ಇಲ್ಲಿಯ ವೀರಸಿಂಧೂರ ಲಕ್ಷ್ಮಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆನೇಮೆಳೆ ಪಾಳ್ಯದ ಗಂಗರಂಗಯ್ಯ, ಉಪಾಧ್ಯಕ್ಷರಾಗಿ ಚಿಕ್ಕಶೆಟ್ಟೀಕೆರೆಯ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಇಲ್ಲಿಯ ವೀರಸಿಂಧೂರ ಲಕ್ಷ್ಮಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆನೇಮೆಳೆ ಪಾಳ್ಯದ ಗಂಗರಂಗಯ್ಯ, ಉಪಾಧ್ಯಕ್ಷರಾಗಿ ಚಿಕ್ಕಶೆಟ್ಟೀಕೆರೆಯ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.ಇದೇ ವೇಳೆ ವೀರಸಿಂಧೂರ ಲಕ್ಷ್ಮಣ ಪತ್ತಿನ ಸಹಕಾರ ಸಂಘದ ನೂತನ ಪದಾದಿಕಾರಿಗಳ ಆಯ್ಕೆಯೂ ಆಯಿತು. ದೊಡ್ಡೇನಹಳ್ಳಿ ಕೆಂಪರಾಜು, ಹಬುಕನಹಳ್ಳಿ ವಸಂತಕುಮಾರ್, ಮಾಯಸಂದ್ರ ಕಲ್ಪನಾ ಮುನಿರಾಜು, ಬೊಮ್ಮೇನಹಳ್ಳಿ ರೇಣುಕಪ್ಪ, ತುರುವೇಕೆರೆ ಪಟ್ಟಣದ ಕೃಷ್ಣಪ್ಪ, ಶಾಂತಮ್ಮ, ಕಾಂತರಾಜು, ಹುಲ್ಲೇಕೆರೆ ಎಚ್.ಎಸ್.ನಾಗರಾಜು, ಬ್ಯಾಡರಕೊಡಗೀಹಳ್ಳಿಯ ಶಂಕರಯ್ಯ, ಗೋವಿಂದಯ್ಯ, ಇಳ್ಳೇನಹಳ್ಳಿ ಕಾವಲ್ ನ ರಂಗಸ್ವಾಮಿ ಯವರನ್ನು ಆಯ್ಕೆಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ಸಿಡಿಓ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು. ಸಹಕಾರ ಸಂಘದ ಕಾರ್ಯದರ್ಶಿ ಶಿವಣ್ಣ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರನ್ನು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ವಸಂತಕುಮಾರ್, ಮುಖಂಡರಾದ ಸೋಮಶೇಖರ್, ಆನಂದರಾಜು, ನಾಗೇಶ್, ಆನೆಮೆಳೆ ನಂಜುಂಡಪ್ಪ, ಶಿವಣ್ಣ ಸೇರಿದಂತೆ ಹಲವರು ಅಭಿನಂದಿಸಿದರು.