ಗಾಂಧೀಜಿ ತತ್ವಾದರ್ಶಗಳನ್ನು ಯುವಜನಾಂಗ ಪಾಲಿಸಬೇಕು: ಕೆ.ಎಂ.ಉದಯ್

| Published : Oct 03 2024, 01:19 AM IST

ಸಾರಾಂಶ

My Experiment with Truth ಮತ್ತು ನನ್ನ ಜೀವನವೇ ನನಗೆ ಸಂದೇಶ ಎಂದು ನಾಡಿಗೆ ಮಹತ್ವದ ವಿಚಾರಗಳನ್ನು ತಿಳಿಸಿಕೊಟ್ಟವರು ಬಾಪೂಜಿ. 1857ರ ಸಿಪಾಯಿ ದಂಗೆಯಿಂದ ಹಿಡಿದು 1942ರ ಕ್ವಿಟ್ ಇಂಡಿಯಾ ಚಳವಳಿಯವರೆಗೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲ ಮಹನೀಯರುಗಳನ್ನ ಸ್ಮರಿಸಿಕೊಳ್ಳುವ ದಿನ ಇದಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶಗಳನ್ನು ಯುವ ಜನಾಂಗ ಪಾಲಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ಕಿವಿಮಾತು ಹೇಳಿದರು.

ಪಟ್ಟಣದ ಹೊರವಲಯದ ಶ್ರೀಕದಲೂರು ಉದಯ್ ಚಾರಿಟೇಬಲ್ ಟ್ರಸ್ಟ್‌ನಿಂದ ಗಾಂಧಿ ಜಯಂತಿಯಲ್ಲಿ ಮಾತನಾಡಿದ ಅವರು, ಕಲುಷಿತ ಗೊಂಡಿರುವ ಸಮಾಜವನ್ನು ಸರಿಪಡಿಸುವ ನಿಟ್ಟಿನಲ್ಲಿ ಅನೇಕ ಮಹನೀಯರುಗಳ ಆಚಾರ ವಿಚಾರಗಳನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಬೋರೇಗೌಡ ಮಾತನಾಡಿ, ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಭಾವನೆಗಳೊಂದಿಗೆ ನಾವೆಲ್ಲ ಮಾನವೀಯ ನೆಲೆಗಟ್ಟಿನಲ್ಲಿ ಬದುಕಬೇಕಾಗಿದೆ. ಜಾತಿ ಧರ್ಮವನ್ನು ಹೊರತುಪಡಿಸಿ ನವ ಸಮಾಜ ನಿರ್ಮಿಸಬೇಕಿದೆ ಎಂದರು.

My Experiment with Truth ಮತ್ತು ನನ್ನ ಜೀವನವೇ ನನಗೆ ಸಂದೇಶ ಎಂದು ನಾಡಿಗೆ ಮಹತ್ವದ ವಿಚಾರಗಳನ್ನು ತಿಳಿಸಿಕೊಟ್ಟವರು ಬಾಪೂಜಿ. 1857ರ ಸಿಪಾಯಿ ದಂಗೆಯಿಂದ ಹಿಡಿದು 1942ರ ಕ್ವಿಟ್ ಇಂಡಿಯಾ ಚಳವಳಿಯವರೆಗೆ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲ ಮಹನೀಯರುಗಳನ್ನ ಸ್ಮರಿಸಿಕೊಳ್ಳುವ ದಿನ ಇದಾಗಿದೆ ಎಂದರು.

ಮಾಡು ಇಲ್ಲವೇ ಮಡಿ ಮತ್ತು ಸರಳ ಜೀವನ ಉದಾತ್ತ ಆಲೋಚನೆ (simple living High level Thinking) ಈ ವಿಚಾರಕ್ಕೆ ಕಟಿಬದ್ಧರಾದವರು ಬಾಪೂಜಿ. ದಾಸ್ಯದ ಸಂಕೋಲೆಗಳಿಂದ ಬಂದಿತರಾಗಿ ತಮ್ಮೆಲ್ಲ ಹಕ್ಕು ಬಾಧ್ಯತೆಗಳನ್ನಪ ಕಳೆದುಕೊಂಡಿದ್ದ ಎಲ್ಲ ವರ್ಗದವರ ಜನಪ್ರತಿನಿಧಿಯಾಗಿ ನಿಸ್ವಾರ್ಥ ಮನೋಭಾವನೆಯಿಂದ ದುಡಿದು ರಾಷ್ಟ್ರಭಕ್ತಿಯನ್ನು ದೇಶ ಪ್ರೇಮವನ್ನು ಜನರ ಮನಸ್ಸಿನಲ್ಲಿ ನೆಲೆಸುವಂತೆ ಮಾಡಿದ ಧೀಮಂತ ವ್ಯಕ್ತಿತ್ವ ಬಾಪೂಜಿಯವರದು ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜೀವ್, ಚೆಲುವರಾಜು, ಮುಖಂಡರಾದ ಅಜ್ಜಳ್ಳಿ ರಾಮಕೃಷ್ಣ, ಬಿ.ಬಸವರಾಜು, ಕದಲೂರು ರಾಮಕೃಷ್ಣ, ದೇಶಹಳ್ಳಿ ಮೋಹನ್ ಕುಮಾರ್, ಪುರಸಭಾಧ್ಯಕ್ಷೆ ಕೋಕಿಲ ಮತ್ತು ಅನೇಕ ಪುರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.

ಬ್ಲಾಕ್ ಕಾಂಗ್ರೆಸ್ ನಿಂದ ಗಾಂಧಿನಡಿಗೆ ಕಾರ್ಯಕ್ರಮ ಯಶಸ್ವಿ

ಮದ್ದೂರು:

ಗಾಂಧಿ ಜಯಂತಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷತೆಯಲ್ಲಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬುಧವಾರ ಗಾಂಧಿ ನಡಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಪಟ್ಟಣದ ಶಿವಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಶಾಸಕ ಕೆ.ಎಂ.ಉದಯ್ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ನಂತರ ಪಕ್ಷದವಿವಿಧ ಘಟಕಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಶ್ವೇತ ವಸ್ತ್ರದಾರಿಯಾಗಿ ತಲೆಗೆ ಗಾಂಧಿ ಟೋಪಿ ಧರಿಸಿ ಕಾಂಗ್ರೆಸ್ ಕಚೇರಿಯಿಂದ ಹಳೇ ಬೆಂಗಳೂರು, ಮೈಸೂರು ಹೆದ್ದಾರಿ ಮೂಲಕ ಹೋರಾಟದ ಸಂಕೇತವಾದ ಶಿವಪುರ ಧ್ವಜ ಸತ್ಯಾಗ್ರಹ ಸೌದದವರೆಗೆ ಗಾಂಧಿನಡಿಗೆ ನಡೆದು ಸಾರ್ವಜನಿಕರ ಗಮನ ಸೆಳೆಯಿತು.