ಅರಕಲಗೂಡು ತಾಲೂಕಿನಾದ್ಯಂತ ಗಣಪತಿ ಪ್ರತಿಷ್ಠಾಪನೆ

| Published : Sep 09 2024, 01:40 AM IST

ಅರಕಲಗೂಡು ತಾಲೂಕಿನಾದ್ಯಂತ ಗಣಪತಿ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಕಲಗೂಡು ತಾಲೂಕಿನಾದ್ಯಂತ ಗೌರಿ ಗಣೇಶ ಹಬ್ಬವನ್ನು ಶನಿವಾರ ಸಂಭ್ರಮದಿಂದ ಆಚರಿಸಿದರು. ಪಾಳೇಗಾರ ಕೃಷ್ಣಪ್ಪನಾಯಕನ ಆಳ್ವಿಕೆಯ ಇತಿಹಾಸ ಪ್ರಸಿದ್ಧವಾಗಿರುವ ಕೋಟೆ ಗಣಪತಿ ಕೊತ್ತಲಿಗೆ ಪ್ರತಿದಿನವೂ ನೂರಾರು ಭಕ್ತಾದಿಗಳು ಗಣಪತಿಕೊತ್ತಲಿನ ಗಣಪತಿ ದೇವರ ದರ್ಶನಕ್ಕೆ ಮತ್ತು ಹರಳಿಮರ, ಬನ್ನಿಮರ, ಎಕ್ಕದ ಗಿಡದ ಪೂಜೆಗಾಗಿ ಆಗಮಿಸುವ ಭಕ್ತಿಯ ಸ್ಥಳವಾಗಿದ್ದು, ಕೋಟೆ ಗಣಪತಿ ಕೊತ್ತಲಿನ ಸ್ಥಳದಲ್ಲಿ ಪ್ರತಿವರ್ಷವೂ ಗಣೇಶ ಮಹೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಶಾಲಾ ಕಾಲೇಜಿನ ವಾರ್ಷಿಕೋತ್ಸವಗಳು, ಸಾರ್ವಜನಿಕರ ಇತರೆ ಸಭೆಗಳು ನಡೆದುಕೊಂಡು ಬರುತ್ತಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನಾದ್ಯಂತ ಗೌರಿ ಗಣೇಶ ಹಬ್ಬವನ್ನು ಶನಿವಾರ ಸಂಭ್ರಮದಿಂದ ಆಚರಿಸಿದರು.

ಸಾರ್ವಜನಿಕ ಗಣೇಶೋತ್ಸವ ಆಯೋಜಿಸುವ ಸಂಘ ಸಂಸ್ಥೆಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣಪತಿ ವಿಗ್ರಹಗಳನ್ನು ಶನಿವಾರ ಪ್ರತಿಷ್ಠಾಪಿಸಿದವು. ನಗರ, ಪಟ್ಟಣ ಪ್ರದೇಶಗಳ ಬಡಾವಣೆ, ಗ್ರಾಮಗಳಲ್ಲೂ ಗಣೇಶನನ್ನು ಪೂಜಿಸಿ ಪ್ರತಿಷ್ಠಾಪಿಸಲಾಯಿತು.

ಇತಿಹಾಸ ಪ್ರಸಿದ್ಧವಾಗಿರುವ ಪಾಳೇಗಾರರ ಕೋಟೆ ಗಣಪತಿ, ಕೊತ್ತಲಿನಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ 53ನೇ ವರ್ಷದ ಗಣೇಶೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.

ಅರಕಲಗೂಡಿನ ಪಾಳೇಗಾರ ಕೃಷ್ಣಪ್ಪನಾಯಕನ ಆಳ್ವಿಕೆಯ ಇತಿಹಾಸ ಪ್ರಸಿದ್ಧವಾಗಿರುವ ಕೋಟೆ ಗಣಪತಿ ಕೊತ್ತಲಿಗೆ ಪ್ರತಿದಿನವೂ ನೂರಾರು ಭಕ್ತಾದಿಗಳು ಗಣಪತಿಕೊತ್ತಲಿನ ಗಣಪತಿ ದೇವರ ದರ್ಶನಕ್ಕೆ ಮತ್ತು ಹರಳಿಮರ, ಬನ್ನಿಮರ, ಎಕ್ಕದ ಗಿಡದ ಪೂಜೆಗಾಗಿ ಆಗಮಿಸುವ ಭಕ್ತಿಯ ಸ್ಥಳವಾಗಿದ್ದು, ಕೋಟೆ ಗಣಪತಿ ಕೊತ್ತಲಿನ ಸ್ಥಳದಲ್ಲಿ ಪ್ರತಿವರ್ಷವೂ ಗಣೇಶ ಮಹೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಶಾಲಾ ಕಾಲೇಜಿನ ವಾರ್ಷಿಕೋತ್ಸವಗಳು, ಸಾರ್ವಜನಿಕರ ಇತರೆ ಸಭೆಗಳು ನಡೆದುಕೊಂಡು ಬರುತ್ತಿದೆ.

ಈ ಬಾರಿ ಸೆ.7ರಿಂದ 27ರವರೆಗೆ ಅಂದರೆ 21 ದಿನಗಳು ಗಣೇಶ ಮಹೋತ್ಸವ ಜರುಗಲಿದೆ. ಪ್ರತಿ ದಿನ ವಿಶೇಷ ಪೂಜೆಗಳು ನಡೆಯಲಿದ್ದು, ಮಧ್ಯಾಹ್ನ ಪ್ರಸಾದ ವಿತರಿಸಲಾಗುತ್ತದೆ. ಇನ್ನು ಈ ವಿಶೇಷ ಪೂಜೆಯಲ್ಲಿ ನಗರದ ಅನೇಕ ಭಕ್ತರು ಸರತಿಯಲ್ಲಿ ಬಂದು ಗಣಪನ ದರ್ಶನ ಪಡೆದು ತನ್ನ ಇಷ್ಟಾರ್ಥಗಳನ್ನು ಬೇಡಿಕೊಂಡರು. ಪಾಳೇಗಾರ ಕೃಷ್ಣಪ್ಪನಾಯಕನ ಕೋಟೆಯ ಗಣಪತಿ ಕೊತ್ತಲಿನಲ್ಲಿ ಸೆ.7ರಂದು ಮಧ್ಯಾಹ್ನ 12ರಿಂದ 1ಗಂಟೆಯವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ರಾಜಾ ದರ್ಬಾರ್‌ನಲ್ಲಿ ಕುಳಿತಿರುವ 53ನೇ ವರ್ಷದ ಶ್ರೀ ಗಣಪತಿಯವರ ಭವ್ಯ ಮೂರ್ತಿಯನ್ನು ಪೂಜಾ ಕೈಂಕರ್ಯದೊಂದಿಗೆ ಪ್ರತಿಷ್ಠಾಪಿಸಲಾಯಿತು. 27ರವರೆಗೆ ಪ್ರತಿ ನಿತ್ಯವೂ ಸಹಸ್ರ ನಾಮಾರ್ಚನೆ, ಕುಂಕುಮಾರ್ಚನೆ, ಅಷ್ಟೋತ್ತರ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ರಾತ್ರಿ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ರಾಮನಾಥಪುರ, ಕೊಣನೂರು, ಬಸವಾಪಟ್ಟಣ, ಕೇರಳಾಪುರ ಸೇರಿದಂತೆ ಪ್ರತಿ ಗ್ರಾಮದಲ್ಲೂ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

.