ಸಾರಾಂಶ
ಹಲವೆಡೆ ದೊಡ್ಡ ದೊಡ್ಡ ಗಣೇಶ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿವೆ. ಸಮಕಾಲೀನ ವಸ್ತು ವಿಷಯಗಳನ್ನು ಪ್ರತಿನಿಧಿಸುವ ಹಾಗೂ ಪಾರಂಪರಿಕ ಚಿಂತನೆಗಳನ್ನು ಬಿಂಬಿಸುವ ಗಣಪ ಮೂರ್ತಿಗಳು ವಿಶೇಷವಾಗಿವೆ.
ಕೆ.ಆರ್.ರವಿಕಿರಣ್
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಈ ಬಾರಿ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಮನೆಮನೆಗಳಲ್ಲಿ ವಿದ್ಯಾದಾತನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ, ವಿಸರ್ಜಿಸುವ ಕೈಂಕರ್ಯಗಳು ನಡೆದಿದ್ದರೆ, ಸಾರ್ವಜನಿಕ ಗಣೇಶೋತ್ಸವಗಳು ಅದ್ಧೂರಿತನದಿಂದ ಗಮನ ಸೆಳೆಯುತ್ತಿವೆ.
ಇಲ್ಲಿನ ವಿವಿಧ ಪೇಟೆಗಳಲ್ಲಿ ತರಾವರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಹಲವೆಡೆ ದೊಡ್ಡ ದೊಡ್ಡ ಗಣೇಶ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿವೆ. ಸಮಕಾಲೀನ ವಸ್ತು ವಿಷಯಗಳನ್ನು ಪ್ರತಿನಿಧಿಸುವ ಹಾಗೂ ಪಾರಂಪರಿಕ ಚಿಂತನೆಗಳನ್ನು ಬಿಂಬಿಸುವ ಗಣಪ ಮೂರ್ತಿಗಳು ವಿಶೇಷವಾಗಿವೆ.ಆರ್‌ಸಿಬಿ ಕಪ್ ಗಣೇಶ:
ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದ ಆರ್‌ಸಿಬಿ ತಂಡದ ಸದಸ್ಯನಾಗಿ ಗಣೇಶ ಈ ಬಾರಿ ಕಾಣಿಸಿಕೊಂಡಿದ್ದಾನೆ. ಅದರಲ್ಲೂ ಮುಖ್ಯವಾಗಿ ಕಪ್ ಎತ್ತಿಹಿಡಿದಿರುವ ವಿರಾಟ್ ಕೊಹ್ಲಿಯ ಮಾದರಿಯ ಗಣೇಶ ಮೂರ್ತಿಯನ್ನು ಇಲ್ಲಿನ ತೇರಿನಬೀದಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಗಮನ ಸೆಳೆಯುತ್ತಿದೆ. ರೋಜಿಪುರ ಬಡಾವಣೆಯಲ್ಲಿ ಐಪಿಎಲ್ ಕಪ್ ಹಿಡಿದು ಕುಳಿತಿರುವ ಕ್ರಿಕೆಟಿಗನ ಮಾದರಿಯಲ್ಲಿ ಗಣಪತಿ ಅವತರಿಸಿದ್ದಾನೆ.ಇಮ್ಮಡಿ ಪುಲಿಕೇಶಿ ಗಣಪ:
ಬೆಸ್ತರಪೇಟೆಯ ವಿವೇಕಾನಂದ ವೃತ್ತದಲ್ಲಿ 12 ಅಡಿ ಯುದ್ದದ ಕತ್ತಿ ಹಿಡಿದಿರುವ ಪುಲಿಕೇಶಿ ಗಣಪ ಯುದ್ಧಸನ್ನದ್ದನಾಗಿದ್ದು, ಚಾಲಕ್ಯ ಲಾಂಛನವಾದ ವರಾಹ ಸ್ವಾಮಿಯನ್ನೂ ಸೃಷ್ಠಿಸಲಾಗಿದೆ.ಕಲ್ಲುಪೇಟೆಯಲ್ಲಿ ಮಹಾಗಣಪತಿ:
ಇಲ್ಲಿನ ಕಲ್ಲುಪೇಟೆಯಲ್ಲಿ ಬಾಂಬೆ ಗಣೇಶ ಮಾದರಿಯಲ್ಲಿ ಸುಮಾರು 20 ಅಡಿ ಎತ್ತರದ ಗಣೇಶ ಮೂರ್ತಿ ಅತ್ಯಾಕರ್ಷಕವಾಗಿ ಮೂಡಿಬಂದಿದ್ದು, ಭಕ್ತಾದಿಗಳ ಗಮನ ಸೆಳೆಯುತ್ತಿದೆ.ಸ್ವರ್ಣಗೌರಿ-ಗಣಪ:
ಕೊಂಗಾಡಿಯಪ್ಪ ಮುಖ್ಯರಸ್ತೆಯ ಅಶ್ವತ್ಥಕಟ್ಟೆಯಲ್ಲಿ ಶ್ರೀವಿನಾಯಕ ಸೇವಾ ಸಂಘದ 45ನೇ ಗಣೇಶೋತ್ಸವ ಅಂಗವಾಗಿ ಸ್ವರ್ಣಗೌರಿ-ಗಣಪನ ಬೃಹತ್ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.ಬೃಹತ್ ನರಸಿಂಹ ಗಣಪ:
