ಒಬ್ಬ ಸೃಜನಾತ್ಮಕ ಸಾಹಿತಿ ಏನೆಲ್ಲ ಬರೆಯಬಹುದು, ಸಮಾಜಕ್ಕೆ ತೋರಬಹುದು ಎಂಬುದಕ್ಕೆ ಬಸವರಾಜ ಅವರ ಲೇಖನಗಳಲ್ಲಿ ಸಹಜವಾಗಿ ಮೂಡಿ ಬಂದಿವೆ.
ಕನ್ನಡಪ್ರಭ ವಾರ್ತೆ ಮುಂಡರಗಿ
ಗ್ರಾಮೀಣ ಭಾಗದ ಜನರ ಕಲೆ ಸಾಂಸ್ಕೃತಿಕ ನೆಲೆಗಟ್ಟು ಮತ್ತು ಸಾಧನೆ ಮಾಡಿದ ವ್ಯಕ್ತಿಗಳ ಪರಿಚಯದ ಜತೆಗೆ ಸಮಾಜಮುಖಿ ಅನೇಕ ಕತೆ ನಾಟಕ, ರೂಪಕ ರಚಿಸಿದ ಸಾಹಿತಿ ಬಸವರಾಜ ಗಣಪ್ಪನವರ ಒಬ್ಬ ಉತ್ತಮ ಸಾಹಿತಿ ಎಂದು ಕಸಾಪ ಗೌರವ ಕಾರ್ಯದರ್ಶಿ ವೀಣಾ ಪಾಟೀಲ ಹೇಳಿದರು.ಪಟ್ಟಣದಲ್ಲಿ ಕಸಾಪ ಆಶ್ರಯದಲ್ಲಿ ತಾಲೂಕಿನ ಸಾಹಿತಿಗಳ ಕೃತಿ ಅವಲೋಕನ ಉಪನ್ಯಾಸ ಮಾಲೆಯಲ್ಲಿ ಸಾಹಿತಿ ಬಸವರಾಜ ಗಣಪ್ಪನವರ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಒಬ್ಬ ಸೃಜನಾತ್ಮಕ ಸಾಹಿತಿ ಏನೆಲ್ಲ ಬರೆಯಬಹುದು, ಸಮಾಜಕ್ಕೆ ತೋರಬಹುದು ಎಂಬುದಕ್ಕೆ ಬಸವರಾಜ ಅವರ ಲೇಖನಗಳಲ್ಲಿ ಸಹಜವಾಗಿ ಮೂಡಿ ಬಂದಿವೆ. ಆಕಾಶವಾಣಿ, ದೂರದರ್ಶನದಲ್ಲಿ ಶಬ್ದ ಚಿತ್ರಣ, ಕಿರುಚಿತ್ರ ಸಾಕ್ಷ್ಯಚಿತ್ರಗಳು ಪ್ರಚಲಿತ ವಿಷಯಗಳ ಮೇಲೆ ಬೆಳಕು ಚೆಲ್ಲುವುದರ ಜತೆಗೆ ಗ್ರಾಮೀಣ ಸಂಸ್ಕೃತಿ ಹಬ್ಬ ಹರಿದಿನಗಳನ್ನು ಬಿಂಬಿಸಿದ್ದಾರೆ ಎಂದರು.ಪತ್ರಕರ್ತ ಕಾಶೀನಾಥ ಬಿಳಿಮಗ್ಗದ ಮಾತನಾಡಿ, ನೈಜ ಅನುಭವಗಳು ಕತೆ ಕಾದಂಬರಿ ಕಟ್ಟಿಕೊಡಲು ಮತ್ತು ಸಾಹಿತ್ಯ ರಚನೆಗೆ ಸಾಧ್ಯವಾಗುತ್ತದೆ. ಮುಂಡರಗಿ ಕಸಾಪ ತಾಲೂಕಿನ ಅನೇಕ ಸಾಹಿತಿಗಳನ್ನು ಗುರುತಿಸಿ ಅವರ ಕೃತಿ ಪರಚಯಿಸುತ್ತಿರುವುದು ಶ್ಲಾಘನೀಯ ಎಂದರು.
ಸಾಹಿತಿ ಬಸವರಾಜ ಗಣಪ್ಪನವರ ಮಾತನಾಡಿ, ಕತೆ, ನಾಟಕ, ರೂಪಕ, ಚಿತ್ರಲೇಖನ, ದೃಶ್ಯಮಾಧ್ಯಮದಲ್ಲಿ, ಸಮಾಜದಲ್ಲಿ ಅನೇಕ ವ್ಯಕ್ತಿಗಳ ಸಂಸ್ಥೆಗಳ ಪರಿಚಯ ಮಾಡುವ ಮೂಲಕ ಸಾಹಿತ್ಯದ ಕೆಲಸಕ್ಕೆ ಅನೇಕರು ಪ್ರೋತ್ಸಾಹಿಸಿದ್ದಾರೆ. ಮುಂಡರಗಿ ಕಸಾಪ ತಮ್ಮನ್ನು ಗುರುತಿಸಿ ತಮ್ಮ ಬದುಕು ಬರಹ ಕುರಿತು ಸಾದರ ಪಡಿಸಿದ್ದು ಇನ್ನಷ್ಟು ಸಾಹಿತ್ಯದ ಕೆಲಸದಲ್ಲಿ ತೊಡಗಲು ಪ್ರೇರಣೆ ನೀಡಿದೆ ಎಂದು ತಿಳಿಸಿದರು.ಗದಗ ಕಬ್ಬಿಗರ ಕೂಟದ ಅಧ್ಯಕ್ಷ ಡಿ.ವಿ. ಬಡಿಗೇರ ಹಾಗೂ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಪ್ರೊ.ಎಂ.ಜಿ.ಗಚ್ಚಣ್ಣವರ ಮಾತನಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಬಸವರಾಜ ಹೆಬಲಿ, ರಾಷ್ಟ್ರಮಟ್ಟದ ಬೆಸ್ಟ್ ಆರ್ಟಿಸ್ಟ್ ಪುರಸ್ಕೃತ ಜೆ.ಕೆ. ಬಾಗವಾನ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ನಿವೃತ್ತ ಶಿಕ್ಷಕ ವಿ.ವಿ. ಹಿರೇಮಠ, ಶಂಕರ ಕುಕನೂರ, ಆರ್.ಎಲ್. ಪೊಲೀಸಪಾಟೀಲ, ಡಾ. ನಿಂಗು ಸೊಲಗಿ, ಎಸ್.ಬಿ.ಕೆ. ಗೌಡರ, ಕೃಷ್ಣಮೂರ್ತಿ ಸಾಹುಕಾರ, ಮನೋಹರ ಮೆಹರವಾಡೆ, ಅಂದಾನಪ್ಪ ವಿಭೂತಿ ಇತರರು ಇದ್ದರು. ರಮೇಶ ಪಾಟೀಲ ಸ್ವಾಗತಿಸಿದರು. ಸಿ.ಕೆ. ಗಣಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಎಂ. ಮುಲ್ಲಾ ನಿರೂಪಿಸಿದರು. ರತ್ನಾ ಕಾಗನೂರಮಠ ವಂದಿಸಿದರು.