ಸತ್ಯ, ಅಹಿಂಸೆ, ಅಪರಿಗ್ರಹ, ತ್ರಿಕರಣ ಪೂರ್ವಕ ಸ್ವಚ್ಛತಾ ಭಾವ, ಯಂತ್ರಕ್ಕಿಂತ ವ್ಯಕ್ತಿಗತ ಪರಿಶ್ರಮಕ್ಕೆ ಒತ್ತು, ಸಂಪತ್ತಿನ ವಿಕೇಂದ್ರೀಕರಣ ಎಲ್ಲರ ಹಿತದಲ್ಲಿ ವ್ಯಕ್ತಿಯ ಹಿತವಡಗಿದೆ ಎಂಬ ಅರಿವು ಗಾಂಧೀಜಿಯವರಿಗಿತ್ತು. ಸ್ವದೇಶೀ ಚಿಂತನೆ ವಿರೋಧಿಗಳ ಮನವನ್ನು ಪ್ರೀತಿ ಮತ್ತು ಸತ್ಯಾಗ್ರಹದ ಮೂಲಕ ಗೆಲ್ಲುವ ಗುಣ ಗಾಂಧೀಜಿ ಅವರ ವಿಶೇಷತೆ ಎಂದು ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಹೇಳಿದರು.
ಮೂಡುಬಿದಿರೆ : ಸತ್ಯ, ಅಹಿಂಸೆ, ಅಪರಿಗ್ರಹ, ತ್ರಿಕರಣ ಪೂರ್ವಕ ಸ್ವಚ್ಛತಾ ಭಾವ, ಯಂತ್ರಕ್ಕಿಂತ ವ್ಯಕ್ತಿಗತ ಪರಿಶ್ರಮಕ್ಕೆ ಒತ್ತು, ಸಂಪತ್ತಿನ ವಿಕೇಂದ್ರೀಕರಣ ಎಲ್ಲರ ಹಿತದಲ್ಲಿ ವ್ಯಕ್ತಿಯ ಹಿತವಡಗಿದೆ ಎಂಬ ಅರಿವು ಗಾಂಧೀಜಿಯವರಿಗಿತ್ತು. ಸ್ವದೇಶೀ ಚಿಂತನೆ ವಿರೋಧಿಗಳ ಮನವನ್ನು ಪ್ರೀತಿ ಮತ್ತು ಸತ್ಯಾಗ್ರಹದ ಮೂಲಕ ಗೆಲ್ಲುವ ಗುಣ ಗಾಂಧೀಜಿ ಅವರ ವಿಶೇಷತೆ ಎಂದು ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಹೇಳಿದರು.
ಅವರು ಶ್ರೀ ಮಹಾವೀರ ಕಾಲೇಜಿನಲ್ಲಿ 157 ನೇ ಗಾಂಧೀಜಿ ಜಯಂತಿಯ ಅಂಗವಾಗಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಜಗತ್ತಿನ ಅತೀಹೆಚ್ಚು ಕೃತಿಗಳು ಪ್ರಕಟವಾಗಿದ್ದು ಗಾಂಧೀಜಿಯ ಬಗ್ಗೆ, ಭಾರತಕ್ಕೆ ವಿಶ್ವವ್ಯಾಪಿ ಗೌರವ ತಂದ ಹೆಸರು ಗಾಂಧೀಜಿಯವರದು. ಸರಳತೆಯ ಸಂಕೇತ ಹಾಗೂ ಜನೋಪಯೋಗಿಯಾಗಿದ್ದ ಹತ್ತಿಯ ಹೂವು ಗಾಂಧೀಜಿಯವರಿಗೆ ಇಷ್ಟವಾಗಿತ್ತು ಎಂದವರು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಮೇ.ಡಾ. ರಾಧಾಕೃಷ್ಣ ಮಾತನಾಡಿ, ಗಾಂಧೀಜಿಯವರ ಜೀವನದ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ. ಅವರ ವಿಚಾರಧಾರೆಗಳಲ್ಲಿ ಅಡಗಿರುವ ಸತ್ಯಗಳನ್ನು ನಾವು ಅರಿಯಬೇಕು. ವಿದೇಶದಲ್ಲಿ ಉದ್ಯೋಗವನ್ನು ಮುಂದುವರಿಸುವ ಅವಕಾಶವಿದ್ದರೂ ಭಾರತದ ಹಿತಕ್ಕಾಗಿ ಹಿಂತಿರುಗಿ ಬಂದು ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಎಚ್ಚರಿಸಿದ ಗಾಂಧೀಜಿಯ ಆದರ್ಶಗಳು ಮತ್ತು ತತ್ವಗಳನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ವಿಯಾಗಬಹುದು ಎಂದರು.ಪದವಿಪೂರ್ವಕಾಲೇಜಿನ ಪ್ರಾಂಶುಪಾಲೆ, ಎನ್.ಸಿ.ಸಿ.ಅಧಿಕಾರಿ ಲೆ. ವಿಜಯಲಕ್ಷ್ಮೀ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ಯುವ ರೆಡ್ ಕ್ರಾಸ್ ಅಧಿಕಾರಿ ಗೀತಾ ಕುಮಾರಿ ಡಿ.ಎನ್‌ಎಸ್‌ಎಸ್ ಅಧಿಕಾರಿಗಳಾದ ಶಾರದಾ ಎ. ಹಾಗೂ ಚಿತ್ರಲೇಖ, ರೇಂಜರ್ಸ್ಅಧಿಕಾರಿ ಆಶ್ರಿತಾ ಮತ್ತು ರೋವರ್ಸ್ಅಧಿಕಾರಿ ದಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.
ಆರಂಭದಲ್ಲಿ ನಡೆದ ‘ಗಾಂಧೀ ಸ್ಮೃತಿ ಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಗಾಂಧೀಜಿಯವರಿಗೆ ಪ್ರಿಯವಾದ ಭಜನೆಯ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ನಂತರ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು. ವಿದ್ಯಾರ್ಥಿಗಳಾದ ಸಮೀಕ್ಷಾ ಸ್ವಾಗತಿಸಿ, ನಿತೇಶ್ ವಂದಿಸಿದರು. ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.ಗಾಂಧೀ ಜಯಂತಿಯ ಅಂಗವಾಗಿ ಕಾಲೇಜಿನ ಗ್ರಂಥಾಲಯದಲ್ಲಿ ಗಾಂಧೀ ಸಾಹಿತ್ಯ ಕುರಿತ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.