ಸಾರಾಂಶ
ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆಯ ಪ್ರತೀಕವಾಗಿದ್ದು, ಅವರ ಬದುಕು ಮತ್ತು ಸಾಧನೆಗಳು ಯುವಪೀಳಿಗೆಗೆ ಮಾದರಿ ಎಂದು ಗಚ್ಚಿನಮಠದ ಮಹಾಂತಯ್ಯ ಹೇಳಿದರು.
ಹುನಗುಂದ: ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆಯ ಪ್ರತೀಕವಾಗಿದ್ದು, ಅವರ ಬದುಕು ಮತ್ತು ಸಾಧನೆಗಳು ಯುವಪೀಳಿಗೆಗೆ ಮಾದರಿ ಎಂದು ಗಚ್ಚಿನಮಠದ ಮಹಾಂತಯ್ಯ ಹೇಳಿದರು.
ಪಟ್ಟಣದ ಮೇನ್ ಬಜಾರದ ಗಾಂಧಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ-ಶಾಸ್ತ್ರಿ ಜಯಂತಿಯ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಿ ಮಾತನಾಡಿದ ಅವರು, ಅನೇಕ ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಮತ್ತು ಬಲಿದಾನದಿಂದ ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ಭಾರತವನ್ನು ಸ್ವಾತಂತ್ರ್ಯಗೊಳಿಸಿದ್ದಾರೆ. ಈ ದೇಶ ಸ್ವಾತಂತ್ರ್ಯಗೊಳ್ಳಲಿ ಎನ್ನುವ ಉದ್ದೇಶದಿಂದ ಜಾತಿ, ಮತ, ಪಂಥ ಎನ್ನದೇ ಈ ದೇಶಕ್ಕಾಗಿ ಅನೇಕರು ಹೋರಾಡಿದ್ದಾರೆ. ಅವರ ತ್ಯಾಗ ಸ್ಮರಣೀಯ ಎಂದು ಹೇಳಿದರು.ಈ ವೇಳೆ ನಿವೃತ್ತ ಶಿಕ್ಷಕ ಜಿ.ಬಿ.ಕಂಬಾಳಿಮಠ, ವಿ.ಮ. ಬ್ಯಾಂಕ್ ನಿರ್ದೇಶಕ ರವಿ ಹುಚನೂರ, ಪುರಸಭೆ ಸದಸ್ಯ ಶಾಂತಪ್ಪ ಹೊಸಮನಿ, ಮಹಾಂತೇಶ ಮಠ, ಶಿವಪುತ್ರಪ್ಪ ತಾರಿವಾಳ, ಶಿವಪ್ಪ ಸುಂಕಾಪೂರ, ಕೃಷ್ಣಾ ಜಾಲಿಹಾಳ, ಸುರೇಶ ಹಳಪೇಟಿ, ಶಿವಾನಂದ ಕಂಠಿ, ರಾಜು ಬಯ್ಯಾಪುರ, ಗಿರಿಮಲ್ಲಪ್ಪ ಹಳಪೇಟಿ, ಶಿವಪ್ಪ ಹಳಪೇಟಿ, ಮುನ್ನಾ ಬಾಗವಾನ, ನಾಗಪ್ಪ ತ್ಯಾಪಿ, ಮಂಜು ಕೋಲಾರ ಇತರರಿದ್ದರು.