟಬಂಧ, ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ. ೧೭ರಂದು ಬೆಳಗ್ಗೆ ಲೋಕ ಕಲ್ಯಾಣಾರ್ಥವಾಗಿ ೧೦೮ ಕಾಯಿ ಗಣಹವನ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಜಾಗೃತ ಕಾನೂನು ಕರಪತ್ರ ಬಿಡುಗಡೆ

ಸಿದ್ದಾಪುರ: ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳಿಗೆ ಕಾನೂನು ಜಾಗೃತಿ ಜಾಥಾ ೨೦೨೫ ಅಂಗವಾಗಿ ಜಾಗೃತ ಕಾನೂನು ಕರಪತ್ರವನ್ನು ಹಿರಿಯ ಸಾಮಾಜಿಕ ಚಿಂತಕ ಡಾ. ಕಾಗೋಡು ತಿಮ್ಮಪ್ಪ ಅವರು ಬಿಡುಗಡೆಗೊಳಿಸಿದರು.

ಫೆ. ೧೩ರಂದು ಸಾಗರದ ಸ್ವಗೃಹದಲ್ಲಿ ರಾಜ್ಯಾದಂತ ಅರಣ್ಯವಾಸಿಗಳಿಗೆ ಕಾನೂನಿನ ಅಂಶವನ್ನ ಹೊಂದಿರುವ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ತಿಳಿವಳಿಕೆ ಕೊರತೆಯಿಂದ ಅರಣ್ಯವಾಸಿಗಳು ವಂಚಿತಗೊಳ್ಳುತ್ತಿದ್ದಾರೆ. ಕಾನೂನಿನ ಜ್ಞಾನ ಅಗತ್ಯವಾದ ಕಾರಣ ಅರಣ್ಯವಾಸಿಗಳು ಕಾನೂನು ಜ್ಞಾನ ವೃದ್ಧಿಸಿಕೊಳ್ಳುವುದು ಮುಖ್ಯ. ಹೋರಾಟಗಾರರ ವೇದಿಕೆಯ ನೇತೃತ್ವದಲ್ಲಿ ಜರುಗುತ್ತಿರುವ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾ ಬೆಂಬಲಿಸಿ ಎಂದರು.ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದ ವೈಫಲ್ಯದ ಹಿನ್ನೆಲೆ ಅರಣ್ಯವಾಸಿಗಳಿಗೆ ಕಾನೂನುಬದ್ಧತೆ ದೃಷ್ಟಿಯಿಂದ ಈ ಕರಪತ್ರ ರೂಪಿಸಲಾಗಿದೆ. ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಅವಶ್ಯ ಬೇಕಾಗಿರುವ ದಾಖಲೆಗಳು ಮತ್ತು ಮಂಜೂರಿ ಪ್ರಕ್ರಿಯೆಯಲ್ಲಿ ಅರಣ್ಯವಾಸಿಯ ಮೂರು ತಲೆಮಾರಿನ ವೈಯಕ್ತಿಕ ದಾಖಲೆಗೆ ಒತ್ತಾಯಿಸುವುದು ಅಥವಾ ಅಪೇಕ್ಷಿಸುವುದು ಕಾನೂನುಬಾಹಿರ. ಸಾಂದರ್ಭಿಕ ದಾಖಲೆ ಅಡಿಯಲ್ಲಿ ಅರಣ್ಯ ಭೂಮಿಯ ಸಾಗುವಳಿ ಹಕ್ಕು ನೀಡುವ ಕಾನೂನು ಅಂಶಗಳು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಕರಪತ್ರ ಬಿಡುಗಡೆಯ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ ಉಪಸ್ಥಿತರಿದ್ದರು.