ಗೌರಿ ಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳ (ಶೋಭಾ ಯಾತ್ರೆ) ವಿಸರ್ಜನೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.

ನಾಪೋಕ್ಲು ; ಗೌರಿ ಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳ (ಶೋಭಾ ಯಾತ್ರೆ) ವಿಸರ್ಜನೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.

ವೆಂಕಟರಮಣ ದೇವಸ್ಥಾನದ ಸಮಿತಿ: ಕಕ್ಕುಂದ ಕಾಡಿನ ವೆಂಕಟರಮಣ ದೇವಸ್ಥಾನದ ಗಣಪತಿ ಸೇವಾ ಸಮಿತಿ ವತಿಯಿಂದ 21ನೇ ವರ್ಷದ ಅದ್ದೂರಿ ಗೌರಿ ಗಣೇಶ ಉತ್ಸವ ನಡೆಯಿತು. ವಿಟ್ಲದ ಕಲಾ ರಸಿಕರ ಹಾರ್ಟ್ ರಂಗ್ ದ ಮಜಲ್ ತಂಡದಿಂದ ತಂಡದ ಡೊಳ್ಳು ಕುಣಿತ ಹಾಗೂ ಕೀಲು ಗೊಂಬೆ ಸೇರಿದಂತೆ ವಿವಿಧ ಕಲಾತಂಡಗಳ ನೃತ್ಯದೊಂದಿಗೆ ಅಲಂಕೃತ ಮಂಟಪಗಳ ಮೆರವಣಿಗೆ ಸಾಗಿ ಜನಮನ ರಂಜಿಸಿತು.ಇಂದಿರಾನಗರದ ಸಮಿತಿ: ಇಂದಿರಾನಗರ ವಿವೇಕಾನಂದ ಸಂಘದ ಗಣೇಶೋತ್ಸವ ಸೇವಾ ಸಮಿತಿಯ 21.ನೇ ವರ್ಷದ ಉತ್ಸವದಲ್ಲಿ ಸ್ಥಳೀಯರಿಂದ ಹಾಡುಗಾರಿಕೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರವಿ ಬಳಗದಿಂದ ಸಂಗೀತ ಸಂಜೆ ಜರುಗಿತು. ವಿಸರ್ಜನೆ ಸಂದರ್ಭ ಅಲಂಕೃತ ಭವ್ಯ ಮಂಟಪದಲ್ಲಿ ಪ್ರಶಾಂತ್ ಮಡಿಕೇರಿ ಲೈಟಿಂಗ್ಸ್ ಅರುಣ್ ತಂಡದಿಂದ ಸೌಂಡ್ಸ್ ಆದಿವಾಸಿ ಬಳಗದಿಂದ ಕುಣಿತ ಮನೋರಂಜನ ಕಾರ್ಯಕ್ರಮಗಳೊಂದಿಗೆ ಯಾತ್ರೆ ನಡೆಯಿತು. ಈ ಸಂದರ್ಭ ಚಲಿಸುವ ಪೌರಾಣಿಕ ಕಥಾ ರೂಪಕ ವಿಘ್ನ ನಿವಾರಕ ಸತಮಹಿಸಿ ಸಂಹಾರ , ಆಕರ್ಷಕ ಮಂಟಪ ಹಾಗೂ ಪಟಾಕಿ ಚಿತ್ತಾರಗಳು ಗಮನ ಸೆಳೆದವು.

ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿ: ಹಳೆತಾಲೂಕಿನ ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿಯ 17.ನೇ ವರ್ಷದ ಉತ್ಸವದಲ್ಲಿ ಮಡಿಕೇರಿಯ ತಂಡದಿಂದ ಚಲಿಸುವ ಬೃಹತ್ ಗಾತ್ರದ ದೇವತೆ ಹಾಗೂ ರಾಕ್ಷಸರ ಪ್ರತಿರೂಪಗಳನ್ನೊಳಗೊಂಡ ಗಣೇಶನ ಕಥಾವಸ್ತು ಪ್ರದರ್ಶನಗೊಂಡಿತು. ಆದಿವಾಸಿ ಬಳಗದಿಂದ ಕುಣಿತ, ಬೆಂಗಳೂರಿನ ತಂಡದ ಆಕರ್ಷಕ ಲೈಟಿಂಗ್ಸ್, ಸೌಂಡ್ಸ್ ಹಾಗೂ ಸಿಡಿಮದ್ದು ಪ್ರದರ್ಶನ ನಡೆಯಿತು.

ನಾಪೋಕ್ಲುನಾಡು ಗೌರಿ ಗಣೇಶ ಸಮಿತಿ ವತಿಯಿಂದ ಹಳೆತಾಲೂಕಿನ ಭಗವತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮಂಟಪ ಹಾಗೂ ಶ್ರೀರಾಮ ಟ್ರಸ್ಟ್ ವತಿಯಿಂದ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಯ ಮಂಟಪಗಳು ಮೆರವಣಿಗೆಯ ವೈಭವಕ್ಕೆ ಮೆರಗು ತಂದವು.

ವಿವಿಧ ಸಮಿತಿಗಳ ಗೌರಿ ಗಣೇಶ ಮೂರ್ತಿಗಳನ್ನು ಆಕರ್ಷಕ ಕಲಾತಂಡಗಳ ವೇಷಭೂಷಣ ಮತ್ತು ನೃತ್ಯದೊಂದಿಗೆ, ಸಾರ್ವಜನಿಕರ ಉಲ್ಲಾಸದ ನಡುವೆ ಅಲಂಕೃತ ವಾಹನಗಳಲ್ಲಿ ಕೊಂಡೊಯ್ದು ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.ಶೋಭಾ ಯಾತ್ರೆ ಸಂದರ್ಭಮುಸ್ಲಿಂ ಬಾಂಧವರು ತಂಪು ಪಾನೀಯ ಹಾಗೂ ಸಿಹಿ ಹಂಚಿದ್ದು ವಿಶೇಷವಾಗಿತ್ತು.. ಮಾಜಿ

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಎ ಇಸ್ಮಾಯಿಲ್ಬಲ್, ಬ್ಲೂ ಬಾಯ್ಸ್‌ ತಂಡ ನಾಪೋಕ್ಲು ಅಬ್ದುಲ್ಲ, ನೌಫಲ್, ಫಾರೂಕ್

,ಹಾರಿಸ್, ನೌಶಾದ್, ಶಫೀಕ್, ರಝಕ್, ಸೌಕಾತ್, ಝುಬೈರ್, ಇಶಾಕ್, ರಫೀಕ್, ರಿಜ್ವಾನ್, ನೌಫಲ್, ನೌಶದ್ ಮತ್ತು ಮನ್ಸೂರ್, ರಜಾಕ್ ಇನ್ನಿತರರು ಸಹಬಾಳ್ವೆಗೆ ಸಾಕ್ಷಿಯಾದರು.