ಅಯೋಧ್ಯೆಗೆ ಹೊರಟ ಗಾಂಧಿ ವೇಷಧಾರಿ ಮುತ್ತಣ್ಣನಿಗೆ ಗೌರವ ಸನ್ಮಾನ

| Published : Dec 11 2023, 01:15 AM IST

ಅಯೋಧ್ಯೆಗೆ ಹೊರಟ ಗಾಂಧಿ ವೇಷಧಾರಿ ಮುತ್ತಣ್ಣನಿಗೆ ಗೌರವ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಜನವರಿಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಕರ್ಕಿಕಟ್ಟಿಯಿಂದ ಪಾದಯಾತ್ರೆ ಹೊರಟ ಗಾಂಧಿ ವೇಷಧಾರಿ ಎಂದೇ ಹೆಸರು ವಾಸಿಯಾಗಿರುವ ಮುತ್ತಣ್ಣ ತಿರ್ಲಾಪುರ ಅವರಿಗೆ ಗ್ರಾಮದ ಮಹಿಳೆಯರು ಆರತಿ ಬೆಳಗಿ, ಸನ್ಮಾನಿಸಿ ಬೀಳ್ಕೊಟ್ಟರು.

ಜನವರಿಯಲ್ಲಿ ರಾಮಮಂದಿರ ಉದ್ಘಾಟನೆ ನಿಮಿತ್ತ ಕರ್ಕಿಕಟ್ಟಿಯಿಂದ ಮುತ್ತಣ್ಣ ಪಾದಯಾತ್ರೆ

ಹೊಳೆಆಲೂರ: ಜನವರಿಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ಕರ್ಕಿಕಟ್ಟಿಯಿಂದ ಪಾದಯಾತ್ರೆ ಹೊರಟ ಗಾಂಧಿ ವೇಷಧಾರಿ ಎಂದೇ ಹೆಸರು ವಾಸಿಯಾಗಿರುವ ಮುತ್ತಣ್ಣ ತಿರ್ಲಾಪುರ ಅವರಿಗೆ ಗ್ರಾಮದ ಮಹಿಳೆಯರು ಆರತಿ ಬೆಳಗಿ, ಸನ್ಮಾನಿಸಿ ಬೀಳ್ಕೊಟ್ಟರು.

ಸಾನ್ನಿಧ್ಯವಹಿಸಿದ್ದ ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ದೇಶಪ್ರೇಮ, ಪರಿಸರಪ್ರೇಮ ಇಟ್ಟುಕೊಂಡು ಅನೇಕ ಜಾಗೃತಿ ಜಾಥಾ, ಅಭಿಯಾನ ಮಾಡಿರುವ ಕರ್ಕಿಕಟ್ಟಿ ಗ್ರಾಮದ ಆಧುನಿಕ ಗಾಂಧಿ ಎಂದೇ ಹೆಸರುವಾಸಿಯಾಗಿರುವ ಮುತ್ತಣ್ಣ ತಿರ್ಲಾಪರ ಅವರ ಅಯೋಧ್ಯೆ ಪಾದಯಾತ್ರೆ ಸುಗಮವಾಗಿರಲಿ ಮತ್ತು ಅನೇಕ ಸಾಧು ಸಂತರ ಕೃಪೆ, ಜಿಲ್ಲೆಯ, ರಾಜ್ಯದ, ದೇಶದ ಹಾಗೂ ಕರ್ಕಿಕಟ್ಟಿ ಗ್ರಾಮದ ಎಲ್ಲ ಜನರ ಆಶೀರ್ವಾದ ಅವರ ಮೇಲಿರಲಿ ಎಂದು ಹಾರೈಸಿದರು.

ಗ್ರಾಮದ ಎಲ್ಲ ಹಿರಿಯರ ಆಶೀರ್ವಾದ ಪಡೆದು, ಕರ್ಕಿಕಟ್ಟಿ ಗ್ರಾಮದ ಗುಡಿಗಳಿಗೆ ಭೇಟಿ ನೀಡಿ, ಬೈರನಹಟ್ಟಿ ಶ್ರೀಗಳ ಆಶೀರ್ವಾದ ಪಡೆದು, ಗಾಂಧಿ ವೇಷ ಧರಿಸಿ, ಗ್ರಾಮದ ಜನರ ಸಮ್ಮುಖದಲ್ಲಿ ಬೆಳಗ್ಗೆ 11 ಗಂಟೆಗೆ ಪಾದಯಾತ್ರೆ ಕೈಗೊಂಡರು. ದಾರಿಯುದ್ದಕ್ಕೂ ಹೇ ರಾಮ ಎಂದು ಹೇಳುತ್ತಾ ಮುತ್ತಣ್ಣ ಅವರಿಗೆ ಅಭೂತಪೂರ್ವ ಬೀಳ್ಕೊಡುಗೆ ಸಿಕ್ಕಿತು. ಕರಿಯಮ್ಮದೇವಿ ದೇವಸ್ಥಾನದಿಂದ ಶಿರೋಳ ರಸ್ತೆಯ ವರೆಗೂ ಹೆಜ್ಜೆ ಹಾಕಿ ಹಾರೈಸಿ ಕಳುಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರು, ಸೈನಿಕರು, ಗ್ರಾಮದ ಗುರು ಹಿರಿಯರು, ಗ್ರಾಮದ ಮಹಿಳೆಯರು ಆರತಿ ಮಾಡಿ, ಗ್ರಾಮದ ಮನೆಮನೆಯಿಂದ ಹಿರಿಯರು, ಮಹಿಳೆಯರು, ಯುವಕರು ನಡೆದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಾನು ಇಲ್ಲಿಂದ ಅಯೋಧ್ಯೆಗೆ ಹೋಗುವ ದಾರಿಯುದ್ದಕ್ಕೂ ಪರಿಸರ ರಕ್ಷಣೆ ಜಾಗೃತಿ, ದುಶ್ಚಟಗಳ ನಿರ್ಮೂಲನೆ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಮಹಾನ್ ವ್ಯಕ್ತಿಗಳ ಬಗ್ಗೆ ಜಾಗೃತಿ ಅಭಿಯಾನ ಮಾಡುತ್ತಾ ಹೋಗುತ್ತೇನೆ ಎಂದು ತಿರ್ಲಾಪುರ ಮುತ್ತಣ್ಣ ಹೇಳಿದರು.