ಮಸೀದಿ ಗಣೇಶ ಮೂರ್ತಿ ಭಾವೈಕ್ಯತೆಯಿಂದ ವಿಸರ್ಜನೆ

| Published : Sep 01 2025, 01:04 AM IST

ಸಾರಾಂಶ

ರೋಣ ತಾಲೂಕಿನ ಭಾವೈಕ್ಯತೆ ಸಂಕೇತ ಗ್ರಾಮವಾದ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಭಾನುವಾರ ಸಂಜೆ ಹಿಂದೂ- ಮುಸ್ಲಿಂ ಸಮಾಜದವರು ಒಂದುಗೂಡಿ ಡೊಳ್ಳು, ಭಜನೆ, ನೃತ್ಯಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಿದರು.

ರೋಣ:ತಾಲೂಕಿನ ಭಾವೈಕ್ಯತೆ ಸಂಕೇತ ಗ್ರಾಮವಾದ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಭಾನುವಾರ ಸಂಜೆ ಹಿಂದೂ- ಮುಸ್ಲಿಂ ಸಮಾಜದವರು ಒಂದುಗೂಡಿ ಡೊಳ್ಳು, ಭಜನೆ, ನೃತ್ಯಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಿದರು.

ಮುಸ್ಲಿಂ ಯುವಕರೇ ಗಣೇಶ ಮೂರ್ತಿ ಪೂಜೆ ಸಲ್ಲಿಸಿ, ಕಾಯಿ ಕರ್ಪೂರಾರತಿ ಬೆಳಗಿ, ಗಣೇಶ ಸೋತ್ರ ಹೇಳುತ್ತಾ ಸಂಭ್ರಮದಿಂದ ಪೂಜೆ ಗೈದರು. ಬಳಿಕ ಅವರೇ ಸ್ವತಃ ಗಣೇಶ ಮೂರ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮೂಲಕ ತೆರಳಿ ಗ್ರಾಮದ ಸಾರ್ವಜನಿಕ ಬಾವಿಯಲ್ಲಿ ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು. ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಗ್ರಾಮದ ಹಿರಿಯರು, ಯುವಕರು, ಪುಟಾಣಿ ಮಕ್ಕಳಾದಿಯಾಗಿ ಜಾತಿಭೇದ ಮರೆತು ಕುಣಿದು, ಕುಪ್ಪಳಿಸಿ ಸಂಭ್ರಮಿಸಿದರು.

ಯುವಕರು ಏರು ಧ್ವನಿಯಲ್ಲಿ ಗಣಪತಿ ಬೊಪ್ಪ ಮೋರಯಾ, ಜೈ ಗಣೇಶ, ಜೈ ಗಜಾನನ ಘೋಷಣೆಯೊಂದಿಗೆ ಜೈ ಕನ್ನಡಪ್ರಭ, ಜೈ ಜೈ ಕನ್ನಡಪ್ರಭ ಎಂದು ಘೋಷಣೆ ಕೂಗಿದ್ದು ವಿಶೇಷವಾಗಿತ್ತು.