ಸಾರಾಂಶ
ಶ್ವೇತ ವಸ್ತ್ರ ಧರಿಸಿ ಚಿಕ್ಕಮಗಳೂರು ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ಕಾಂಗ್ರೆಸ್ ಮುಖಂಡರು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದಲ್ಲಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಅಹಿಂಸೆಗೆ ಆಸ್ಪದ ನೀಡದೇ ಶಾಂತಿಯಿಂದ ದೇಶದ ಚಳುವಳಿಯಲ್ಲಿ ಭಾಗಿಯಾಗಿ ಸ್ವಾತಂತ್ರ್ಯಕ್ಕಾಗಿ ದುಡಿದ ಮಹಾ ಪುರುಷ ಗಾಂಧಿಯವರ ಸೇವೆ ಸ್ಮರಣಿಯ. ಇವರ ಅಹಿಂಸಾತನದಿಂದ ಭಾರತವನ್ನು ಬ್ರಿಟಿಷರ ಕಪಿಮುಷ್ಠಿ ಯಿಂದ ಸ್ವಾತಂತ್ರ್ಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲೇ ಏಕೈಕ ದೇಶ ಭಾರತ. ಗಾಂಧೀಜಿ ನೇತೃತ್ವದಲ್ಲಿ ಅಹಿಂಸೆಗೆ ಅವಕಾಶ ನೀಡದೇ ಸ್ವಾತಂತ್ರ್ಯ ಹೋರಾಟದಲ್ಲಿ ಯಶಸ್ಸು ಗಳಿಸಿದ ಪರಿಣಾಮ ಅಮೇರಿಕಾ, ನ್ಯೂಯಾರ್ಕ್, ಲಂಡನ್, ಆಫ್ರೀಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿ ಜೀವನ ಚರಿತ್ರೆಯನ್ನು ಪರಿಭಾಷೆ ಯನ್ನಾಗಿಸಿಕೊಂಡಿದೆ ಎಂದರು.ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲಘಟ್ಟದಲ್ಲಿ ದೇಶದ ಜನತೆ ಹಸಿವಿನಿಂದ ಬಳಲಬಾರದೆಂಬ ದೃಷ್ಟಿಯಿಂದ ಉಳ್ಳವರು ಪ್ರತಿ ಸೋಮವಾರ ಉಪವಾಸ ನಡೆಸಿ ಬಡವರಿಗೆ ಸಹಕರಿಸಬೇಕು ಎಂಬ ಆದೇಶವಿರಿಸಿ ಹಸಿವು ನಿವಾರಿಸಿದವರು. ಶೇ.80 ರಷ್ಟು ರೈತಾಪಿ ದೇಶವಾದ ಕಾರಣ ರೈತರ ಫಸಲಿಗೆ ಉತ್ತಮ ಬೆಲೆ ದೊರಕಿಸಿದವರು ಹಾಗೂ ಯೋಧರಿಗೆ ಬಲ ತುಂಬಿ ದೇಶದ ರಕ್ಷಣೆಗೆ ಪ್ರಮುಖರಾದವರು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಮಾತನಾಡಿ, 1921 ರಲ್ಲಿ ಎಐಸಿಸಿ ನಾಯಕತ್ವ ವಹಿಸಿಕೊಂಡ ಗಾಂಧಿಜೀ ಬಡತನ ನಿವಾರಿಸಲು, ಮಹಿಳೆಯರ ಹಕ್ಕುಗಳನ್ನು ವಿಸ್ತರಿಸಲು, ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದತೆ ನಿರ್ಮಿಸಲು, ಅಸ್ಪೃಶ್ಯತೆ ಕೊನೆಗೊಳಿಸಲು ಸ್ವ-ಆಡಳಿತ ಸಾಧಿಸಲು ರಾಷ್ಟ್ರವ್ಯಾಪಿ ಅಭಿಯಾನಗಳನ್ನು ನಡೆಸಿದ್ದರು ಎಂದರು.ಗಾಂಧೀಜಿ ಹಾಗೂ ಶಾಸ್ತ್ರಿ ಜನ್ಮದಿನ ಅಂಗವಾಗಿ ಜಿಲ್ಲೆಯ 12 ಬ್ಲಾಕ್‍ಗಳಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ. ಹೀಗಾಗಿ ಕೇವಲ ಒಂದು ದಿನಕ್ಕೆ ಗಾಂಧಿಯವರ ತತ್ವಾದರ್ಶ ಪಾಲನೆ ಮಾಡದೇ ವರ್ಷವಿಡೀ ಆಚರಿಸಬೇಕು. ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಅತ್ಯಂತ ಶಿಸ್ತು, ಸಂಯಮದಿಂದ ತೊಡಗಿರುವುದು ಖುಷಿಯ ಸಂಗತಿ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, 1924ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ಬೆಳಗಾವಿ 39ನೇ ಅಧಿವೇಶನ ಇಂದು ನೂರರ ಸಂಭ್ರಮದಲ್ಲಿದೆ. ಅದರಂತೆ ಕೆಪಿಸಿಸಿ ಕೂಡಾ ಅತ್ಯಂತ ಹೆಮ್ಮೆಯಿಂದ ಶತಮಾನೋತ್ಸವ ಅಂಗವಾಗಿ ಗಾಂಧಿ ಕುರಿತು ವಿಶೇಷ ಅಭಿಯಾನ ನಡೆಸಿ ಇಂದಿನ ಯುವ ಸಮೂಹದಲ್ಲಿ ಗಾಂಧಿಯವರ ಆದರ್ಶಗಳನ್ನು ಬಿತ್ತುವ ಕೆಲಸ ಮಾಡಲಿದೆ ಎಂದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‍ಕುಮಾರ್, ವಕ್ತಾರ ಎಚ್.ಎಚ್.ದೇವರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ನಗರಸಭಾ ಸದಸ್ಯ ಲಕ್ಷ್ಮಣ್, ಶಾದಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮುಖಂಡರಾದ ತನೋಜ್‍ನಾಯ್ಡು, ಪುಟ್ಟೇಗೌಡ, ಬಿ.ಎಚ್.ಹರೀಶ್, ಕೆ.ಭರತ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.--- ಬಾಕ್ಸ್ ----ಶ್ವೇತ ವಸ್ತ್ರದೊಂದಿಗೆ ಜಾಥಾಮಹಾತ್ಮಗಾಂಧೀಜಿಯವರ 155ನೇ ಹಾಗೂ ಲಾಲ್ ಬಹದ್ದೂರ್ 121ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ನಿಂದ ನಗರದ ತಾಲೂಕು ಕಚೇರಿಯಿಂದ ಗಾಂಧಿ ಮೈದಾನದವರೆಗೆ ಕಾರ್ಯಕರ್ತರು ಕಾಲ್ನಡಿಗೆ ಜಾಥಾದಲ್ಲಿ ಸಾಗಿ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.ತಾಲೂಕು ಕಚೇರಿಯಿಂದ ಕಾರ್ಯಕರ್ತರು ಬಿಳಿ ವಸ್ತ್ರ ಹಾಗೂ ಟೋಪಿ ಧರಿಸಿ ದಾರಿಯುದ್ದಕ್ಕೂ ರಘುಪತಿ ರಾಘವ ರಾಜಾ ರಾಮ್ ಭಜನೆ ಯೊಂದಿಗೆ ಸಾಗಿಸಿದರು. ಮೆರವಣಿಗೆ ಮುಂಚೂಣಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ರಾಷ್ಟ್ರಧ್ವಜ ಹಿಡಿದು ಜಾಥಾದ ಮುಖ್ಯ ನೇತೃತ್ವ ವಹಿಸಿದ್ದರು.--- 10 ಕೆಸಿಕೆಎಂ 6ಚಿಕ್ಕಮಗಳೂರಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕಾಲ್ನಡಿಗೆ ಜಾಥಾ ನಡೆಸಿದರು. ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ಮುಖಂಡರು ಪಾಲ್ಗೊಂಡಿದ್ದರು.