ಜಾತಿ ಜಯಂತಿಗಳಿಗೆ ಜನ ಸೇರುತ್ತಾರೆ, ಆದರೆ ಇಂತಹ ಮಹಾತ್ಮರ ಜಯಂತಿಗಳಿಗೆ ಜನ ಬರುವುದಿರುವುದು ದುಖಃದ ಸಂಗತಿ

ಹರಪನಹಳ್ಳಿ: ಇಂದು ಮಹಾತ್ಮ ಗಾಂಧೀಜಿ,ಲಾಲ್‌ ಬಹದ್ದೂರು ಶಾಸ್ತ್ರಿ ವಿಚಾರಧಾರೆ ಕಣ್ಮರೆಯಾಗುತ್ತಿದ್ದು, ಅವರ ಆದರ್ಶ,ತತ್ವ ಸಿದ್ದಾಂತ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ತಿಳಿಸಿದ್ದಾರೆ.

ಅವರು ನಗರದ ಕಾಶಿ ಮಠದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಕ್ರವಾರ ಮಾತನಾಡಿದರು.

ಜಾತಿ ಜಯಂತಿಗಳಿಗೆ ಜನ ಸೇರುತ್ತಾರೆ, ಆದರೆ ಇಂತಹ ಮಹಾತ್ಮರ ಜಯಂತಿಗಳಿಗೆ ಜನ ಬರುವುದಿರುವುದು ದುಖಃದ ಸಂಗತಿ ಎಂದ ಅವರು, ಅಂಹಿಸೆಯಿಂದ ಸ್ವಾತಂತ್ರ್ಯ ತಂದು ಕೊಟ್ಟು ಅಂತಾರಾಷ್ಚ್ರೀಯ ಮಟ್ಟದಲ್ಲಿ ಗೌರವಿಸಲ್ಪಡುತ್ತಾರೆ, ಲಾಲ್ ಬಹುದ್ದೂರು ಶಾಸ್ತ್ರೀ ಯಾವುದೇ ಕಪ್ಪು ಚುಕ್ಕಿ ಇಲ್ಲದೇ ಸರಳ ವ್ಯಕ್ತಿತ್ವದ ಪ್ರಧಾನಿ ಆಗಿದ್ದರು, ಅಂತವರು ಇವತ್ತಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಉದಯಶಂಕರ ಮಾತನಾಡಿ, ಗಾಂಧೀಜಿ ಸತ್ಯ, ಅಹಿಂಸೆಯಿಂದ ಸ್ವಾತಂತ್ರ್ಯ ತಂದು ಕೊಟ್ಟು ಇಡೀ ಜಗತ್ತೆ ಗೆದ್ದಂತಹ ವ್ಯಕ್ತಿ, ಲಾಲ್ ಬಹಾದ್ದೂರ ಶಾಸ್ತ್ರಿ ಭಾರತದ ರಾಜಕೀಯದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ, ಇಂತವರ ವಿಚಾರ ಅಳವಡಿಸಿಕೊಂಡರೆ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ತಾಪಂ ಮಾಜಿ ಸದಸ್ಯ ಹುಲ್ಲಿಕಟ್ಟಿ ಚಂದ್ರಪ್ಪ ಮಾತನಾಡಿ, ಗಾಂಧೀಜಿ ತಂದು ಕೊಟ್ಟಿರುವ ಸ್ವಾತಂತ್ರ್ಯ ಅರ್ಥಗರ್ಭಿತವಾಗಿ ಉಳಿಸಿಕೊಂಡು ಹೋಗಬೇಕಿದೆ ಎಂದರು.

ನಗರಸಭಾ ಮಾಜಿ ಸದಸ್ಯ ಅಭ್ದುಲ್‌ ರಹಿಮಾನ್‌ ಸಾಹೇಬ್ ಮಾತನಾಡಿ, ಗಾಂಧೀಜಿಯವರಿಂದ ಪಾಕಿಸ್ತಾನ ಉದಯವಾಯಿತು ಎಂದು ಕೆಲವರು ಹೇಳುವುದು ತಪ್ಪು ಎಂದ ಅವರು, ಅಂದಿನ ಸಂದರ್ಭ ಸನ್ನಿವೇಶ ಆಗಿತ್ತು, ಲಾಲ್‌ ಬಹದ್ದೂರು ಶಾಸ್ತ್ರಿ ಕಪ್ಪು ಚುಕ್ಕಿ ಇಲ್ಲದ ಸರಳ ಪ್ರದಾನಿ ಆಗಿದ್ದರು ಎಂದು ಹೇಳಿದರು.

ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಪ್ರಚಾರ ಸಮಿತಿ ಅಧ್ಯಕ್ಷೆ ಹಲುವಾಗಲು ವನಜಾಕ್ಷಮ್ಮ, ಚಿಗಟೇರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುಬೇರಪ್ಪ, ಚಿಗಟೇರಿ ಬ್ಲಾಕ್‌ ಪ್ರಚಾರ ಸಮಿತಿ ಅಧ್ಯಕ್ಷ ದೇವೇಂದ್ರಗೌಡ, ವಕೀಲ ಟಿ.ವೆಂಕಟೇಶ, ಮುಜುಬರ್‌ ರಹಿಮಾನ್, ಪಿಕಾರ್ಡ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ ಕಮ್ಮಾರ ಮಾತನಾಡಿದರು.

ಮುಖಂಡ ಗುಂಡಗತ್ತಿ ಕೊಟ್ರಪ್ಪ, ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಪೂಜಾರ ಕೃಷ್ಣನಾಯ್ಕ, ತಾಪ ಮಾಜಿ ಸದಸ್ಯ ಮೈದೂರು ರಾಮಣ್ಣ, ಟಿ.ಎಚ್.ಎಂ. ಮಂಜುನಾಥ, ಇಸ್ಮಾಯಿಲ್‌ ಎಲಿಗಾರ, ಉದ್ದಾರ ಗಣೇಶ, ಲಾಟಿದಾದಾಪೀರ್‌, ಕವಿತಾ ಸುರೇಶ, ಒ. ಮಹಾಂತೇಶ, ಅಭು, ಡಂಕಿ ವಾಸೀಮ್, ಶಿವರಾಜ, ಪ್ರಸಾದ್‌ ಕಾವಡಿ, ನಾಗರಾಜ ಇತರರು ಪಾಲ್ಗೊಂಡಿದ್ದರು.