ನಾರ್ಗಾಣೆ ಗ್ರಾಮದಲ್ಲಿ ಗಣೇಶ ಉತ್ಸವ ಮೂರ್ತಿ ವಿಸರ್ಜನೆ

| Published : Sep 04 2025, 01:01 AM IST

ಸಾರಾಂಶ

ಉತ್ಸವ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಇರಿಸಿ ಗ್ರಾಮದ ಮುಖ್ಯ ಬೀದಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸುವ ಮೂಲಕ ಶ್ರೀ ದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶ್ರೀದೇವಿ ನಾರ್ಗಾಣೆ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿ 12ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀಗೌರಿ ಗಣೇಶ ಉತ್ಸವ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಇರಿಸಿ ಗ್ರಾಮದ ಮುಖ್ಯ ಬೀದಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸುವ ಮೂಲಕ ಶ್ರೀದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು.ಭಾನುವಾರ ದಂದು ಶ್ರೀಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀಗೌರಿ ಗಣೇಶ ಉತ್ಸವ ಮೂರ್ತಿಗೆ 5 ದಿನಗಳ ಕಾಲ ಅರ್ಚಕರು ಅವಿನಾಶ್ ಆರಾಧ್ಯ ಹಾಗೂ ಸಂಗಡಿಗರು ವಿಶೇಷ ಪೂಜೆಯನ್ನು ಸಲ್ಲಿಸಿದರು. ಮೂರ್ತಿಯನ್ನು ನಾರ್ಗಾಣೆ ಗ್ರಾಮದ ಶ್ರೀದೇವಿ ಕೆರೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಅಧ್ಯಕ್ಷ ಎಂ.ಜೆ.ಆಕಾಶ್, ಕಿರಣ್, ಕಾರ್ತಿಕ್‌ಸುಧಿ, ಮೋಹನ್, ಬಿ.ಕೆ.ರಾಜೇಶ್, ಪುನಿತ್‌ಕುಮಾರ್, ವಸಂತ, ವಿವೇಕ್‌ ರೈ, ವಿನೋದ್, ಕುಶಾಲಪ್ಪ, ಬಿ.ಡಿ.ರಾಜು ರೈ, ಶರತ್, ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯೆ ಮಂಜುಳ, ಗೀತಾ, ಸಮಿತಿ ಸದಸ್ಯರು ಹಾಗೂ ನೂರಾರು ಗ್ರಾಮಸ್ಥರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.