ಸಾರಾಂಶ
ಹೊಸಕೋಟೆ ನಗರದ ತಾಲೂಕು ಕಚೇರಿ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಪ್ರತಿಭಟನೆಗಿಂತ ಹಬ್ಬಗಳ ಆಚರಣೆಗೆ ಹೆಚ್ಚಿನ ಆದ್ಯತೆಯಾಗಲಿ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಹೊಸಕೋಟೆಯಲ್ಲಿ ಗಾಂಧಿ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಹೊಸಕೋಟೆ
ನಗರದ ತಾಲೂಕು ಕಚೇರಿ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಪ್ರತಿಭಟನೆಗಿಂತ ಹಬ್ಬಗಳ ಆಚರಣೆಗೆ ಹೆಚ್ಚಿನ ಆದ್ಯತೆಯಾಗಲಿ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ನಗರದಲ್ಲಿ ಹಲವಾರು ದಶಕಗಳಿಂದ ಹಲವಾರು ಮಹನೀಯರ ಪ್ರತಿಮೆಗಳನ್ನು ಸ್ಥಾಪನೆ ಮಾಡಿದ್ದೇವೆ. ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಶಾಂತಿ ಸಂದೇಶ ನೀಡಿದಂತಹ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆ ಇರಲಿಲ್ಲ. ನಗರಸಭೆ ಅನುದಾನದಲ್ಲಿ ಒಟ್ಟು 10 ಲಕ್ಷ ರು. ಅನುದಾನದಲ್ಲಿ ಗಾಂಧೀ ಪ್ರತಿಮೆ ನಿರ್ಮಾಣ ಮಾಡುತ್ತಿದ್ದು, ಪ್ರಥಮವಾಗಿ 7.5 ಲಕ್ಷ ರು.ಬಿಡುಗಡೆ ಆಗಿದೆ. ಹೆಚ್ಚಿನ ಹಣ ಖರ್ಚು ಆದರೂ ಸಹ ನನ್ನ ವೈಯುಕ್ತಿಕ ಹಣದಲ್ಲಿ ಪ್ರತಿಮೆ ಪೂರ್ಣ ಗೊಳಿಸುತ್ತೇನೆ. ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುವ ಬದಲಾಗಿ ಹಬ್ಬಗಳ ಆಚರಣೆ ಸ್ಥಳವಾಗಲಿ ಎಂದರು.ಗಾಂಧಿ ಪ್ರತಿಮೆ ಹೋರಾಟ ಸಮಿತಿಯ ಅಧ್ಯಕ್ಷ ವರದಾಪುರ ನಾಗರಾಜ್ ಮಾತನಾಡಿ, ನಗರದಲ್ಲಿ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲು ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೆವು. ನಮ್ಮ ಹೋರಾಟದ ಪ್ರತಿಫಲವಾಗಿ ನಗರಸಭೆಯ ಅನುದಾನದಲ್ಲಿ ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿ ಅನುದಾನ ಸಹ ಬಿಡುಗಡೆಯಾಗಿದೆ. ಕೆಆರ್‌ಐಡಿಎಲ್ ಸಂಸ್ಥೆಯಿಂದ ಗಾಂಧಿ ಪ್ರತಿಮೆ ನಿರ್ಮಾಣ ಆಗಲಿದೆ. ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.ತಹಸೀಲ್ದಾರ್ ಸೋಮಶೇಖರ್, ನಗರಸಭೆ ಪೌರಾಯುಕ್ತ ಜಹೀರ್ ಅಬ್ಬಾಸ್, ಗಾಂಧಿ ಪ್ರತಿಮೆ ಹೋರಾಟ ಸಮಿತಿ ಸದಸ್ಯರಾದ ಹರಿದ್ರಾ, ಸಮೀರ್ ಹಸದ್, ಹೋರಾ ವೆಂಕಟೇಶ್, ಮುಖಂಡರಾದ ಆರ್‌ಟಿಸಿ ಗೋವಿಂದರಾಜ್, ರಾಕೇಶ್ ಹಾಜರಿದ್ದರು.