ಗಜಾಪುರದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಗಂಗಾಮಾತೆ ಪೂಜೆ

| Published : Jun 20 2024, 01:04 AM IST

ಸಾರಾಂಶ

ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಗಂಗೆಯ ಹಬ್ಬ ಆಚರಿಸಿದರು.

ಕೂಡ್ಲಿಗಿ: ಸಮೀಪದ ಗಜಾಪುರ ಗ್ರಾಮದಲ್ಲಿ ಗಂಗಾ ಮತಸ್ಥರು ಹಾಗೂ ಗ್ರಾಮಸ್ಥರು ಕಾರಹುಣ್ಣಿಮೆ ಪ್ರಯುಕ್ತ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಗಂಗಾಮಾತೆ ಪೂಜೆ ಮಾಡಲಾಯಿತು. ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಗಂಗೆಯ ಹಬ್ಬ ಆಚರಿಸಿದರು.ಗ್ರಾಮದ ಗಂಗಾಮಾತೆ ದೇವಸ್ಥಾನದಿಂದ ಮೆರವಣಿಗೆ ಮೂಲಕ ಮಹಿಳೆಯರು, ಗ್ರಾಮಸ್ಥರು ಕೂಡ್ಲಿಗಿ ರಸ್ತೆಯ ಕಲ್ಲುಬಾವಿವರೆಗೆ ನಡೆದು ನಂತರ ಅಲ್ಲಿ ಗಂಗಾಪೂಜೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಗಂಗಾಮಾತೆಯ ಪಾದಗಟ್ಟೆಗೆ ಭಕ್ತರು ಪೂಜೆ, ಹರಕೆ ಸಲ್ಲಿಸಿದರು.

ನಂತರ ಮೆರವಣಿಗೆ ಮೂಲಕ ಗಂಗಾಮಾತೆ ದೇವಸ್ಥಾನಕ್ಕೆ ಬರಲಾಯಿತು. ಗಂಗಾಮಾತೆಯ ದೇವಸ್ಥಾನದಲ್ಲಿಯೂ ಪೂಜೆ ಸಲ್ಲಿಸುವ ಮೂಲಕ ಅಲ್ಲಿಯೂ ಧಾರ್ಮಿಕ ವಿಧಿ ವಿಧಾನಗಳ ಪೂಜಾ ಕೈಂಕರ್ಯ ನೆರವೇರಿತು. ನಂತರ ಗ್ರಾಮದ ಮಹಿಳೆಯರು ಗಂಗಾಮಾತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಭಕ್ತಿ ಅರ್ಪಿಸಿದರು. ಭಕ್ತರು ಈ ವರ್ಷ ಮಳೆ ಚೆನ್ನಾಗಿ ಬರಲಿ, ಫಸಲು ಹೆಚ್ಚಾಗಲಿ ಎಂದು ಶ್ರೀ ಗಂಗಾಮಾತೆಯನ್ನು ಬೇಡಿಕೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಗಾಳೆಪ್ಪನವರ ವೆಂಕಟೇಶ್, ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್ ಅಧ್ಯಕ್ಷ ಬಾರಿಕರ ಮಂಜುನಾಥ, ಕಾರ್ಯದರ್ಶಿ ಗಾಳೆಪ್ಪನವರ ಭೀಮಪ್ಪ, ಬಿ.ಜೆ.ಆಂಜನೇಯ, ತಿಮ್ಮಲಾಪುರ ಹುಲುಗಪ್ಪ, ಗ್ರಾಪಂ ಮಾಜಿ ಸದಸ್ಯ ಬೆಳದೇರಿ ಮಲ್ಲಿಕಾರ್ಜುನ, ದನಕಾಯವ ಗಾಳೆಪ್ಪ, ನಾಣ್ಯಾಪುರ ಅಂಜಿನಪ್ಪ, ಬಂಡ್ರಿ ಎರ್ರಿಸ್ವಾಮಿ, ಗುಂಡಪ್ಪನವರ ಹನುಮಂತಪ್ಪ, ಬಾರಿಕರ ಕೊಟ್ರಪ್ಪ, ಶ್ಯಾಮನೂರು ಹನುಮಂತಪ್ಪ, ಬಾರಿಕರ ಚಿಕ್ಕಪ್ಪ, ಬಾರಿಕರ ವಿಶ್ವನಾಥ, ನೀರಗಂಟಿ ಪ್ರಕಾಶ್, ಗೊಲ್ಲರಹಳ್ಳಿ ನಾಗರಾಜ, ದೊಡ್ಡಗೂಳೆಪ್ಪನವರ ವಿಶ್ವನಾಥ, ಗಾಳೆಪ್ಪನವರ ಗೋವಿಂದಪ್ಪ, ನಾಗರಾಜ, ಜೋಗಿ ಮಂಜು, ದೊಡ್ಡಮಂಜ, ನಿಡುಗುರ್ತಿ ರಾಜ, ತಿಮ್ಮಲಾಪುರ ರಮೇಶ ಸೇರಿದಂತೆ ಗಜಾಪುರ ಗ್ರಾಮದ ಗಂಗಾಮತಸ್ಥರು ಹಾಗೂ ಗ್ರಾಮದ ಮುಖಂಡರು ಪೂಜೆ ಕಾರ್ಯದಲ್ಲಿ ಭಾಗವಹಿಸಿದ್ದರು.