ಪಕ್ಕಲಡ್ಕ ಕಾಂಗ್ರೆಸ್ ಸೇವಾದಳದ ಆಶ್ರಯದಲ್ಲಿ ೧೬ನೇ ವರ್ಷದ ಗಣೇಶೋತ್ಸವ ಪಕ್ಕಲಡ್ಕದಲ್ಲಿ ಜರಗಿತು. ನಿವೃತ್ತ ಪೊಲೀಸ್ ಅಧಿಕಾರಿ ಮುಕುಂದ ನಾಯ್ಕ್ ಪ್ರಗತಿ ನಗರ ಇವರು ದೀಪ ಪ್ರಜ್ವಲಿಸಿದರು. ಗಣಹೋಮ, ಭಜನಾ ಕಾರ್ಯಕ್ರಮ ಕ್ರೀಡೆ, ಸಂಗೀತ, ಚಿತ್ರಕಲಾ ಸ್ಪರ್ಧೆಗಳು ಜರಗಿದವು. ರವೀಂದ್ರ ಸೇಮಿತರು ಉಪಸ್ಥಿತರಿದ್ದರು.
ಮಂಗಳೂರು: ಪಕ್ಕಲಡ್ಕ ಕಾಂಗ್ರೆಸ್ ಸೇವಾದಳದ ಆಶ್ರಯದಲ್ಲಿ ೧೬ನೇ ವರ್ಷದ ಗಣೇಶೋತ್ಸವ ಪಕ್ಕಲಡ್ಕದಲ್ಲಿ ಜರಗಿತು. ನಿವೃತ್ತ ಪೊಲೀಸ್ ಅಧಿಕಾರಿ ಮುಕುಂದ ನಾಯ್ಕ್ ಪ್ರಗತಿ ನಗರ ಇವರು ದೀಪ ಪ್ರಜ್ವಲಿಸಿದರು. ಗಣಹೋಮ, ಭಜನಾ ಕಾರ್ಯಕ್ರಮ ಕ್ರೀಡೆ, ಸಂಗೀತ, ಚಿತ್ರಕಲಾ ಸ್ಪರ್ಧೆಗಳು ಜರಗಿದವು. ರವೀಂದ್ರ ಸೇಮಿತರು ಉಪಸ್ಥಿತರಿದ್ದರು.
ಸಂಜೆ ಧಾರ್ಮಿಕ ಸಭೆ ಹಾಗೂ ಅಕ್ಕಿ ವಿತರಣಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜೊಕೀಂ ಡಿಸೋಜ ನೆರವೇರಿಸಿದರು. ನೂರು ಮಂದಿ ತೀರಾ ಬಡವರಿಗೆ ಅಕ್ಕಿ ವಿತರಿಸಲಾಯಿತು. ಅತಿಥಿಗಳಾಗಿ ಸೇವಾದಳದ ಜಿಲ್ಲಾ ಕಾರ್ಯದರ್ಶಿ ರೊನಾಲ್ಡ್ ಕರ್ಕಡ, ನಾಗರಾಜ, ಜಯ ಶೆಟ್ಟಿ, ನವೀನ್ ಸಾಲಿಯಾನ್, ನಾಗೇಶ್ ಶೆಟ್ಟಿ ತೊಕ್ಕೊಟ್ಟು ಆಗಮಿಸಿದ್ದರು. ಹಾಗೂ ಪೊಲಿ ಡಿಸೋಜ ಉಪಸ್ಥಿತರಿದ್ದರು. ಬಾಲ ಸೇವಾದಳದ ಮಕ್ಕಳು ಹಾಗೂ ಲಕ್ಷ್ಮಣ ಪಾಣೆ ಮಂಗಳೂರು, ಸುಧಾ ಅಳಪೆ, ಭಾಸ್ಕರ ಕರ್ಮರ, ಹರಿಶ್ಚಂದ್ರ ಶೆಟ್ಟಿ, ನಾರಾಯಣ ಕುಡ್ತಡ್ಕ, ಪ್ರಸಾದ್ ಅಳಪೆ, ಪ್ರಸಾದ್ ತೊಕ್ಕೊಟ್ಟು, ಕಿಶೋರ್ ಎಕ್ಕೂರು, ನಾರಾಯಣ ರೈ ಕುತ್ತಡ್ಕ, ವಿಜಯ, ನವನೀತ್ ಶೆಟ್ಟಿಯವರನ್ನು ಗೌರವಿಸಲಾಯಿತು. ದಯಾನಂದ ಕುಂಟಲಗುಡ್ಡೆಯವರ ೨೧ ಹುಲಿವೇಷಗಳ ತಂಡ ಪ್ರದರ್ಶನ ನೀಡಿತು.
ಕಾರ್ಯಕ್ರಮಕ್ಕೆ ನೆರವು ನೀಡಿದ ಪ್ರಕಾಶ್ ಬೀಡಿ, ಮಾಜೀ ಶಾಸಕ ಜೆ.ಆರ್. ಲೋಬೊ, ಮಾಜಿ ಮೇಯರ್ ದಿವಾಕರ್, ಗಣೇಶ್ ಬಜಾಲ್, ಪೋಲಿ ಡಿಸೋಜ, ರೊನಾಲ್ಡ್ ಕರ್ಕಡ ಇವರನ್ನು ಅಭಿನಂದಿಸಲಾಯಿತು. ರಾಜ್ಯ ಸೇವಾದಳದ ಸಂಘಟಕ ಮಾಜಿ ಕಾರ್ಪೋರೇಟರ್ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಯಾತ್ರೆ ಬಜಾಲು ಮೂಲಕ ಗಣೇಶ ವಿಗ್ರಹವನ್ನು ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.