ಮಂಗಳೂರು: ಗಾಣಿಗ ಸಮುದಾಯ ಸೇವಾ ಸಂಘ ಮಂಗಳೂರು ವತಿಯಿಂದ ಸಂಘದ ಮಹಿಳಾ ಘಟಕ ಹಾಗೂ ಯುವ ವೇದಿಕೆಯ ಸಹಭಾಗಿತ್ವದಲ್ಲಿ ನಂತೂರು ಭಾರತಿ ಕಾಲೇಜಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭ ನಡೆಯಿತು.
ಸಂಘದ ಅಧ್ಯಕ್ಷ ಕೃಷ್ಣ ಡಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗಾಣಿಗ ಸಮುದಾಯ ಸಂಘದ ಸ್ಥಾಪಕಾಧ್ಯಕ್ಷ ಕೆ.ರಾಮ ಮುಗೋಡಿ, ಕೋಶಾಧಿಕಾರಿ ಉದಯ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಪಿ.ಎಸ್. ಮತ್ತಿತರರು ಇದ್ದರು. ಕಾರ್ಯದರ್ಶಿ ಬಾಲಕೃಷ್ಣ ಬಾರಿಕ್ಕಾಡ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರವಿಚಂದ್ರ ವಂದಿಸಿದರು. ಮೇಘನಾ ಹಾಗೂ ಅಶ್ವಿನಿ ನಿರೂಪಿಸಿದರು.ಶೈಕ್ಷಣಿಕ ಸಾಧಕ ವಿದ್ಯಾರ್ಥಿನಿಯರಾದ ಬಿ.ಸುಶ್ಮಿತ, ರಕ್ಷಿತ ಕೆ., ಶರಣ್ಯ ಪಿ.ಜಿ. ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು. ಹಾಗೂ ಹಿರಿಯರಾದ ಸೀತು ಹಾಗೂ ವಿವಿಧ ಸಹಕಾರ ಕ್ಷೇತ್ರಗಳಲ್ಲಿ ನಿರ್ದೇಶಕರು, ಉಪಾಧ್ಯಕ್ಷರು, ಅಧ್ಯಕ್ಷರು ಮುಂತಾದ ಜವಾಬ್ದಾರಿ ನಿರ್ವಹಿಸಿ ಪ್ರಸ್ತುತ ಕ್ಯಾಂಪ್ಕೋ ನಿರ್ದೇಶಕ ಗಣೇಶ ಪಾರಕಟ್ಟ ಅವರನ್ನು ಅಭಿನಂದಿಸಲಾಯಿತು.ಗಾಣಿಗ ಸಮುದಾಯ ಸೇವಾ ಸಂಘ: ಆಟಿಡೊಂಜಿ ದಿನ
ಗಾಣಿಗ ಸಮುದಾಯ ಸೇವಾ ಸಂಘ ಮಂಗಳೂರು ವತಿಯಿಂದ ಸಂಘದ ಮಹಿಳಾ ಘಟಕ ಹಾಗೂ ಯುವ ವೇದಿಕೆಯ ಸಹಭಾಗಿತ್ವದಲ್ಲಿ ನಂತೂರು ಭಾರತಿ ಕಾಲೇಜಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
