ಶ್ರೀ ಮಹಾವೀರ ಕಾಲೇಜಿನ ಮಾನವಿಕ ಸಂಘ ಮತ್ತು ಅರ್ಥಶಾಸ್ತ್ರ ವಿಭಾಗ ಸಂಘಟಿಸಿದ ಎಸ್.ಡಿ ಸಾಮ್ರಾಜ್ಯ ಸ್ಮಾರಕ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಭಾಷಣ ಸ್ಪರ್ಧೆಯನ್ನು ಹಳೆ ವಿದ್ಯಾರ್ಥಿ, ನ್ಯಾಯವಾದಿ ವಿಶಾಲ್ ಕುಮಾರ್ ಉದ್ಘಾಟಿಸಿದರು.
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಮಾನವಿಕ ಸಂಘ ಮತ್ತು ಅರ್ಥಶಾಸ್ತ್ರ ವಿಭಾಗ ಸಂಘಟಿಸಿದ ಎಸ್.ಡಿ ಸಾಮ್ರಾಜ್ಯ ಸ್ಮಾರಕ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಭಾಷಣ ಸ್ಪರ್ಧೆಯನ್ನು ಹಳೆ ವಿದ್ಯಾರ್ಥಿ, ನ್ಯಾಯವಾದಿ ವಿಶಾಲ್ ಕುಮಾರ್ ಉದ್ಘಾಟಿಸಿದರು.
ಗಾಂಧೀಜಿಯವರ ತತ್ತ್ವಗಳು ಮತ್ತು ಆದರ್ಶಗಳನ್ನು ಗುಣಗಾನ ಮಾಡಿ ನಮ್ಮ ದೈನಂದಿನ ಜೀವನದಲಿ. ಅವುಗಳನ್ನು, ಅಳವಡಿಸಿಕೊಳ್ಳುವ ಮಹತ್ವ ತಿಳಿಸಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ, "ಮಹಾತ್ಮ ಗಾಂಧೀಜಿ ಪ್ರಪಂಚ ಕಂಡ ಒರ್ವ ಶ್ರೇಷ್ಠ ವ್ಯಕ್ತಿ, ಅವರು ದೇಶಕ್ಕೆ ನೀಡಿದ ಕೊಡುಗೆ ಶ್ರೇಷ್ಠವಾದದ್ದು ಮತ್ತು ಸದಾನೆನಪಿನಲ್ಲಿಡುವಂತದ್ದು, ಆಗರ್ಭ ಶ್ರೀಮಂತನಾಗಿ ಹುಟ್ಟಿದ್ದ ಗಾಧಿಯವರು ಎಷ್ಟು ಸರಳವಾಗಿ ಬದುಕಿದರು ಎಲ್ಲಾ ವಿದ್ಯಾರ್ಥಿಗಳು ಅವರ ಸರಳತೆಯನ್ನು ಕಲಿಯಬೇಕು'''''''''''''''''''''''''''''''' ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಹಾವೀರ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ ಮಾತನಾಡಿ “ಮಹಾತ್ಮ ಗಾಂಧೀಜಿಯವರ ಜೀವನ ಹೋರಾಟ ಮತ್ತು ಪ್ರಜಾಪ್ರಭುತ್ವದ ತತ್ವಗಳು ಇಂದಿಗೂ ಪ್ರಸ್ತುತವಾಗಿದೆ. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ, ತಮ್ಮ ಜೀವನದ ಪ್ರಮುಖ ಅನುಭನಗಳನ್ನು ಪಡೆವ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದರು, ಅವರು ಸ್ವಾತಂತ್ರ್ಯ ಹೋರಾಟದಲಿ ಪ್ರಮುಖ ಪಾತ್ರ ವಹಿಸಿ ದೇಶದ ಜನರಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಯ ಅರಿವು ಮೂಡಿಸಿದರು. ಗಾಂಧೀಜಿಯವರ ಪ್ರಕಾರ ಪ್ರಜಾಪ್ರಭುತ್ವವೆಂದರೆ ಜನರ ಅಭಿಪ್ರಾಯಗಳಿಗೆ ಗೌರವ ನೀಡುವುದು ಮತ್ತು ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸುವುದು. ಸಮಾಜದಲ್ಲಿ ಶಾಂತಿ ಸಹಕಾರ, ಸತ್ಯ ಅಹಿಂಸೆ, ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಜೀವನದಲ್ಲಿ ಶಿಸ್ತು ಪ್ರಾಮಾಣಿಕತೆ, ಮತ್ತು ಜವಾಬ್ದಾರಿಯ ನಡವಳಿಕೆ ತಮ್ಮದಾಗಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ. ಕಾಲೇಜಿನ ಪ್ರತಿಭಾನ್ವಿತ ಹಳೆ ವಿದ್ಯಾರ್ಥಿನಿ ರಿಶೆಲ್ ಬ್ರಿಟಿ ಫರ್ನಾಂಡಿಸ್ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿ ಗೌರವ ಡಾಕ ರೇಟ್ ಪಡೆದ ಸಾಧನೆಗೆ ಕಾಲೇಜಿನ ವತಿಯಿಂದ అಭಿನಂದಿಸಲಾಯಿತು.
ಪ್ರಾಂಶುಪಾಲ ಡಾ.ರಾಧಾಕೃಷ್ಣ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಮಾನವಿಕ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಮರಿಯಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. 26 ಕಾಲೇಜುಗಳ 51 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು, ಕಾರ್ಯಕ್ರಮದ ಸಂಯೋಜಕಿ ಮತ್ತು ಅರ್ಥ ಶಾಸ್ತ್ರ ವಿಭಾಗ ಮುಖ್ಯಸ್ಥೆ ಗೀತಾ ರಾಮಕೃಷ್ಣ ವಂದಿಸಿದರು. ವಿದ್ಯಾರ್ಥಿನಿ ಆಶ್ವಿನಿ ನಿರೂಪಿಸಿದರು.