76 ವರ್ಷವಾದ್ರೂ ಸಾಕಾರಗೊಂಡಿಲ್ಲ ಗಾಂಧೀಜಿ ರಾಮರಾಜ್ಯ ಕನಸು

| Published : Feb 21 2025, 11:46 PM IST

76 ವರ್ಷವಾದ್ರೂ ಸಾಕಾರಗೊಂಡಿಲ್ಲ ಗಾಂಧೀಜಿ ರಾಮರಾಜ್ಯ ಕನಸು
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಧರ್ಮ, ಜಾತಿ, ಲಿಂಗ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ಭಿನ್ನ-ಬೇಧ ಮಾಡದೇ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಉದ್ದೇಶದಿಂದ ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತಿದೆ ಎಂದು ನ್ಯಾಯಾಧೀಶ ಸಿ.ಪ್ರಸನ್ನಕುಮಾರ್ ತಿಳಿಸಿದರು.

ಹೊಸದುರ್ಗ: ಯಾವುದೇ ಧರ್ಮ, ಜಾತಿ, ಲಿಂಗ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ಭಿನ್ನ-ಬೇಧ ಮಾಡದೇ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಉದ್ದೇಶದಿಂದ ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸಲಾಗುತ್ತಿದೆ ಎಂದು ನ್ಯಾಯಾಧೀಶ ಸಿ.ಪ್ರಸನ್ನಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷನ್ ಸೊಸೈಟಿ, ತಾಲೂಕು ಕಾನೂನು ಸೇವಾ ಸಮಿತಿ, ಚಿತ್ರದುರ್ಗ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ, ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮ ಮತ್ತು ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಮರಾಜ್ಯ ಪರಿಕಲ್ಪನೆಯು ಮಹಾತ್ಮ ಗಾಂಧೀಜಿ ಕನಸು. ರಾಮರಾಜ್ಯ ಎಂದರೆ ಪುರುಷರಂತೆ ಮಹಿಳೆಯರು ಸಹ ಯಾವುದೇ ನಿರ್ಬಂಧವಿಲ್ಲದೆ ರಾತ್ರಿಯ ಹೊತ್ತು ಸ್ವತಂತ್ರವಾಗಿ ತಿರುಗಾಡುವ ವಾತಾವರಣ ಕಲ್ಪಿಸುವುದಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇದು ಇನ್ನೂ ಸಾಕಾರಗೊಂಡಿಲ್ಲ. ನಮ್ಮ ಸಂವಿಧಾನದ 14ನೇ ವಿಧಿಯಲ್ಲಿಯೂ ಸಾಮಾಜಿಕ ನ್ಯಾಯದ ಬಗ್ಗೆ ಉಲ್ಲೇಖಿಸಲಾಗಿದೆ. ಯಾವುದೇ ಕ್ಷೇತ್ರದಲ್ಲಿ ಯಾವುದೇ ತಾರತಮ್ಯ ಮಾಡದೇ, ಸರ್ವರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವುದು ಇದರ ಮುಖ್ಯ ಆಶಯ ಎಂದು ತಿಳಿಸಿದರು.

ಚಿತ್ರದುರ್ಗದ ಸೌಖ್ಯ ಸಮುದಾಯ ಸಂಸ್ಥೆ ಯೋಜನಾ ನಿರ್ದೇಶಕಿ ಭಾಗ್ಯಮ್ಮ , ಎಂಎಸ್ ಲತಾ, ತಾಲೂಕು ಆರೋಗ್ಯ ಅಧಿಕಾರಿ ಡಾ.ಜಿ.ಎಸ್.ರಾಘವೇಂದ್ರ ಪ್ರಸಾದ್, ಹೊಸದುರ್ಗ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಕೇಶ್, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಈ.ಟಿ.ರಮೇಶ್, ಪ್ಯಾನಲ್ ವಕೀಲರಾದ ಬಿ.ಎಲ್.ಜ್ಯೋತಿ, ಈರಬಸಪ್ಪ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಘಟಕದ ಮೇಲ್ವಿಚಾರಕ ಆರ್.ಅಶೋಕ್ ವಾಹಿನಿ ಸಮುದಾಯ ಸಂಸ್ಥೆಯ ಅಧ್ಯಕ್ಷ ವೀಣಾ, ಸುಚೇತನ ನೆಟ್ವರ್ಕ್ ಅಧ್ಯಕ್ಷ ರಾಮೇಗೌಡ, ಹೊಸದುರ್ಗ ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ವಿಭಾಗದ ಆಪ್ತಸಮಾಲೋಚಕ ಎಚ್.ಪಾಲಯ್ಯ ಹಾಜರಿದ್ದರು.