ಶೈಕ್ಷಣಿಕ ಪ್ರಗತಿಗಾಗಿ ಗಾಂಧಿ ಪ್ರೇರಣೆ ಆಯೋಜನೆ

| Published : Oct 03 2023, 06:04 PM IST

ಶೈಕ್ಷಣಿಕ ಪ್ರಗತಿಗಾಗಿ ಗಾಂಧಿ ಪ್ರೇರಣೆ ಆಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧಿ, ಶಾಸ್ತ್ರಿ ಜಯಂತಿಯಲ್ಲಿ ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿಕೆ, ಕುಗ್ರಾಮಗಳ ದತ್ತು ಪಡೆದು ಅಭಿವೃದ್ಧಿ

ಗಾಂಧಿ, ಶಾಸ್ತ್ರಿ ಜಯಂತಿಯಲ್ಲಿ ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿಕೆ, ಕುಗ್ರಾಮಗಳ ದತ್ತು ಪಡೆದು ಅಭಿವೃದ್ಧಿ

ಕನ್ನಡಪ್ರಭ ವಾರ್ತೆ ದಾವಣಗೆರ

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದಾವಣಗೆರೆ ವಿಶ್ವವಿದ್ಯಾನಿಲಯವು ‘ಗಾಂಧಿ ಪ್ರೇರಣೆ’ ವಿಶೇಷ ಕಾರ್ಯಕ್ರಮ ರೂಪಿಸಿ ಅದರ ಮೂಲಕ ತನ್ನ ಕಾರ್ಯ ವ್ಯಾಪ್ತಿಯ ಕುಗ್ರಾಮಗಳ ದತ್ತು ಪಡೆದು ಅಭಿವೃದ್ಧಿ ಹಮ್ಮಿಕೊಳ್ಳಲಿದೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ನಡೆದ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ 15ರಿಂದ 20 ಗ್ರಾಮಗಳ ದತ್ತು ಪಡೆದು ಸಮಗ್ರ ಅಭಿವೃದ್ಧಿಗೆ ಆದ್ಯತೆ. ವಿಶ್ವವಿದ್ಯಾನಿಲಯದ ಪ್ರತಿಯೊಬ್ಬ ಪ್ರಾಧ್ಯಾಪಕರೂ ತಿಂಗಳಿಗೊಮ್ಮೆ ಆ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸುವರು. ಆ ಮೂಲಕ ಗ್ರಾಮಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಲಭ್ಯಗಳು ದೊರಕಿಸಿಸುವ ಕೆಲಸವನ್ನು ಇದನ್ನು ಗಾಂಧಿ ಪ್ರೇರಣೆ ಕಾರ್ಯಕ್ರಮವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ ಶಾಸ್ತ್ರಿಯವರ ಸರಳ ಜೀವನ, ಭವ್ಯ ಭಾರತದ ಕಲ್ಪನೆ, ಕ್ರಿಯಾಶಕ್ತಿಗಳು ಯುವಜನರಿಗೆ ಪ್ರೇರಣೆಯಾಗಬೇಕು. ಅಹಿಂಸಾತ್ಮಕ ಹೋರಾಟದಿಂದ ಯಶಸ್ಸು ಸಾಧ್ಯ ಎಂಬುದನ್ನು ಇಬ್ಬರೂ ಮಹನೀಯರು ಸಾಬೀತುಪಡಿಸಿದ್ದಾರೆ. ಅವರ ಸರ್ವೋದಯ, ಅಹಿಂಸಾ, ಸತ್ಯ, ಸಾಮಾಜಿಕ ನ್ಯಾಯ ತತ್ವಗಳು ಕೇವಲ ಹೇಳಿಕೆಗಷ್ಟೆ ಸೀಮಿತವಾಗದೆ ಕಾರ್ಯಪಾಲನೆಯಲ್ಲಿ ಜಾರಿಗೊಂಡಾಗ ರಾಮರಾಜ್ಯ ಪರಿಕಲ್ಪನೆಯ ಸದೃಢ ಗ್ರಾಮಭಾರತವನ್ನು ಕಾಣಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವೆ ಬಿ.ಬಿ.ಸರೋಜ, ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ, ಹಣಕಾಸು ಅಧಿಕಾರಿ ಪ್ರೊ.ಆರ್.ಶಶಿಧರ ಇತರರು ಇದ್ದರು. ಹಿಂದುಳಿದ ವರ್ಗಗಳ ಘಟಕದ ಸಂಚಾಲಕ ಡಾ.ನಾಗಭೂಷಣಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭದ್ರತೆಗೆ ಬುನಾದಿ

ಗಾಂಧೀಜಿ ಮತ್ತು ಲಾಲ್‌ ಬಹದ್ದೂರ ಶಾಸ್ತ್ರಿ ಜೀವನ ಶೈಲಿ, ಕಾರ್ಯ ವೈಖರಿಯಲ್ಲಿ ಸಾಮ್ಯತೆ ಕಾಣಬಹುದು. ಇಬ್ಬರದೂ ಸರಳ ವ್ಯಕ್ತಿತ್ವ. ನೇರ ನಡೆಯ ಪ್ರಾಮಾಣಿಕ ವ್ಯಕ್ತಿಗಳು. ಅವರ ದೇಶಾಭಿಮಾನ, ಗ್ರಾಮೀಣ ಅಭಿವೃದ್ಧಿಯ ಯೋಜನೆಗಳು, ಸಾಮಾಜಿಕ ಚಿಂತನೆ, ಆರ್ಥಿಕ ಪರಿಕಲ್ಪನೆಗಳು ಸ್ವತಂತ್ರ ಭಾರತದ ಭದ್ರತೆಗೆ ಬುನಾದಿ ಹಾಕಿವೆ.

ಪ್ರೊ.ವೆಂಕಟರಾವ್ ಪಲಾಟೆ, ಕಲಾ ನಿಕಾಯದ ಡೀನ್

........