ದೇಶಕ್ಕೆ ಗಾಂಧಿ, ಶಾಸ್ತ್ರೀಜಿ ಕೊಡುಗಡೆ ಅನನ್ಯ: ಸಂಸದ ಜಿಗಜಿಣಗಿ

| Published : Oct 03 2024, 01:18 AM IST

ದೇಶಕ್ಕೆ ಗಾಂಧಿ, ಶಾಸ್ತ್ರೀಜಿ ಕೊಡುಗಡೆ ಅನನ್ಯ: ಸಂಸದ ಜಿಗಜಿಣಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲಾ ಬಿಜೆಪಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನವನ್ನು ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಮಹಾತ್ಮಾ ಗಾಂಧಿ, ಶಾಸ್ತ್ರೀಯವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲಾ ಬಿಜೆಪಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜನ್ಮದಿನವನ್ನು ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಮಹಾತ್ಮಾ ಗಾಂಧಿ, ಶಾಸ್ತ್ರೀಯವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಅಹಿಂಸಾವಾದಿ ಗಾಂಧೀಜಿಯವರು ಸ್ವಚ್ಛತೆಗೆ ಮಹತ್ವ ನೀಡಿದ್ದಾರೆ. ಶಾಸ್ತ್ರೀಜಿಯವರ ಕೊಡುಗೆ ಅನನ್ಯವಾಗಿದೆ ಎಂದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಗಾಂಧೀಜಿ, ಶಾಸ್ತ್ರೀಜಿ ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅಂತಹ ಮಹಾತ್ಮರ ನೆನಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಡತನದಲ್ಲಿಯೇ ಹುಟ್ಟಿ ಬಡತನಲ್ಲಿಯೇ ಬೆಳೆದು ಕೊನೆಗೆ ಬಡತನದಲ್ಲಿಯೇ ನಿಧನರಾದ ಭಾರತದ ಏಕೈಕ ಅಂದರೆ ಅದು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಎಂದು ಸ್ಮರಿಸಿದರು.

ಬಳಿಕ ನಗರದ ಮಹಾತ್ಮಾ ಗಾಂಧೀಜಿ, ಲಾಲ್‌ಬಹಾದ್ದೂರ್ ಶಾಸ್ತ್ರೀ ವೃತ್ತಕ್ಕೆ ತೆರಳಿ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡ ವಿಜುಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ ಜಾಧವ್, ಮಲ್ಲಿಕಾರ್ಜುನ ಗಡಗಿ, ಸಂಜಯ ಪಾಟೀಲ ಕನಮಡಿ, ಗುರುಲಿಂಗಪ್ಪ ಅಂಗಡಿ, ಕೃಷ್ಣಾ ಗುನ್ಹಾಳಕರ, ವಿಜಯ ಜೋಶಿ, ಜಗದೀಶ ಮುಚ್ಚಂಡಿ, ಆನಂದ ಮುಚ್ಚಂಡಿ, ಪಾಪುಸಿಂಗ್‌ ರಜಪೂತ, ಲಕ್ಷ್ಮೀ ಕನ್ನೊಳ್ಳಿ, ಮಲ್ಲಮ್ಮ ಜೋಗೂರ ಸೇರಿದಂತೆ ಇತರರು ಉಪಸ್ಥಿತಿತರಿದ್ದರು.