ಪಟ್ಟಣದ ಬಿಹೆಚ್ ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿ ಸಮೀಪ ಬೃಹತ್ ಗಾತ್ರದ ಗಾಂಜಾ ಗಿಡ ಪತ್ತೆಯಾಗಿದ್ದು ಸಾಗರದ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿದೆ. ಜನರ ಓಡಾಟ ಕಡಿಮೆಯಿರುವ ಒಳ ರಸ್ತೆಯಲ್ಲಿ ಗಾಂಜಾ ಗಿಡ ಪತ್ತೆಯಾಗಿದ್ದು ವ್ಯವಸ್ಥಿತವಾಗಿ ಬೀಜ ಬಿತ್ತಿ ಗಿಡ ಬೆಳೆಸಲಾಗುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ಸಾಗರ: ಪಟ್ಟಣದ ಬಿಹೆಚ್ ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿ ಸಮೀಪ ಬೃಹತ್ ಗಾತ್ರದ ಗಾಂಜಾ ಗಿಡ ಪತ್ತೆಯಾಗಿದ್ದು ಸಾಗರದ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿದೆ. ಜನರ ಓಡಾಟ ಕಡಿಮೆಯಿರುವ ಒಳ ರಸ್ತೆಯಲ್ಲಿ ಗಾಂಜಾ ಗಿಡ ಪತ್ತೆಯಾಗಿದ್ದು ವ್ಯವಸ್ಥಿತವಾಗಿ ಬೀಜ ಬಿತ್ತಿ ಗಿಡ ಬೆಳೆಸಲಾಗುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಜನನಿಬಿಡ ಪ್ರದೇಶವಾಗಿರುವ ಇದು ಮಾದಕ ವ್ಯವಸನಿಗಳ ಅಡ್ಡೆಯಾಗಿದೆಯಾ ಎನ್ನುವ ಸಂಶಯವೂ ಬರುತ್ತಿದೆ. ಗಿಡ ದೊಡ್ಡದಾಗಿ ಬೆಳೆಯುವವರೆಗೂ ಯಾರ ಕಣ್ಣಿಗೂ ಬೀಳದಿರುವುದು ಆಶ್ಚರ್ಯವನ್ನುಂಟುಮಾಡಿದ್ದು ಗಾಂಜಾ ಜಾಲಕ್ಕೆ ಯುವ ಸಮುದಾಯ ಬಲಿಯಾಗುವ ಮುನ್ನ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.