ಯಂಗ್ ಇಂಡಿಯಾ ಶಾಲೆಯಲ್ಲಿ ಗಾಂಧಿ ಜಯಂತಿ

| Published : Oct 03 2023, 05:30 PM IST

ಯಂಗ್ ಇಂಡಿಯಾ ಶಾಲೆಯಲ್ಲಿ ಗಾಂಧಿ ಜಯಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧಿ ಜಯಂತಿ ಅಂಗವಾಗಿ ಸೋಮವಾರ ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ
ಬಾಗೇಪಲ್ಲಿ: ಗಾಂಧಿ ಜಯಂತಿ ಅಂಗವಾಗಿ ಸೋಮವಾರ ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವಕೀಲರು ಹಾಗೂ ಕೋಚಿಮುಲ್ ಮಾಜಿ ಅಧ್ಯಕ್ಷ ವಿ.ಶಿವಾರೆಡ್ಡಿ, ವಿದ್ಯಾರ್ಥಿದೆಸೆಯಿಂದಲ್ಲೇ ಪರಿಸರವನ್ನು ಸಂರಕ್ಷಣೆ ಮಾಡುವಂತಹ ಕೆಲಸಕ್ಕೆ ಮುಂದಾಗುವ ಮೂಲಕ ಗಾಂಧೀಜಿ ರವರು ಕಂಡಿದ್ದ ಸ್ವಚ್ಛ ಭಾರತದ ಸಂಕಲ್ಪದ ಕನಸನ್ನು ನೆನಸು ಮಾಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಗಾಂಧಿ ಜಯಂತಿ ಅಂಗವಾಗಿ ಪಟ್ಟಣದ ಗೂಳೂರು ವೃತ್ತ(ಡಾ.ಎಚ್.ಎನ್ ವೃತ್ತ)ದಿಂದ ಕೊತ್ತಪಲ್ಲಿ ರಸ್ತೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಸ್ವಚ್ಚಗೊಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ಪ್ರೊ.ಡಿ.ಶಿವಣ್ಣ, ಪ್ರೋ. ಹೇಮಂತರಾಜು, ಮುಖ್ಯ ಶಿಕ್ಷಕಿ ಕಲ್ಪನಾ ಆರ್, ಶ್ರೀಲಕ್ಷ್ಮೀ ಸೇರಿದಂತೆ ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿ ಇದ್ದರು.