ಸಾರಾಂಶ
ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಮಾನವಿಕ ಸಂಘ ಹಾಗೂ ಅರ್ಥಶಾಸ್ತ್ರ ವಿಭಾಗಗಳ ಜಂಟಿ ಆಶ್ರಯದಲ್ಲಿ ಎಸ್. ಡಿ.ಸಾಮ್ರಾಜ್ಯ ಸಂಸ್ಮರಣಾರ್ಥ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ‘ರಾಷ್ಟ್ರೀಯ ಸ್ವಾವಲಂಬನೆಯ ಹಾದಿ: ಗಾಂಧೀಜಿಯವರ ಸ್ವದೇಶಿಯಿಂದ ಮೇಕ್‌ಇನ್ ಇಂಡಿಯಾ ವರೆಗೆ’ ಎಂಬ ವಿಷಯದ ಕುರಿತು ಅಂತರ್‌ಕಾಲೇಜು ಭಾಷಣ ಸ್ಪರ್ಧೆ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಲ್ಲಿನ ಶ್ರೀ ಮಹಾವೀರ ಕಾಲೇಜಿನ ಮಾನವಿಕ ಸಂಘ ಹಾಗೂ ಅರ್ಥಶಾಸ್ತ್ರ ವಿಭಾಗಗಳ ಜಂಟಿ ಆಶ್ರಯದಲ್ಲಿ ಎಸ್. ಡಿ.ಸಾಮ್ರಾಜ್ಯ ಸಂಸ್ಮರಣಾರ್ಥ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ‘ರಾಷ್ಟ್ರೀಯ ಸ್ವಾವಲಂಬನೆಯ ಹಾದಿ: ಗಾಂಧೀಜಿಯವರ ಸ್ವದೇಶಿಯಿಂದ ಮೇಕ್‌ಇನ್ ಇಂಡಿಯಾ ವರೆಗೆ’ ಎಂಬ ವಿಷಯದ ಕುರಿತು ಅಂತರ್‌ಕಾಲೇಜು ಭಾಷಣ ಸ್ಪರ್ಧೆ ಸಂಪನ್ನಗೊಂಡಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಹಾವೀರ ಪದವಿ ಕಾಲೇಜು ಪ್ರಾಂಶುಪಾಲ ಡಾ.ರಾಧಾಕೃಷ್ಣ ವಹಿಸಿದ್ದರು. ಮುಖ್ಯ ಅತಿಥಿ ಕರ್ಣಾಟಕ ಬ್ಯಾಂಕ್ ಕೊಡಂಗಲ್ಲು ಶಾಖಾ ಪ್ರಬಂಧಕ ರಕ್ಷಿತ್ ಶೆಟ್ಟಿ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ತೀರ್ಪುಗಾರರಾಗಿ ಸಹಕರಿಸಿದ ಕಾರ್ಕಳ ಎಮ್.ಪಿ.ಎಮ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಸೌಮ್ಯ.ಎಚ್.ಕೆ, ಮುನಿಯಾಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕಿ ಜಯಶ್ರೀ ರಾವ್, ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ನಳಿನಿ ಕುಮಾರಿ, ಐಕ್ಯೂಎಸಿ ಸಂಚಾಲಕ ಹಾಗೂ ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ವಿದ್ಯಾರ್ಥಿ ನಾಯಕಿ ಶೃತಿ ಪೇರಿ, ಮಾನವಿಕ ಸಂಘದ ಸಂಯೋಜಕಿ ಗೀತಾರಾಮಕೃಷ್ಣ ಮತ್ತು ಮಾನವಿಕ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಚೈತ್ರಾ ಇದ್ದರು.ಪುತ್ತೂರು ವಿವೇಕಾನಂದ ಕಾಲೇಜಿನ ವೈಷ್ಣವಿ ಎಂ ಶೆಟ್ಟಿ ಪ್ರಥಮ ಬಹುಮಾನ ಗಳಿಸಿದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಶ್ವೇತಾ ದ್ವಿತೀಯ ಬಹುಮಾನ ಹಾಗೂ ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ರಾಯ್ಸ್ ಪಿಂಟೋಗೆ ತೃತೀಯ ಬಹುಮಾನ ಲಭಿಸಿದೆ.
ಸುರತ್ಕಲ್ ಗೋವಿಂದದಾಸ ಕಾಲೇಜಿನ ಹಿತಾ ಉಮೇಶ್, ಮೂಡುಬಿದಿರೆ ಶ್ರೀ ಧವಳಾ ಕಾಲೇಜಿನ ಅಕ್ಷಯ್ ಮತ್ತು ಮಂಗಳೂರಿನ ತ್ರಿಷಾ ಕಾಲೇಜಿನ ಶ್ಯಾನಲ್ ಡಿ ಸೋಜಾ ಸಮಾಧಾನಕರ ಬಹುಮಾನ ಗಳಿಸಿದರು.ಮಂಗಳೂರು ವಿವಿ ವ್ಯಾಪ್ತಿಗೊಳಪಟ್ಟ ೨೦ ಪ್ರಥಮ ದರ್ಜೆ ಕಾಲೇಜುಗಳ ೪೦ ಮಂದಿ ವಿದ್ಯಾರ್ಥಿಗಳು ಸ್ಪರ್ಧಾಕಣದಲ್ಲಿದ್ದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಪೂರ್ಣಿಮಾ ಸ್ಪರ್ಧಾ ವಿಜೇತರ ವಿವರ ನೀಡಿದರು. ತೃತೀಯ ಬಿ.ಎ. ವಿದ್ಯಾರ್ಥಿಗಳಾದ ರಕ್ಷಿತಾ ಸ್ವಾಗತಿಸಿ, ಚೈತ್ರ ವಂದಿಸಿದರು. ಸಂಜೀತಾ ಕಾರ್ಯಕ್ರಮ ನಿರೂಪಿಸಿದರು.