ನಿಟುವಳ್ಳಿಯಲ್ಲಿ ಗ್ಯಾಂಗ್‌ ರೇಪ್‌ ಅಂತಾ ಸುಳ್ಳು ಪೋಸ್ಟ್‌: ಎಸ್‌ಪಿ ನೋಟಿಸ್‌!

| Published : Sep 09 2024, 01:40 AM IST

ನಿಟುವಳ್ಳಿಯಲ್ಲಿ ಗ್ಯಾಂಗ್‌ ರೇಪ್‌ ಅಂತಾ ಸುಳ್ಳು ಪೋಸ್ಟ್‌: ಎಸ್‌ಪಿ ನೋಟಿಸ್‌!
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿಟುವಳ್ಳಿ ಭಾಗದಲ್ಲಿ ಸೆ.1ರಂದು ಸಂಜೆ 7ರ ವೇಳೆ ಗ್ಯಾಂಗ್ ರೇಪ್ ಆಗಿದ್ದು, ಯುವತಿಯರು ಅನಗತ್ಯವಾಗಿ ಓಡಾಡಬೇಡಿ, ವಿಶೇಷವಾಗಿ ಒಬ್ಬಂಟಿಯಾಗಿ ಸಂಚರಿಸಬೇಡಿ ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಸುಳ್ಳು ಪೋಸ್ಟ್‌ವೊಂದು ಹರಿದಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ

- ಸುಳ್ಳು ಸುದ್ದಿ ಹರಡಿದ್ದ ವಿದ್ಯಾರ್ಥಿನಿ, ಪಾಲಕರಿಗೆ ಇಲಾಖೆಯಿಂದ ಅರಿವು - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿಟುವಳ್ಳಿ ಭಾಗದಲ್ಲಿ ಸೆ.1ರಂದು ಸಂಜೆ 7ರ ವೇಳೆ ಗ್ಯಾಂಗ್ ರೇಪ್ ಆಗಿದ್ದು, ಯುವತಿಯರು ಅನಗತ್ಯವಾಗಿ ಓಡಾಡಬೇಡಿ, ವಿಶೇಷವಾಗಿ ಒಬ್ಬಂಟಿಯಾಗಿ ಸಂಚರಿಸಬೇಡಿ ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಸುಳ್ಳು ಪೋಸ್ಟ್‌ವೊಂದು ಹರಿದಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ವಿದ್ಯಾರ್ಥಿನಿಯೊಬ್ಬಳು ತನ್ನ ಇನ್‌ಸ್ಟಾಗ್ರಾಂನಲ್ಲಿ ನಿಟುವಳ್ಳಿ ಪ್ರದೇಶದಲ್ಲಿ ಗ್ಯಾಂಗ್ ರೇಪ್ ಆಗಿದೆ, ಯುವತಿಯರು ಅನಗತ್ಯವಾಗಿ ಓಡಾಡಬೇಡಿ, ಒಬ್ಬಂಟಿಯಾಗಿ ಸುತ್ತಾಡಬೇಡಿ ಎಂಬುದಾಗಿ ಪೋಸ್ಟ್ ಮಾಡಿದ್ದಳು. ಈ ವಿಚಾರ ಸಹಜವಾಗಿಯೇ ಸಾರ್ವಜನಿಕರು, ಪೊಲೀಸ್ ಇಲಾಖೆಗೂ ಆತಂಕಕ್ಕೆ ನೂಕಿತ್ತು.

ಪೋಸ್ಟ್‌ ಬೆನ್ನುಹತ್ತಿದ ಇಲಾಖೆ ಎಲ್ಲ ಕಡೆ ಪರಿಶೀಲಿಸಿದ್ದಲ್ಲದೇ, ಪೋಸ್ಟ್‌ ಮಾಡಿದ್ದ ವಿದ್ಯಾರ್ಥಿನಿಯನ್ನೂ ಪತ್ತೆ ಹಚ್ಚಿತು. ಅನಂತರ ಸುಳ್ಳು ಪೋಸ್ಟ್ ಎಂಬುದು ಬಯಲಾಗಿ ಪೊಲೀಸ್ ಇಲಾಖೆ ನಿದ್ದೆಗೆಡಿಸಿದ್ದ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರಿಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಖಡಕ್ ಇಲಾಖೆಯಿಂದ ಎಚ್ಚರಿಕೆ ನೋಟಿಸ್ ನೀಡಿ, ಅರಿವು ಮೂಡಿಸಿದ್ದಾರೆ.

- - - -8ಕೆಡಿವಿಜಿ3:

ದಾವಣಗೆರೆಯಲ್ಲಿ ಗ್ಯಾಂಗ್ ರೇಪ್ ಆಗಿದೆಯೆಂದು ವಿದ್ಯಾರ್ಥಿನಿ ಇನ್ಟ್ರಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವುದು.-8ಕೆಡಿವಿಜಿ4:

ದಾವಣಗೆರೆಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸುಳ್ಳು ಪೋಸ್ಟ್ ಬಗ್ಗೆ ಪೊಲೀಸ್ ಇಲಾಖೆ ಹೊರಡಿಸಿರುವ ಜನಜಾಗೃತಿ ಕರಪತ್ರ.