ಧರ್ಮರಾಯಸ್ವಾಮಿ ನಗರದಲ್ಲಿ ಈ ಬಾರಿ ನರಸಿಂಹ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. 20 ಅಡಿ ಎತ್ತರದ ಬೃಹತ್ ಗಣಪ ಇದಾಗಿದ್ದು, ಸಿಂಹಾರೂಢನಾಗಿರುವ ಗಣಪ ಯುದ್ದಸನ್ನದ್ದನಾಗಿದ್ದಾನೆ.ಹಂಸ ವಾಹನ ಗಣಪ:
ಮಾರುಕಟ್ಟೆಚೌಕದ ಸರ್ಕಾರಿ ಶಾಲೆ ಪಕ್ಕದಲ್ಲಿ ವಿನಾಯಕ ಸೇವಾ ಸಮಿತಿಯ 38ನೇ ವಾರ್ಷಿಕೋತ್ಸವ ಅಂಗವಾಗಿ 10 ಅಡಿ ಎತ್ತರದ ಶ್ವೇತ ವರ್ಣದ ಹಂಸ ವಾಹನ ಗಣಪತಿಯನ್ನು ಸ್ಥಾಪಿಸಲಾಗಿದೆ.ತರಾವರಿ ವೇಷಗಳಲ್ಲಿ ಮಹಾ ಗಣಪತಿ:
ಗಾಣಿಗರಪೇಟೆಯಲ್ಲಿ ಶ್ರೀರಾಮನ ರೂಪದಲ್ಲಿ ಗಣಪತಿ ಅವತರಿಸಿದ್ದಾನೆ. ಕುಚ್ಚಪ್ಪನಪೇಟೆಯಲ್ಲಿ ಗಾಂಡೀವಧಾರಿಯಾಗಿ ಗಜಾನನ ಗಮನ ಸೆಳೆಯುತ್ತಿದ್ದು, ಭುವನೇಶ್ವರಿ ನಗರದಲ್ಲಿ ಪಂಡರಾಪುರದ ವಿಠಲನ ರೂಪದಲ್ಲಿ ವಿನಾಯಕನನ್ನು ರೂಪಿಸಿ ಪೂಜಿಸಲಾಗುತ್ತಿದೆ.ಮನೆಮನೆಯಲ್ಲೂ ಗಣಪ:
ಇಲ್ಲಿನ ಮನೆಮನೆಗಳಲ್ಲೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಚೌತಿಯ ದಿನ ಸಂಜೆಯೇ ಕೆಲವರು ಗಣಪನನ್ನು ನೀರಿನಲ್ಲಿ ಮುಳುಗಿಸಿ ಸಂಭ್ರಮಿಸಿದ್ದರೆ, ಕೆಲವು ಮನೆಗಳಲ್ಲಿ 3 ದಿನ, 5 ದಿನಗಳ ಆರಾಧನೆ ನಡೆಯುತ್ತಿದೆ.ಫೋಟೋ-
28ಕೆಡಿಬಿಪಿ1- ದೊಡ್ಡಬಳ್ಳಾಪುರದ ಕಲ್ಲುಪೇಟೆಯಲ್ಲಿ ಪ್ರತಿಷ್ಠಾಪಿಸಿರುವ ಮಹಾ ಗಣಪತಿ.--
28ಕೆಡಿಬಿಪಿ2- ದೊಡ್ಡಬಳ್ಳಾಪುರದ ಬೆಸ್ತರಪೇಟೆಯಲ್ಲಿ ಗಮನ ಸೆಳೆಯುತ್ತಿರುವ ಇಮ್ಮಡಿ ಪುಲಿಕೇಶಿ ಗಣಪ.--
28ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿ 20 ಅಡಿ ಎತ್ತರದ ನರಸಿಂಹ ಗಣಪತಿ.--
28ಕೆಡಿಬಿಪಿ4- ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ರಸ್ತೆಯಲ್ಲಿ ಸ್ವರ್ಣಗೌರಿ-ಗಣಪ.--
28ಕೆಡಿಬಿಪಿ5- ದೊಡ್ಡಬಳ್ಳಾಪುರದಲ್ಲಿ ಪ್ರತಿಷ್ಠಾಪಿಸಿರುವ ಐಪಿಎಲ್ ಕಪ್ ಹಿಡಿದಿರುವ ವಿರಾಟ್‌ಕೊಹ್ಲಿ ಗಣೇಶ.--
28ಕೆಡಿಬಿಪಿ6- ದೊಡ್ಡಬಳ್ಳಾಪುರದ ರೋಜಿಪುರದಲ್ಲಿ ಆರ್‌ಸಿಬಿ ಗಣೇಶ.--
28ಕೆಡಿಬಿಪಿ7- ದೊಡ್ಡಬಳ್ಳಾಪುರದ ಭುವನೇಶ್ವರಿನಗರದಲ್ಲಿ ಪಂಡರಾಪುರ ವಿಠಲ ಗಣೇಶ.--
28ಕೆಡಿಬಿಪಿ8- ದೊಡ್ಡಬಳ್ಳಾಪುರದ ಕುಚ್ಚಪ್ಪನಪೇಟೆಯಲ್ಲಿ ಗಾಂಡೀವಧಾರಿ ಗಣೇಶ.--
28ಕೆಡಿಬಿಪಿ9- ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ಶ್ರೀರಾಮ ಗಣೇಶ.--
28ಕೆಡಿಬಿಪಿ10- ದೊಡ್ಡಬಳ್ಳಾಪುರದಲ್ಲಿ ಅಯೋಧ್ಯಾ ದರ್ಬಾರ್ ಗಣೇಶ.--
28ಕೆಡಿಬಿಪಿ11- ದೊಡ್ಡಬಳ್ಳಾಪುರದ ಮಾರುಕಟ್ಟೆ ಚೌಕ ಸಮೀಪ ಹಂಸ ವಾಹನ ಗಣೇಶ.