ಸಾರಾಂಶ
ಗಣೇಶ ಹಬ್ಬ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ನಂಟು ಹೊಂದಿದೆ. ಗಣೇಶ ಚತುರ್ಥಿಯನ್ನು ಸಮಾಜದಲ್ಲಿ ಸಾಮೂಹಿಕ ಹಬ್ಬವನ್ನಾಗಿ ಮಾಡುವ ಮೂಲಕ ಸೌಹಾರ್ದಯುತವಾಗಿ ಆಚರಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಗಣೇಶ ಹಬ್ಬ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ನಂಟು ಹೊಂದಿದೆ. ಗಣೇಶ ಚತುರ್ಥಿಯನ್ನು ಸಮಾಜದಲ್ಲಿ ಸಾಮೂಹಿಕ ಹಬ್ಬವನ್ನಾಗಿ ಮಾಡುವ ಮೂಲಕ ಸೌಹಾರ್ದಯುತವಾಗಿ ಆಚರಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಸತತವಾಗಿ ೩ನೇ ವರ್ಷದ ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಮಾತನಾಡಿದರು.ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಜಿಲ್ಲಾ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಕೆಎಂಎಫ್ ಮಾಜಿ ನಿರ್ದೆಶಕ ಸಂಜಯ ತಳೇವಾಡ, ಕಲ್ಮೇಶ ಸಾರವಾಡ, ಪರಮಾನಂದ ಕುಟ್ರಟ್ಟಿ, ಯುವ ಮುಖಂಡ ಗುರುರಾಜ ಉದಪುಡಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಹಾಗೂ ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ರಫೀಕ್ ಬೈರಕದಾರ, ಅಯ್ಯಪ್ಪಗೌಡ ಪಾಟೀಲ, ಹೊಳಬಸು ದಂಡಿನ, ಯಶವಂತ ಮಾದರ, ನಬಿ ಹಾಜಿಬಾಯಿ, ಮಹಾ ಗಣಪತಿ ಉತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.