ಸಾರಾಂಶ
ಈ ಕಾರ್ಯಕ್ರಮದಲ್ಲಿ ಐದು ಬಡ ಮಹಿಳೆಯರಿಗೆ ಕಂಬಳಿ ಸೀರೆ, ಅರಿಶಿಣ- ಕುಂಕುಮ, ಬಳೆಗಳನ್ನು, ಮೂರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ಶ್ರೀ ಕೃಷ್ಣ ಸತ್ಸಂಗ ಹಾಗೂ ಇತರೆ ಸತ್ಸಂಗಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತಮ್ಮ ಆಶ್ರಮದಲ್ಲಿ ನಡೆಸಿಕೊಂಡು ಬರುತ್ತಿದ್ದರು ಎಂದು ವಿ.ಎಸ್.ಎಸ್.ಎನ್ ಅಧ್ಯಕ್ಷ ಎಂ.ವೀರಣ್ಣ ತಿಳಿಸಿದರು.ವಿಜಯಪುರ ಪಟ್ಟಣದ ಅರ್ಜುನ ಪ್ರತಿಷ್ಠಾಪಿತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಕೃಷ್ಣ ಯತಿಂದ್ರ ಸೇವಾಟ್ರಸ್ಟ್ ರವರ ವತಿಯಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ, ಶ್ರೀ ಕೈವಾರ ಯೋಗಿನಾರೇಯಣ ಯತೀಂದ್ರರ ಹಾಗೂ ಕನಕ ಪುರಂದರ ಗೀತಾ ತತ್ವಾಮೃತ ರಸಧಾರೆಯ ೨೩೭ ನೇ ಕಾರ್ಯಕ್ರಮ ಹಾಗೂ ಶ್ರೀ ಕೃಷ್ಣ ಮಾಸಿಕ ದ್ವಾದಶಿ ವಿಚಾರಧಾರೆಯ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.ಉಪನ್ಯಾಸಕ ಟಿ.ಎಲ್ ಆನಂದ್ ಕೈವಾರ ಯೋಗಿನಾರೇಯಣ ಯತೀಂದ್ರರ ಜೀವನದ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷ ಜೆ.ಎಸ್ ರಾಮಚಂದ್ರಪ್ಪ ವಹಿಸಿದರು. ಮುಖ್ಯ ಅತಿಥಿಗಳಾಗಿ ಪುರಸಭಾ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ಓಂಕಾರೇಶ್ವರ ಸ್ವಾಮಿ ವಕ್ಕಲಿಗರ ಟ್ರಸ್ಟ್‌ನ ಮಾಜಿ ಅಧ್ಯಕ್ಷ ತೋಟದಪ್ಪ ಹಾಗೂ ರಮೇಶ್ ಸ್ವಾಮಿಗಳು ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಐದು ಬಡ ಮಹಿಳೆಯರಿಗೆ ಕಂಬಳಿ ಸೀರೆ, ಅರಿಶಿಣ- ಕುಂಕುಮ, ಬಳೆಗಳನ್ನು, ಮೂರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎಂ.ವಿ ನಾಯ್ಡು, ಮುನಿರಾಜು, ಅನಿಲ್ ಕುಮಾರ್, ವಾದ್ಯದೊಂದಿಗೆ ಟಿ ಮಹಾತ್ಮಾಂಜನೇಯ, ನರಸಿಂಹಪ್ಪ, ರಾಧಾಮಣಿ, ಸೀತಾಲಕ್ಷ್ಮೀ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಕೆಂಪಮ್ಮ ಮತ್ತು ಮಕ್ಕಳು ಗೀತಮ್ಮ ರಾಜಣ್ಣ ಮತ್ತು ಮಕ್ಕಳು ನೆರೆವೇರಿಸಿದರು. ಕಾರ್ಯಕ್ರಮವನ್ನು ವಿ.ಎನ್. ವೆಂಕಟೇಶ್, ನಾಗಯ್ಯ ಇತರರು ನಡೆಸಿಕೊಟ್ಟರು.