ಗಾಂಧೀಜಿ ಮತ್ತು ಶಾಸ್ತ್ರಿಜಿ ಅಪ್ರತಿಮ ದೇಶಭಕ್ತರು: ಪೂರ್ಣಿಮಾ

| Published : Oct 04 2024, 01:05 AM IST

ಗಾಂಧೀಜಿ ಮತ್ತು ಶಾಸ್ತ್ರಿಜಿ ಅಪ್ರತಿಮ ದೇಶಭಕ್ತರು: ಪೂರ್ಣಿಮಾ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ರಾಷ್ಟ್ರಪಿತ ಮಹಾತ್ಮಗಾಂಧೀಜಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಅಪ್ರತಿಮ ದೇಶಭಕ್ತರಾಗಿದ್ದ ಅವರ ಸರಳ ಜೀವನ ಮತ್ತು ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು

ರಾಷ್ಟ್ರಪಿತ ಮಹಾತ್ಮಗಾಂಧೀಜಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಅಪ್ರತಿಮ ದೇಶಭಕ್ತರಾಗಿದ್ದ ಅವರ ಸರಳ ಜೀವನ ಮತ್ತು ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 155 ನೇ ಮಹಾತ್ಮಗಾಂಧಿ ಹಾಗೂ 120ನೇ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾಂಧೀಜಿಯವರ ಬಗ್ಗೆ ಶಾಲೆಯಿಂದಲೇ ತಿಳಿದುಕೊಂಡಿದ್ದೇವೆ. ಸರಳ, ಸಜ್ಜನಿಕೆಯ, ಅಪ್ರತಿಮ ದೇಶಭಕ್ತಿಯುಳ್ಳ ಮಹಾನ್ ಹೋರಾಟಗಾರ. ಅಹಿಂಸಾವಾದಿ ಮೂಲ ನಾಯಕತ್ವ ಗುಣಗಳನ್ನು ಹೊಂದಿದ್ದನ್ನು ಗಾಂಧಿಜೀ ಅವರಲ್ಲಿ ಕಾಣಲು ಸಾಧ್ಯ. ಅವರು ಸತ್ಯಹರಿಶ್ಚಂದ್ರ ನಾಟಕ ನೋಡಿ ತಮ್ಮ ಜೀವನ ಶೈಲಿಯನ್ನೇ ಬದಲಾವಣೆ ಮಾಡಿಕೊಂಡು ಇಡೀ ಪ್ರಪಂಚವೇ ಗಾಂಧಿ ಎಂದರೆ ಗೌರವ ನೀಡುವಂತಹ ವ್ಯಕ್ತಿತ್ವ ರೂಪಿಸಿಕೊಂಡು ಮಹಾನ್ ನಾಯಕರಾಗಿ ಹೋರಾಟ ಮಾಡಿದರು ಎಂದರು. ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರೀ ಯವರು ಯುವಕರಿದ್ದಾಗಲೇ ಸ್ವತಂತ್ರ ಸಂಗ್ರಾಮಕ್ಕೆ ಧುಮಿಕಿದವರು. ಬಡ ಕುಟುಂಬದಿಂದ ಬಂದ ಇವರು ದೇಶದ ಆರ್ಥಿಕತೆ ಸುಧಾರಿಸಿದ್ದರು. ಪ್ರಧಾನ ಮಂತ್ರಿಯಾಗಿ ದೇಶದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಯುದ್ಧಗಳು ಸಂಭವಿಸಿದರೂ ಧೈರ್ಯದಿಂದ ಎದುರಿಸಿದ್ದರು. ‘ಜೈ ಜವಾನ್,ಜೈ ಕಿಸಾನ್ ಎಂದು ಘೋಷಿಸಿ ರೈತರ ಮತ್ತು ಸೈನಿಕರ ಶ್ರಮ ಗುರುತಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿದರು ಎಂದರು.

ರಘುಪತಿ ರಾಘವ ರಾಜರಾಮ್ ಭಜನೆಯನ್ನು ಇದೇ ಸಂದರ್ಭದಲ್ಲಿ ಹಾಡಿ ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧರಾಜನಾಯ್ಕ, ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್ ಮಾತನಾಡಿದರು. ಡಾ.ರವಿಕುಮಾರ್, ಪಶುವೈದ್ಯ ಡಾ.ಉಮೇಶ್, ಉಪ ತಹಸೀಲ್ದಾರ್ ಮಂಜುನಾಥ್, ನಾಗರತ್ನ, ಸಿಡಿಪಿಒ ಶಿವ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.2ಕೆಕೆಡಿಯು2.ಕಡೂರು ತಾಲೂಕು ಆಡಳಿತ ತಾ.ಪಂಚಾಯಿತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಅವರ 155ನೇ, ಲಾಲ್ ಬಹದ್ದೂರ್ ಶಾಸ್ತ್ರೀ ಅವರ 120ನೇ ಜಯಂತಿ ನಡೆಯಿತು.