ಸಾರಾಂಶ
ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಗಣೇಶ ದೇಗುಲದಲ್ಲಿ ದೇವರ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಣೇಶನ ಭಜನೆ, ಶ್ಲೋಕಗಳನ್ನು ಭಕ್ತಿ-ಭಾವಪೂರ್ಣವಾಗಿ ಪಠಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಗಣೇಶ ದೇಗುಲದಲ್ಲಿ ದೇವರ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಣೇಶನ ಭಜನೆ, ಶ್ಲೋಕಗಳನ್ನು ಭಕ್ತಿ-ಭಾವಪೂರ್ಣವಾಗಿ ಪಠಿಸಿದರು. ಬೆಳಗ್ಗೆ ನಡೆದ ಗಣೇಶನ ಪೂಜೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದರು. ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ. ನಾಯಕ್, ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಕರಿಪ್ಪಾಲ್, ಉಪ ಪ್ರಾಂಶುಪಾಲ(ಆಡಳಿತ) ರಾಘವೇಂದ್ರ ಶೆಣೈ ಇದ್ದರು.