ಉತ್ತಮ ಸಂದೇಶ ನೀಡುವ ಗಣಪತಿಗೆ ಪ್ರಶಸ್ತಿ: ಕವಿತಾ ಸಿಂಗ್‌

| Published : Sep 07 2024, 01:35 AM IST

ಸಾರಾಂಶ

ಎರಡು ಮತ್ತು ಮೂರನೇ ಬಹುಮಾನಗಳಿಗೆ ಕ್ರಮವಾಗಿ ₹15 ಸಾವಿರ ಮತ್ತು ₹10 ಸಾವಿರ ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು.

ಹೊಸಪೇಟೆ: ಪರಿಸರ ಸ್ನೇಹಿ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಗಣಪತಿ ಪ್ರತಿಷ್ಠಾಪಿಸಿದ ಯುವಮಂಡಳಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಲಾಗುವುದು ಎಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರಸಿಂಗ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಉತ್ತಮ ಸಂದೇಶ ನೀಡುವ ಮತ್ತು ಪರಿಸರಕ್ಕೆ ಹಾನಿಕಾರಕ ಅಲ್ಲದ ಗಣಪತಿ ಪ್ರತಿಷ್ಠಾಪನೆ ಮಾಡಿದ ಯುವಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ‘ತಾಯಮ್ಮ ಸಿದ್ಧಿವಿನಾಯಕ ಪ್ರಶಸ್ತಿ’ ನೀಡಲು ನಿರ್ಧರಿಸಿದ್ದು, ಪ್ರಥಮ ಬಹುಮಾನ ₹20 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ಎರಡು ಮತ್ತು ಮೂರನೇ ಬಹುಮಾನಗಳಿಗೆ ಕ್ರಮವಾಗಿ ₹15 ಸಾವಿರ ಮತ್ತು ₹10 ಸಾವಿರ ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು. ಜತೆಗೆ ವಿಶೇಷವಾಗಿ ಜನಾಕರ್ಷಣೆ ಗಳಿಸಿದ ಗಣಪತಿಗೆ ವಿಶೇಷ ಬಹುಮಾನ ₹15 ಸಾವಿರ ನೀಡಲು ತೀರ್ಮಾನಿಸಲಾಗಿದೆ ಎಂದರು.

ಆಯ್ಕೆ ಸಮಿತಿ:

ಪ್ರಶಸ್ತಿಗೆ ಆಯ್ಕೆ ಮಾಡಲು ಎರಡು ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ಸೆ.8, 9ರಂದು ನಗರದಲ್ಲಿ ಸುತ್ತಾಡಿ ಯುವ ಮಂಡಳಿಗಳ ಬಳಿ ತರೆಳಿ, ಪ್ರತಿ ಮಂಡಳಿಗೆ ಹೋಗಿ ವೀಕ್ಷಿಸಿ ಜನರಿಗೆ ಯಾವ ಸಂದೇಶ ಕೊಡುತ್ತಿದ್ದಾರೆ ಎಂಬುದನ್ನು ಪರಿಶೀಲನೆ ನಡೆಸಿ, ಸೆ.10ರಂದು ಆಯ್ಕೆ ಮಾಡಲಿದೆ. ಸೆ.11ರಂದು ಶಾಸಕ ಎಚ್.ಆರ್.ಗವಿಯಪ್ಪ ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಿದ್ದಾರೆ ಎಂದು ತಿಳಿಸಿದರು.

ಪ್ರಶಸ್ತಿಗೆ ಅರ್ಹವಾಗಲು ಪಿಒಪಿ ಗಣಪತಿ ಇರಬಾರದು. ಐದು ಅಡಿ ಎತ್ತರ ಮಾತ್ರ ಇರಬೇಕು. ಮೂರು ಮತ್ತು ಐದನೇ ದಿನದ ಗಣಪತಿಗೆ ಪ್ರಶಸ್ತಿ ನೀಡಲಾಗುತ್ತದೆ. ಇದು ಮೊದಲ ಬಾರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಪರಿಸರ ಸ್ನೇಹಿ ಗಣಪತಿಗೆ ಆದ್ಯತೆ ಕೊಡಬೇಕು. ಇದು ಮುಂದಿನ ಪೀಳಿಗೆಗೆ ಗೊತ್ತಾಗಬೇಕು ಎಂಬ ನಿಟ್ಟಿನಲ್ಲಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಮುಖಂಡರಾದ ಕೆ.ಚಂದ್ರಶೇಖರ್, ರವಿಕಾಂತ್, ರೇಖಾ, ಪ್ರಕಾಶ್ ಮೆಹರ್ ವಾಡೆ, ರಾಧಾ, ಗುಜ್ಜಲ್ ಗಣೇಶ್, ಡಾ.ಮಂಟೂರ್ ಮಠ್, ತಿರುಮಲ, ಅರುಣಕುಮಾರ್, ಶ್ರೀಧರ್, ಲಲಿತಾ, ರಾಘವೇಂದ್ರ, ಸುನೀಲ್ ನಾಯ್ಡು ಮತ್ತಿತರರಿದ್ದರು.