ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪೌರ ಕಾರ್ಮಿಕ ಜನಾಂಗದ ಸ್ಮಶಾನಕ್ಕೆ ಹೋಗುವ ರಸ್ತೆ ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ಪಟ್ಟಣದ ಗಾಂಧಿನಗರ ಬಡಾವಣೆ ನಿವಾಸಿಗಳು ತಾಲೂಕು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ಸಂತೇಮಾಳ ಬಳಿಯ ಸರ್ವೇ ನಂ.944-945ರ ಕಾವೇರಿ ನದಿ ತೀರದಲ್ಲಿರುವ ಪೌರ ಕಾರ್ಮಿಕ ಜನಾಂಗದ ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಸಂತೇಮಾಳ ಬಡಾವಣೆ ಜನರು ಒತ್ತುವರಿ ಮಾಡಿ ತಂತಿ ಬೇಲಿ ನಿರ್ಮಿಸಿದ್ದಾರೆ. ಇದರಿಂದ ಶವ ತೆಗೆದುಕೊಡು ಹೋಗಲು ರಸ್ತೆ ಕಿರಿದಾಗಿ ತುಂಬಾ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯಲ್ಲಿ ಪೌರ ಕಾರ್ಮಿಕರ ಸುಮಾರು 300 ಕುಟುಂಬಗಳಿವೆ. ಯಾರಾದರೂ ಸಾವನ್ನಪ್ಪಿದರೆ ಶವ ಹೊತ್ತು ಹೋಗುವ ವೇಳೆ ತೊಂದರೆಯಾಗುತ್ತಿದೆ. ಅಲ್ಲದೇ, ನದಿ ತೀರದಲ್ಲಿನ ಸ್ಮಶಾನದ ಪಕ್ಕದ ಖರಾಬು ಜಾಗವನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ರಸ್ತೆ ಮತ್ತು ಖರಾಬು ಜಾಗವನ್ನು ತೆರವು ಮಾಡಬೇಕು ಎಂದು ಉಪ ತಹಸೀಲ್ದಾರ್ ಚೈತ್ರ ಅವರಿಗೆ ಮನವಿ ಮಾಡಿದರು.ಈ ವೇಳೆ ಪುರಸಭೆ ಸದಸ್ಯ ಎಸ್.ಪ್ರಕಾಶ್, ಪೌರ ಕಾರ್ಮಿಕ ಮುಖಂಡರಾದ ಮಹದೇವು, ಪಳಿನಿ, ವೆಂಕಟೇಶ್, ಸುಬ್ರಮಣ್ಯ, ನಂಜುಂಡ, ನಾಗರಾಜು ಸೇರಿದಂತೆ ಇತರರು ಇದ್ದರು.
ನೂತನ ಇನ್ಸ್‌ಪೆಕ್ಟರ್ ಆನಂದ್ ಕುಮಾರ್‌ಗೆ ಅಭಿನಂದನೆಶ್ರೀರಂಗಪಟ್ಟಣ:
ಗ್ರಾಮಾಂತರ ಪೊಲೀಸ್ ಠಾಣೆಗೆ ನೂತನ ಇನ್ಸ್‌ಪೆಕ್ಟರ್ ಆನಂದ್ ಕುಮಾರ್ ಅವರನ್ನು ಠಾಣೆಯಲ್ಲಿ ವಿವಿಧ ರೈತ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಸ್ವಾಗತಿಸಿ ಅಭಿನಂದಿಸಿದರು.ಈ ವೇಳೆ ಮೈಸೂರು-ಬೆಂಗಳೂರು ಹೆದ್ದಾರಿಯ ದಸರಾ ಬನ್ನಿ ಮಂಟಪದ ಬಳಿ ವೃತ್ತದಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ವೃತ್ತದಲ್ಲಿ ಸಿಗ್ನಲ್ ದೀಪಗಳ ಅಳವಡಿಸಲು ಅಗತ್ಯ ಕ್ರಮ ವಹಿಸುವಂತೆ ಮನವಿ ಮಾಡಿದರು.
ನೂತನ ಇನ್ಸ್‌ಪೆಕ್ಟರ್ ಆನಂದ್ ಕುಮಾರ್ ಸಾರ್ವಜನಿಕರ ಸಮಸ್ಯೆಗಳ ಆಲಿಸಿ ತಾವುಗಳು ತಿಳಿಸಿರುವ ಸಮಸ್ಯ ಪರಿಶೀಲಿಸಿ ಕ್ರಮ ವಹಿಸುತ್ತೇನೆ ಎಂದರು.ಈ ವೇಳೆ ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಂಜೇಶ್ ಗೌಡ, ಉಪಾಧ್ಯಕ್ಷ ನಾಗೇಂದ್ರ ಸ್ವಾಮಿ, ಕರವೇ ಅಧ್ಯಕ್ಷ ಶಂಕರ್, ಕೆಂಪೇಗೌಡ ಯುವಶಕ್ತಿ ವೇದಿಕೆ ಅಧ್ಯಕ್ಷ ಮಹೇಶ್, ತಮ್ಮಣ್ಣ, ಪಿಲಿಪ್ ಸೇರಿದಂತೆ ಇತರರಿದ್ದರು.