ಗಾಂಧಿ, ಶಾಸ್ತ್ರೀಯವರ ಆದರ್ಶ ಅನುಕರಣೀಯ

| Published : Oct 03 2024, 01:19 AM IST

ಸಾರಾಂಶ

ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರು ನುಡಿದಂತೆ ನಡೆದವರು. ನಡೆದಂತೆ ನುಡಿದವರು. ಅವರ ಉದಾತ್ತ ಚಿಂತನೆ, ಸರಳ ಜೀವನದ ಎಲ್ಲರಿಗೂ ಅನುಕರಣೀಯವಾಗಿದೆ ಎಂದು ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಶ್ರೀಗಳು ಹೇಳಿದರು.

ಗುಳೇದಗುಡ್ಡ: ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರು ನುಡಿದಂತೆ ನಡೆದವರು. ನಡೆದಂತೆ ನುಡಿದವರು. ಅವರ ಉದಾತ್ತ ಚಿಂತನೆ, ಸರಳ ಜೀವನದ ಎಲ್ಲರಿಗೂ ಅನುಕರಣೀಯವಾಗಿದೆ ಎಂದು ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಶ್ರೀಗಳು ಹೇಳಿದರು.

ಅವರು ಬುಧವಾರ ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಪ್ರಾಚಾರ್ಯ ಡಾ. ಎಚ್.ಎಸ್.ಘಂಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬಿ.ಎಡ್ ಪ್ರಶಿಕ್ಷಣಾರ್ಥಿಗಳಾದ ಉಪನ್ಯಾಸಕಿ ಸಕ್ಕೂಬಾಯಿ ನೆಲ್ಲೂರ ವಿಶೇಷ ಉಪನ್ಯಾಸ ನೀಡಿದರು. ಸುಧಾ ಮತ್ತಿಕಟ್ಟಿ, ಉಜ್ಮಾಪರವೀನ್ ನಂದನೂರ ಮಾತನಾಡಿದರು. ಇಂದುಮತಿ ಬೋರಣ್ಣವರ, ಸರಿತಾ ಚಂದನ್ನವರ, ವಿದ್ಯಾ ಭಾಪ್ರಿ, ನಡಗೇರವ್ವಾ ನಡುವಿನಮನಿ ಸ್ವಾಗತಿಸಿದರು. ಪವಿತ್ರಾ ಹಳ್ಳೂರ ನಿರೂಪಿಸಿದರು. ಭಾಗಿರಥಿ ಚಲವಾದಿ ವಂದಿಸಿದರು.