ರಾಮನಗರ: ಮಹಾತ್ಮ ಗಾಂಧೀಜಿ ಎನ್ನುವುದು ಬರಿ ಹೆಸರಲ್ಲ ಅದೊಂದು ಶಕ್ತಿ. ಅವರು ಭಾರತ ದೇಶಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಆದರ್ಶ. ಇಂತಹ ವ್ಯಕ್ತಿ ನಮ್ಮ ದೇಶಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ ತಂದುಕೊಟ್ಟ ಧೀಮಂತ ನಾಯಕರು. ಅವರು ಹುಟ್ಟಿದ ನೆಲದಲ್ಲಿ ಜನಿಸಿರುವ ನಾವೆಲ್ಲರೂ ಭಾಗ್ಯವಂತರು ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ನರಸಿಂಹಮೂರ್ತಿ ಬಣ್ಣಿಸಿದರು

ರಾಮನಗರ: ಮಹಾತ್ಮ ಗಾಂಧೀಜಿ ಎನ್ನುವುದು ಬರಿ ಹೆಸರಲ್ಲ ಅದೊಂದು ಶಕ್ತಿ. ಅವರು ಭಾರತ ದೇಶಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಆದರ್ಶ. ಇಂತಹ ವ್ಯಕ್ತಿ ನಮ್ಮ ದೇಶಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ ತಂದುಕೊಟ್ಟ ಧೀಮಂತ ನಾಯಕರು. ಅವರು ಹುಟ್ಟಿದ ನೆಲದಲ್ಲಿ ಜನಿಸಿರುವ ನಾವೆಲ್ಲರೂ ಭಾಗ್ಯವಂತರು ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ನರಸಿಂಹಮೂರ್ತಿ ಬಣ್ಣಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ 157ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ 122ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಬ್ರಿಟಿಷರು ಹಾಗೂ ಇತರರ ದಾಸ್ಯದಲ್ಲಿದ್ದ ದೇಶಗಳು ಹೋರಾಟ ಅಥವಾ ಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದುಕೊಂಡಿದೆ. ಆದರೆ, ಧರ್ಮ ಮತ್ತು ಅಹಿಂಸೆ ಮೂಲಕ ಸ್ವಾತಂತ್ರ್ಯ ಪಡೆದುಕೊಂಡ ದೇಶವೆಂದರೆ ಅದು ಭಾರತ. ಇದಕ್ಕೆ ಮುಖ್ಯ ಕಾರಣ ಮಹಾತ್ಮ ಗಾಂಧೀಜಿ. ಅದೇ ರೀತಿ ಆಡಳಿತದಲ್ಲಿ ಆದರ್ಶಪ್ರಾಯವಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಕಾಣಲಾಗುತ್ತದೆ. ದೇಶದಲ್ಲಿ ಬಡತನ ಹಾಗೂ ಆಹಾರ ಸಮಸ್ಯೆಯಿದ್ದಾಗ ಅವರ ಕುಟುಂಬವೂ ಸಹ ಒಂದು ಹೊತ್ತು ಉಪವಾಸ ಮಾಡುತ್ತಿತ್ತು. ಇಂತಹ ಇಬ್ಬರು ಆದರ್ಶ ವ್ಯಕ್ತಿಗಳನ್ನು ಎಲ್ಲರೂ ಸ್ಮರಿಸಬೇಕು, ಯುವಪೀಳಿಗೆ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ಡಾ. ಯು.ಎಂ.ರವಿ ಮಾತನಾಡಿ, ಶ್ರೀಮಂತ ಮನೆತನದಲ್ಲಿ ಹುಟ್ಟಿ ಸರಳವಾಗಿ ಬದುಕಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಶ್ರೇಷ್ಠ ವ್ಯಕ್ತಿಯೇ ಮಹಾತ್ಮ ಗಾಂಧೀಜಿ. ನನ್ನ ಜೀವನವೇ ನನ್ನ ಸಂದೇಶ ಎಂಬುದನ್ನು ಸಾರಿದ ಮಹತ್ಮಾರ ಜಯಂತಿಯನ್ನು ವಿಶ್ವಸಂಸ್ಥೆಯೂ ಸೇರಿದಂತೆ ಪ್ರಪಂಚದ 213 ದೇಶದಲ್ಲಿ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದು ಗಾಂಧೀಜಿಯವರ ವ್ಯಕ್ತಿತ್ವದ ವಿಶೇಷ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೇಜರ್ ಡಾ. ಲಕ್ಷ್ಮೀ ಪ್ರತಿಜ್ಞಾ ವಿಧಿ ಬೋಧಿಸಿದರು. ಗಾಯಕಿ ರಮಣಿ ಮತ್ತು ತಂಡ ಗಾಂಧೀಜಿಯವರ ಪ್ರಿಯ ಭಜನೆಗಳನ್ನು ಪ್ರಸ್ತುತಪಡಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಬೋರೇಗೌಡ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜ್ಯೋತಿ, ಎನ್ನೆಸ್ಸೆಸ್್‌ ಅಧಿಕಾರಿ ಡಾ. ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶ್ರಮದಾನ ಮಾಡಿದರು.

2ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜಯಂತಿ ಆಚರಿಸಲಾಯಿತು.