ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಈ ದೇಶದಲ್ಲಿ ಗಾಂಧೀಜಿ, ಅಂಬೇಡ್ಕರ್ ಇವರೆಲ್ಲ ನಮಗೆ ದೇವರು ಕೊಟ್ಟ ವರ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಬಣ್ಣಿಸಿದರು.ನಗರದ ಜಿಲ್ಲಾ ವಕೀಲರ ಸಂಘ, ಹೊಯ್ಸಳ ವೇದಿಕೆಯಲ್ಲಿ ಜಿಲ್ಲಾ ವಕೀಲರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಬೇಕಾದರೇ ನಾವು ಹಬ್ಬದ ಸಂಭ್ರಮದಲ್ಲಿ ಆಚರಿಸಬೇಕು. ಅದಕ್ಕಿಂತ ಮುಖ್ಯವಾಗಿ ಅಂಬೇಡ್ಕರ್ ರವರ ಸಂವಿಧಾನದ ತತ್ವ ಸಿದ್ಧಾಂತವನ್ನು ಪಾಲಿಸಿದರೇ ಈ ಜನ್ಮ ದಿನಾಚರಣೆಗೆ ಸಾರ್ಥಕವಾಗುತ್ತದೆ. ಈ ದೇಶದಲ್ಲಿ ಮಹಾತ್ಮ ಗಾಂಧೀಜಿಯವರು, ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇವರೆಲ್ಲರನ್ನು ನಮಗೆ ದೇವರು ಕೊಟ್ಟ ಗಿಫ್ಟ್. ಇವರು ನಮ್ಮ ದೇಶದಲ್ಲಿ ಹುಟ್ಟದೆ ಇದ್ದರೇ ನಮ್ಮ ದೇಶದ ಇಷ್ಟೊಂದು ಸಮೃದ್ಧ ಪರಿಸ್ಥಿತಿ ಬರುತ್ತಿತ್ತೊ ಗೊತ್ತಿಲ್ಲ. ಹಿಂಸೆ ತ್ಯಜಿಸಿ ಅಹಿಂಸೆವಾದದಿಂದಲೇ ಈ ಭಾರತಕ್ಕೆ ಸ್ವಾತಂತ್ರ್ಯ ತರಲು ಮಹಾತ್ಮ ಗಾಂಧೀಜಿಯವರು ಈ ದೇಶದಕ್ಕೆ ಸ್ವಾತಂತ್ರ ತಂದುಕೊಟ್ಟರು. ಅವರ ಜೊತೆ ಅನೇಕರು ಹೋರಾಟ ಮಾಡಿದ್ದಾರೆ ಎಂದರು.
ಅಂತಹ ಮಹಾನೀಯರು ಈ ದೇಶದಲ್ಲಿ ಜನ್ಮ ತಾಳದೇ ಇದ್ದರೇ ದೇಶದ ಪರಿಸ್ಥಿತಿ ಹೇಗಿರುತಿತ್ತು ಎಂದು ಎಚ್ಚರಿಸಿದರು. ಅಂಬೇಡ್ಕರ್ ದೇಶದಲ್ಲಿ ಹುಟ್ಟದೆ ಇದ್ದರೇ ನಮಗೆ ಇಂತಹ ಮಹತ್ವವಾದಂತಹ ಸಂವಿಧಾನ ಸಿಕ್ಕುತಿತ್ತೋ ಎನ್ನುವ ಒಂದು ಯೋಚನೆ ಇತ್ತು. ಅಂಬೇಡ್ಕರ್ ಛೇರ್‍ಮನ್ ಆಗಿದ್ದರಿಂದ ಅನುಕೂಲವಾಯಿತು. ಅಂಬೇಡ್ಕರ್ ರವರು ತಮ್ಮ ಬಾಲ್ಯ ಜೀವನದಿಂದ ಎಲ್ಲಾ ತರಹದ ಕಷ್ಟಗಳನ್ನು ನೋಡಿದ್ದಾರೆ. ದೇಶದ ಹಿತದೃಷ್ಠಿಯಲ್ಲಿ ಇಂತಹ ಶ್ರೇಷ್ಠ ಸಂವಿಧಾನ ಸಿಕ್ಕಿದೆ ಎಂದು ಹೇಳಿದರು.ಇದಕ್ಕೂ ಮೊದಲು ವಕೀಲರ ಸಂಘದ ಮುಂಬಾಗ ನೂತನವಾಗಿ ನಿರ್ಮಿಸಿರುವ ನೀರಿನ ಕಾರಂಜಿಯನ್ನು ಉದ್ಘಾಟಿಸಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೈಲೂರು ಮುಂಡರಂಗಿ ಮತ್ತು ನಿಶ್ಚಲ ಮಂಟಪದ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ, ಕರ್ನಾಟಕ ಉಚ್ಛ ನ್ಯಾಯಮೂರ್ತಿ ಎಚ್.ಪಿ. ಸಂದೇಶ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ. ಪ್ರಸನ್ನ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂತೋಷ್, ಉಪಾಧ್ಯಕ್ಷ ಎಚ್.ಎನ್. ಯೋಗಿಶ್ ಮೌರ್ಯ, ಖಜಾಂಚಿ ಎಚ್ ಎನ್ ಪ್ರತಾಪ್, ಜಂಟಿ ಕಾರ್ಯದರ್ಶಿ ಆರ್. ರೂಪ, ದೇವರಾಜು ಇತರರು ಉಪಸ್ಥಿತರಿದ್ದರು.