ಸಾರಾಂಶ
ಭಾರತದ ಸ್ವಾತಂತ್ರ್ಯ ಹೋರಾಟಗಾರ, ಅಹಿಂಸಾವಾದದ ಪ್ರತಿಪಾದಕ, ಅಪ್ರತಿಮ ರಾಷ್ಟ್ರೀಯ ನಾಯಕರಾದ ಮಹಾತ್ಮ ಗಾಂಧಿಯವರು ಜನ್ಮ ದಿನವನ್ನು ಭಾರತಾದ್ಯಂತ ಗಾಂಧಿ ಜಯಂತಿಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಶಾಸಕ ಸಿ. ಎನ್ ಬಾಲಕೃಷ್ಣ ತಿಳಿಸಿದರು. ನಗರದ ಗಾಂಧಿ ವೃತದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಚಳವಳಿಗೆ ಅವರು ನೀಡಿದ ಅಪ್ರತಿಮ ಕೊಡುಗೆಯನ್ನು ಸ್ಮರಿಸಬೇಕಾಗಿದೆ. ಭಾರತದಲ್ಲಿ ಗಾಂಧಿ ಜಯಂತಿಯನ್ನು ರಾಷ್ಟ್ರೀಯ ರಜಾ ದಿನವಾಗಿ ಆಚರಿಸಲಾಗುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭಾರತದ ಸ್ವಾತಂತ್ರ್ಯ ಹೋರಾಟಗಾರ, ಅಹಿಂಸಾವಾದದ ಪ್ರತಿಪಾದಕ, ಅಪ್ರತಿಮ ರಾಷ್ಟ್ರೀಯ ನಾಯಕರಾದ ಮಹಾತ್ಮ ಗಾಂಧಿಯವರು ಜನ್ಮ ದಿನವನ್ನು ಭಾರತಾದ್ಯಂತ ಗಾಂಧಿ ಜಯಂತಿಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಶಾಸಕ ಸಿ. ಎನ್ ಬಾಲಕೃಷ್ಣ ತಿಳಿಸಿದರು.ನಗರದ ಗಾಂಧಿ ವೃತದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಚಳವಳಿಗೆ ಅವರು ನೀಡಿದ ಅಪ್ರತಿಮ ಕೊಡುಗೆಯನ್ನು ಸ್ಮರಿಸಬೇಕಾಗಿದೆ. ಭಾರತದಲ್ಲಿ ಗಾಂಧಿ ಜಯಂತಿಯನ್ನು ರಾಷ್ಟ್ರೀಯ ರಜಾ ದಿನವಾಗಿ ಆಚರಿಸಲಾಗುತ್ತದೆ. ಮಹಾತ್ಮ ಗಾಂಧೀಜಿಯವರು ಅಹಿಂಸೆಯ ತತ್ವವನ್ನು ನಂಬಿದ್ದರು ಮತ್ತು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಅದನ್ನು ಆಚರಿಸಿದರು.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಘೋಷಿಸಿದಂತೆ ಮಹಾತ್ಮಾ ಗಾಂಧಿ ಜಯಂತಿಯನ್ನು ಪ್ರಪಂಚದಾದ್ಯಂತ ಅಹಿಂಸಾ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ ಎಂದರು. ಹಾಗೂ ಈ ದಿನ ಲಾಲ್ ಬಹುದೂರ್ ಶಾಸ್ತ್ರಿರವರ ಜನ್ಮದಿನವೂ ಆದುದರಿಂದ ಅವರ ಹೋರಾಟವನ್ನು ಸಹ ಸ್ಮರಿಸಿದರು.ನಂತರ ಶಾಲಿನಿ ಕಾನ್ವೆಂಟ್ ಮತ್ತು ಎಸ್‌ವಿಎಸ್ ಶಾಲಾ ಮಕ್ಕಳಿಂದ ಗಾಂಧಿ ತತ್ವದ ಗೀತೆಗಳನ್ನು ಹಾಡಿಸಲಾಯಿತು.ಇದೇ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಬನಶಂಕರಿ ರಘು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ರಾಣಿಕೃಷ್ಣ, ಪುರಸಭಾ ಸದಸ್ಯರಾದ ಪರ್ವೀಜ್ ಬೇಗ್, ಪುರಸಭಾ ಮುಖ್ಯ ಅಧಿಕಾರಿ ಹೇಮಂತ್ ಕುಮಾರ್, ಪರಿಸರ ಪ್ರೇಮಿ ಸಿ. ಎನ್. ಅಶೋಕ್, ಕಲಾವಿದ ಸಿ. ಎಂ. ರವೀಂದ್ರ, ರಾಯರ ರಂಗಮಂದಿರ ಮುಖ್ಯಸ್ಥ ಪ್ರಕಾಶ್, ಬ್ಯಾಂಕ್ ರಘು ಸೇರಿದಂತೆ ಇತರರು ಹಾಜರಿದ್ದರು.